ಚತ್ತಿಸ್ ಗಡ ಸರ್ಕಾರದ ವೆಬ್ ಸೈಟ್ ಹ್ಯಾಕ್ ಮಾಡಿ, ಪಾಕ್ ಧ್ವಜ ಹಾಕಿದ ಪಾಕ್ ಹ್ಯಾಕರ್
ರಾಯಪುರ: ಪಾಕಿಸ್ತಾನ ಹ್ಯಾಕರ್ ಫೈಸಲ್ ಅಫ್ಜಲ್ ಚತ್ತಿಸ್ಘಡ ಸರ್ಕಾರದ ಮುಖ್ಯಮಂತ್ರಿ ಕಚೇರಿಯ ಮತ್ತು ಪಿಡಬ್ಲೂಡಿ ಇಲಾಖೆಯ ವೆಬ್ ಸೈಟ್ ಹ್ಯಾಕ್ ಮಾಡಿ ವಿರೂಪಗೊಳಿಸಿದ್ದಾನೆ. ಅಲ್ಲದೇ ವೆಬ್ ಸೈಟ್ ನಲ್ಲಿ ಪಾಕ್ ಧ್ವಜವನ್ನು ಹಾಕಿ, ನನ್ನನ್ನು ಮರೆಯದಿರಿ ಎಂಬ ಸಂದೇಶವನ್ನು ನೀಡಿದ್ದಾನೆ.
ಸುಮಾರು ಎರಡು ಗಂಟೆ ವೆಬ್ ಸೈಟ್ ಹ್ಯಾಕ್ ಮಾಡಿದ ಹ್ಯಾಕರ್ ಗಳು ‘ನಿತ್ಯ ವೆಬ್ ಸೈಟ್ ಗಳು ಹ್ಯಾಕ್ ಆಗುತ್ತವೆ. ಇವತ್ತು ನಿಮ್ಮ ದಿನ. ನಮ್ಮದು ಪಾಕಿಸ್ತಾನದ ಸೈಬರ್ ದಾಳಿ ಮಾಡುವ ತಂಡ. ನಾವು ಪಾಕಿಸ್ತಾನದ ಹ್ಯಾಕರ್ ಗಳು. ನಿಮ್ಮ ಐಟಿ ತಂತ್ರಜ್ಞರಿಗೆ ಸವಾಲನ್ನು ಒಡುತ್ತೇವೆ. ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ಬೆದರಿಕೆಯ ಸಂದೇಶವನ್ನು ನೀಡಿದ್ದಾನೆ ಹ್ಯಾಕರ್ ಫೈಸಲ್ ಅಫ್ಜಲ್.
ಮಾಹಿತಿ ತಿಳಿಯುತ್ತಲೇ ಕಾರ್ಯಾಚರಣೆಗಿಳಿದ ಸರ್ಕಾರದ ಐಟಿ ತಂಡ, ಕೂಡಲೇ ಕೇಂದ್ರ ತಂತ್ರಜ್ಞಾನ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ವೆಬ್ ಸೈಟ್ ನನ್ನು ತನ್ನ ನಿಯಂತ್ರಣಕ್ಕೆ ಪಡೆದಿದೆ. ಕೆಲ ಗಂಟೆಗಳ ನಂತರ ಮತ್ತೆ ವೆಬ್ ಸೈಟ್ ಕಾರ್ಯಾರಂಭ ಮಾಡಿದೆ. 2015ರಲ್ಲಿ ಚತ್ತಿಘಡ್ ಸರ್ಕಾರದ ವೆಬ್ ಸೈಟ್ ನ್ನು ಫೈಸಲ್ ಹ್ಯಾಕ್ ಮಾಡಿದ್ದ.
Leave A Reply