ಗೋ ಮಾತೆ ಮತಾತೀತಳೆಂದ ಮುಸಲ್ಮಾನ ಮಹಿಳೆ
Posted On December 15, 2017

ಮಂಗಳೂರು: ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಆರಂಭಿಸಿವು ಗೋ ರಕ್ಷಣೆಗಾಗಿ ಅಭಯಾಕ್ಷರ ಸಹಿ ಸಂಗ್ರಹ ಅಭಿಯಾನಕ್ಕೆ ಮುಸ್ಲಿಂ ಮಹಿಳೆ ಶಕೀಲಾ ಪತ್ರಕ್ಕೆ ಸ್ವಯಂ ಪ್ರೇರಿತಳಾಗಿ ಸಹಿ ಮಾಡಿ ಬೆಂಬಲ ಸೂಚಿಸಿದಳು.
ಗೋ ರಕ್ಷಣೆಗಾಗಿ ರಾಷ್ಟ್ರಧ್ಯಂತ ಹಮ್ಮಿಕೊಂಡಿರುವ ಅಭಯಾಕ್ಷರ ಸಹಿ ಸಂಗ್ರಹ ಅಭಿಯಾನಕ್ಕೆ ಮುಸ್ಲಿಂ ಮಹಿಳೆ ಬೆಂಬಲ ನೀಡಿದ್ದು ಶ್ಲಾಘನೆ ವ್ಯಕ್ತವಾಗಿದೆ. ಅಲ್ಲದೇ ಗೋ ರಕ್ಷಣೆಗೆ ಹೊರಟಿರುವ ಶ್ರೀ ರಾಮಚಂದ್ರಪುರ ಮಠದ ಶ್ರೀಗಳಿಗೆ ಹೊಸ ಬಲ ಬಂದಂತಾಗಿದೆ.
ಶಕೀಲಾ ಅಭಯಾಕ್ಷರ ಪತ್ರಕ್ಕೆ ತಾನು ಸಹಿ ಮಾಡಿದಲ್ಲದೇ ಪತಿ ಹಾಗೂ ಮಕ್ಕಳು ಸಹಿ ಮಾಡಲು ಪ್ರೇರಣೆಯಾದಳು.
- Advertisement -
Leave A Reply