ಸಂಸತ್ ಚಳಿಗಾಲದ ಅಧಿವೇಶನ ಆರಂಭ, ತ್ರಿವಳಿ ತಲಾಖ್ ವಿರುದ್ಧ ಕಾನೂನು?
Posted On December 15, 2017
ದೆಹಲಿ: ದೇಶದ ಗಮನ ಸೆಳೆದ ಗುಜರಾತ್ ಚುನಾವಣಾ ಮತದಾನ ಮುಗಿಯುತ್ತಲೇ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದ್ದು ಕೇಂದ್ರ ಸರ್ಕಾರ ಹಲವು ಮಸೂದೆಗಳಿಗೆ ಅಂಗೀಕಾರ ಪಡೆಯುವ ಸಾಧ್ಯತೆಯಿದೆ.
ಅದರಲ್ಲೂ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿ ಆದೇಶ ಹೊರಡಿಸಿದ್ದು, ಈ ಕುರಿತು ಕೇಂದ್ರ ಸರ್ಕಾರ ಕಾನೂನು ರಚಿಸುವ ಮುನ್ಸೂಚನೆಯಿದೆ. ಆದಾಗ್ಯೂ ಕೇಂದ್ರ ಸರ್ಕಾರ ಈಗಾಗಲೇ ತ್ರಿವಳಿ ತಲಾಖ್ ವಿರುದ್ಧದ ಕಾನೂನು ಕರಡು ತಯಾರಿಸಿ ಆಯಾ ರಾಜ್ಯಗಳಿಗೆ ನೀಡಿದ್ದು, ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕರಿಸಿ ಕಾಯಿದೆ ರೂಪಿಸುವ ಎಲ್ಲ ಲಕ್ಷಣಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಡಿಸೆಂಬರ್ 15ರಿಂದ ಜನವರಿ 05ರವರೆಗೆ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರ ಪಡೆಯಲು ಸಾಧ್ಯತೆಯಿರುವ ಮಸೂದೆಗಳ ಪಟ್ಟಿ ಇಲ್ಲಿದೆ.
- ಮುಸ್ಲಿಂ ಮಹಿಳಾ (ಮದುವೆ ರಕ್ಷಣಾ ಹಕ್ಕುಗಳ) ಮಸೂದೆ
- ಸರಕು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ಕರಡು
- ದಿವಾಳಿತನ ಕೋಡ್ ತಿದ್ದುಪಡಿ ಕಾಯಿದೆ
- ಭಾರತೀಯ ಅರಣ್ಯ ತಿದ್ದುಪಡಿ ಕಾಯಿದೆ-2017
- ಅನಿವಾಸಿ ಭಾರತೀಯರಿಗೆ ಮತದಾನ ಮಾಡುವ ಅಧಿಕಾರ ಮಸೂದೆ
- ಶಿಕ್ಷಣದ ಹಕ್ಕು ಎರಡನೇ ತಿದ್ದುಪಡಿ ಮಸೂದೆ-2017
- Advertisement -
Trending Now
ಆವತ್ತು ಮಗಳನ್ನು ಪಕ್ಷಕ್ಕೆ ತೆಗೆದುಕೊಳ್ಳದೇ ಇದ್ದ ಡಿಕೆ ಕಾದಿದ್ದು ತಂದೆಗಾಗಿ!
October 23, 2024
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
Leave A Reply