ಅಕ್ರಮವಾಗಿ ಗೋಮಾಂಸ ಸಾಗಣೆ ಮಾಡುತ್ತಿದ್ದವರಿಗೆ ಸಾರ್ವಜನಿಕರಿಂದಲೇ ಥಳಿತದ ಪಾಠ
ಬೆಳಗಾವಿ: ಇದುವರೆಗೂ ಅಕ್ರಮವಾಗಿ ಗೋವು ಹಾಗೂ ಮಾಂಸ ಮಾಡುವವರನ್ನು ಪೊಲೀಸರು ಹಾಗೂ ಗೋರಕ್ಷಕರು ತಡೆಯುತ್ತಿದ್ದರು. ಆದರೆ ಈ ಬಾರಿ ರಾಯಬಾಗ ತಾಲೂಕಿನ ಚಿಂಚಲಿಯಲ್ಲಿ ಗೊ ಸಾಗಣೆ ಮಾಡುತ್ತಿದ್ದವರನ್ನು ಸಾರ್ವಜನಿಕರೇ ಹಿಡಿದು ಥಳಿಸಿದ್ದಾರೆ.
ಸರಕು ಸಾಗಿಸುವ ಟ್ರಕ್ ನಲ್ಲಿ ಮಾಂಸ ತುಂಬಿಕೊಂಡು ಪಟ್ಟಣದ ಮೂಲಕ ಹಾದುವಾಗ ಪಟ್ಟಣದಲ್ಲಿ ವಾಹನ ನಿಲ್ಲಿಸಿದ ಚಾಲಕರು ಮಾತನಾಡುತ್ತ ನಿಂತಿದ್ದರು. ಆಗ ಸಾರ್ವಜನಿಕರು ಲಾರಿಯತ್ತ ಬರುತ್ತಿರುವುದನ್ನು ಕಂಡ ಗೋ ಸಾಗಣೆ ಮಾಡುವವರು ಗಡಿಬಿಡಿಗೊಂಡಿದ್ದಾರೆ. ಅಲ್ಲದೆ, ಸಾರ್ವಜನಿಕರು ಬರುತ್ತಿರುವುದನ್ನೇ ತಪ್ಪಾಗಿ ತಿಳಿದುಕೊಂಡ ಗೋ ಸಾಗಣೆದಾರರು ವಿಚಲಿತರಾಗಿದ್ದಾರೆ.
ಇದರಿಂದ ನಿಜವಾಗಿಯೂ ಅನುಮಾನಗೊಂಡ ಸಾರ್ಜನಿಕರು ವಾಹನ ಪರಿಶೀಲಿಸಿದಾಗ ಟ್ರಕ್ ನಲ್ಲಿ ಅಪಾರ ಪ್ರಮಾಣದ ಗೋ ಮಾಂಸ ಸಾಗಣೆ ತುಂಬಿರುವುದು ಗೊತ್ತಾಗಿದೆ. ಅಲ್ಲದೆ ಮಾಂಸ ಸಂಸ್ಕರಣೆ ಮಾಡದೆ ಸಾಗಣೆ ಮಾಡುತ್ತಿರುವುದರಿಂದ ರಕ್ತವೆಲ್ಲ ರಸ್ತೆ ಮೇಲೆ ಚೆಲ್ಲಿದ್ದನ್ನು ಕಂಡು ಕುಪಿತರಾದ ಸಾರ್ವಜನಿಕರು ಸಾಗಣೆದಾರರನ್ನು ಥಳಿಸಿದ್ದಾರೆ.
ಅಲ್ಲದೆ ಅಕ್ರಮವಾಗಿ ಗೋಸಾಗಣೆ ಮಾಡುವುದನ್ನು ಖಂಡಿಸಿ ಸಾರ್ವಜನಿಕರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
Leave A Reply