ತೀಸ್ತಾ ಸೆತಲ್ವಾಡ್ ಅರ್ಜಿ ತಿರಸ್ಕರಿಸಿದ ಸುಪ್ರೀಂ, ಬ್ಯಾಂಕ್ ಖಾತೆ ಸ್ಥಗಿತ ಹಿಂಪಡೆತ ಇಲ್ಲ
ದೆಹಲಿ: ಹಣ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಸಿಲುಕಿಕೊಂಡಿದ್ದ ಸಾಮಾಜಿಕ ಚಳವಳಿಗಾರ್ತಿ ತೀಸ್ತಾ ಸೆತಲ್ವಾಡ್ ಗೆ ಹಿನ್ನಡೆಯಾಗಿದ್ದು, ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸಾರ್ವಜನಿಕರ ಹಣ ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ 2015ರಲ್ಲಿ ಅಪರಾಧ ವಿಭಾಗದ ಪೊಲೀಸರು ತೀಸ್ತಾ ಸೆತಲ್ವಾಡ್, ಆಕೆಯ ಗಂಡ ಜಾವೇದ್ ಆನಂದ್ ಹಾಗೂ ಇವರು ನಡೆಸುತ್ತಿದ್ದ ಎನ್ ಜಿಒದ ಬರೋಬ್ಬರಿ ಆರು ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗಿತ್ತು.
ಹಣ ದುರ್ಬಳಕೆ ಮಾಡಿಕೊಂಡಿಲ್ಲ ಹಾಗಾಗಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ತೀಸ್ತಾ ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಕಾರಣ ತೀಸ್ತಾಗೆ ಹಿನ್ನಡೆಯಾಗಿದೆ. ಅಲ್ಲದೆ, ಗುಜರಾತ್ ಹೈಕೋರ್ಟ್ ಸಹ ತೀಸ್ತಾ ಸೆತಲ್ವಾಡ್ ಅರ್ಜಿ ತಿರಸ್ಕರಿಸಿದೆ.
2002ರಲ್ಲಿ ಗುಜರಾತಿನ ಗೋಧ್ರಾದಲ್ಲಿ ನಡೆದ ಗಲಭೆ ಬಳಿಕ ತೀಸ್ತಾ ಸೆತಲ್ವಾಡ್ ಸಾಮಾಜಿಕ ಚಳವಳಿಗಾರ್ತಿಯಾಗಿ ರೂಪುಗೊಂಡಿದ್ದರಲ್ಲದೆ, ಪ್ರಧಾನಿ ನರೇಂದ್ರ ಮೋದಿ (ಆಗ ಗುಜರಾತ್ ಮುಖ್ಯಮಂತ್ರಿ) ಅವರ ವಿರುದ್ಧ ಅಭಿಯಾನವನ್ನೇ ಆರಂಭಿಸಿದ್ದರು.
ಅಲ್ಲದೆ, 2002ರ ಗೋಧ್ರಾ ಗಲಭೆಯ ಸಂತ್ರಸ್ತರಿಗೆ ನೆರವಾಗಲು ಎನ್ ಜಿಒ ಸ್ಥಾಪಿಸಿದ್ದರು. ಆದರೆ ಹೀಗೆ ಎನ್ ಜಿಒ ಸ್ಥಾಪಿಸಿ, ಅದಕ್ಕೆ ಬಂದ ದೇಣಿಗೆ ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಅಪರಾಧ ವಿಭಾಗದ ಪೊಲೀಸರು ತೀಸ್ತಾ ಸೆತಲ್ವಾಡ್ ಅವರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ್ದರು.
Leave A Reply