ಯೋಗಿ ಆದಿತ್ಯನಾಥರದ್ದದು ದಿಟ್ಟ ನಿರ್ಧಾರ, ವರ್ಷಾಂತ್ಯದ ಭೋಜನಕ್ಕಿಲ್ಲ ಮಾಂಸಾಹಾರ!
ಲಖನೌ; ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೆಂದರೇನೆ ಹಾಗೆ. ಅವರು ಸಿಎಂ ಆದ ಬಳಿಕ, ಅಕ್ರಮ ಕಸಾಯಿಖಾನೆಗೆ ಬೀಗ ಹಾಕಿಸಿದರು. ರೈತರ ಸಾಲ ಮನ್ನಾ ಮಾಡಿದರು. ಗಾರ್ಡನ್ ಪ್ರೇಮಿಗಳಿಗೆ ಆ್ಯಂಟಿ ರೋಮಿಯೋ ಸ್ಕ್ವಾಡ್ ರಚಿಸಿದರು. ಹೀಗೆ ಹಲವು ದಿಟ್ಟ ನಿರ್ಧಾರಗಳಿಗೆ ಹೆಸರಾದ ಯೋಗಿ ಆದಿತ್ಯನಾಥರು ಮತ್ತೊಂದು ನಿರ್ಧಾರ ಕೈಗೊಂಡಿದ್ದಾರೆ.
ವರ್ಷಾಂತ್ಯದಲ್ಲಿ ಉತ್ತರ ಪ್ರದೇಶ ಸರ್ಕಾರದಿಂದ ಎಲ್ಲ ಐಎಎಸ್ ಅಧಿಕಾರಿಗಳಿಗೆ ವಿಶೇಷ ಭೋಜನ ಕೂಟ ಏರ್ಪಡಿಸುವುದು ವಾಡಿಕೆ. ಅದರಲ್ಲೂ ಈ ಭೋಜನಕೂಟದಲ್ಲಿ ವಿಧ ವಿಧದ ಮಾಂಸದೂಟ ಮಾಡಿಸುವುದೂ ಸಂಪ್ರದಾಯ.
ಆದರೆ ಈ ಬಾರಿ ಏರ್ಪಡಿಸಿದ್ದ ಔತಣಕೂಟದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಾಂಸದೂಟಕ್ಕೆ ಬ್ರೇಕ್ ಹಾಕಿದ್ದು, ಸಸ್ಯಾಹಾರದ ವ್ಯವಸ್ಥೆ ಮಾಡಿಸಿದ್ದಾರೆ. ಚಿಕನ್, ಮಟನ್ ಬದಲಿಗೆ ಸಸ್ಯಾಹಾರದಲ್ಲೇ ಭೋಜನ ಮುಗಿಸಿದ್ದಾರೆ.
ಕಳೆದ ವರ್ಷ ರಾಜಭವನದಲ್ಲಿ ರಾಜ್ಯಪಾಲ ರಾಮ್ ನಾಯ್ಕ್ ಅವರು ಭೋಜನ ಕೂಟ ಏರ್ಪಡಿಸಿದ್ದು, ವಿಶೇಷ ರೀತಿಯಾಗಿ, ವಿಧವಿಧದ ಮಾಂಸಾಹಾರ ಮಾಡಿಸಿದ್ದರು. ಆದರೆ ಈ ಬಾರಿ ಸರ್ಕಾರದ ದುಡ್ಡಿನಲ್ಲಿ ಅಧಿಕಾರಿಗಳ ಮಾಂಸಾಹಾರಕ್ಕೆ ಮುಖ್ಯಮಂತ್ರಿ ಬ್ರೇಕ್ ಹಾಕಿದ್ದಾರೆ.
Leave A Reply