ಬುದ್ದಿಜೀವಿಗಳೇ ಕೇಳಿ ಸುಷ್ಮಾ ಸ್ವರಾಜ್ ಮುಸ್ಲಿಂ ಮಹಿಳೆಗೆ ಬೆನ್ನುಲುಭಾಗಿ ನಿಂಥ ಕತೆಯಾ..
ದೆಹಲಿ: ವಿದೇಶದಲ್ಲಿ ಭಾರತದ ಯಾವುದೇ ವ್ಯಕ್ತಿ ಸಂಕಷ್ಟದಲ್ಲಿದ್ದರೂ ತಟ್ಟನೇ ನೆರವಿಗೆ ಬರುವ, ನೆನಪಿಗೆ ಬರುವ ಹೆಸರೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಇದೀಗ ಪಾಕಿಸ್ತಾನದಲ್ಲಿ ಟಿಕೆಟ್ ಇಲ್ಲದೆ ಸಿಲುಕಿಕೊಂಡಿರುವ ಮುಸ್ಲಿಂ ಮಹಿಳೆ ಮಹಮ್ಮದಿ ಬೇಗಂ ನೆರವಿಗೆ ಸುಷ್ಮಾ ಸ್ವರಾಜ್ ಬಂದಿದ್ದಾರೆ.
ಮಹಿಳೆ ತಂದೆ ಹೈದರಾಬಾದ ಮೂಲದ ಮಹಮ್ಮದ್ ಅಕ್ಬರ್ ‘ತಮ್ಮ ಮಗಳು ಪಾಕಿಸ್ತಾನದಲ್ಲಿ ಟಿಕೆಟ್ ಇಲ್ಲದೆ ಸಿಲುಕಿಕೊಂಡಿದ್ದಾಳೆ. ಅವಳನ್ನು ರಕ್ಷಿಸಿ. ಅವಳನ್ನು ಮೋಸದಿಂದ 1996ರಲ್ಲಿ ಮಹಮ್ಮದ ಯೂನೂಸ್ ಎಂಬಾತ ಮದುವೆಯಾಗಿ ಕರೆದುಕೊಂಡು ಹೋಗಿದ್ದಾನೆ. ನಂತರ ಅವಳಿಗೆ ಕಿರುಕುಳ ನೀಡಿದ್ದಾನೆ. ಅವಳಿಗೆ ಪಾಲಕರೊಂದಿಗೆ ಸಂಬಮಧವನ್ನು ಸ್ಥಗಿತಗೊಳಿಸಿದ್ದಾನೆ. ನಮ್ಮ ಮಗಳನ್ನು ರಕ್ಷಿಸಿ ಎಂದು 1.55 ನಿಮಿಷದ ವಿಡಿಯೋದಲ್ಲಿ ಮನವಿ ಮಾಡಿದ್ದಾನೆ ಇದಕ್ಕೆ ಸ್ಪಂದಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬೇಗಂ ರಕ್ಷಣೆ ನಮ್ಮ ಹೊಣೆ ಎಂದು ಹೇಳಿದ್ದಾರೆ.
ಮಹಮ್ಮದಿ ಬೇಗಂ ಭಾರತ ಪುತ್ರಿ: ಮಹಿಳೆ ಸಿಲುಕಿರುವ ಮಾಹಿತಿ ದೊರೆತೊಡನೇ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಮಹಮ್ಮದಿ ಬೇಗಂ ಭಾರತ ಪುತ್ರಿ. ಅವಳ ರಕ್ಷಣೆ ನಮ್ಮ ಹೊಣೆ. ಅವಳಿಗೆ ಬೇಕಾದ ಟಿಕೆಟ್ ಇಲ್ಲದಿರುವುದೇ ಸಮಸ್ಯೆಯಾದರೆ ಅದನ್ನು ನಾವು ಸರಿಪಡಿಸುತ್ತೇವೆ. ಅವಳನ್ನು ಭಾರತಕ್ಕೆ ವಾಪಸ್ಸ ಕಳುಹಿಸುವಂತೆ ಮನವಿ ಮಾಡಿದ್ದಾರೆ.
ಪಾಕಿಸ್ತಾನದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿ ಮಹಮ್ಮದಿ ಬೇಗಂ ಭಾರತಕ್ಕೆ ವಾಪಸ್ಸಾಗಲು ಸೂಕ್ತ ಸೌಕರ್ಯ ಮತ್ತು ಸಹಕಾರ ನೀಡಲು ಮನವಿ ಮಾಡಿದ್ದಾರೆ.
Leave A Reply