ಬಲವಂತದ ಮತಾಂತರದ ಗೊತ್ತುವಳಿ ಹೊರಡಿಸಿದ ರಾಜಸ್ಥಾನ ಹೈ ಕೋರ್ಟ್..
ಜೈಪುರ: ರಾಜಸ್ಥಾನದ ಇತ್ತೀಚೆಗೆ ಬಲವಂತದ ಮತಾಂತರದ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ, ಇದಕ್ಕೆ ಕಡಿವಾಣ ಹಾಕಲು ರಾಜಸ್ಥಾನ ಹೈಕೋರ್ಟ್ ನಿರ್ದೇಶನ ನೀಡಿದ್ದು, ಬಲವಂತದ ಮತಾಂತರದ ವಿರುದ್ಧ ಗೊತ್ತುವಳಿ ಹೊರಡಿಸಿದೆ.
ಬಲವಂತಾದ ಮತಾಂತರ ಹಾಗೂ ಮತಾಂತರಗೊಳಿಸಿ ಮದುವೆಯಾಗುವ ನಿದರ್ಶನಗಳ ಕುರಿತು ಯಾವುದೇ ದೂರು ದಾಖಲಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಉಚ್ಚ ನ್ಯಾಯಾಲಯ ಸೂಚಿಸಿದ್ದು, ಮುಸ್ಲಿಂ ಮೂಲಭೂತವಾದಿಗಳಿಗೆ ನಿದ್ದೆ ಕೆಡಿಸಿದೆ.
ಯಾವುದೇ ಮತಾಂತರಗಳು ನಡೆದ ಕುರಿತು ಮಾಹಿತಿ ಇದ್ದರೆ ಕೂಡಲೇ ಆಯಾ ಜಿಲ್ಲಾಧಿಕಾರಿ ಅಥವಾ ತಾಲೂಕು ಆಡಳಿತದ ಗಮನಕ್ಕೆ ತನ್ನಿ. ಮತಾಂತರಗೊಳಿಸಿ ಮದುವೆಯಾದ ಒಂದೇ ವಾರದಲ್ಲಿ ಜಿಲ್ಲಾಧಿಕಾರಿ ನೋಟಿಸ್ ನೀಡಲಿದ್ದಾರೆ ಎಂದು ಜನರಿಗೂ ಕೋರ್ಟ್ ನಿರ್ದೇಶನ ನೀಡಿದೆ.
ಪಾಯಲ್ ಸಾಂಘ್ವಿ ಎಂಬ 22 ವರ್ಷದ ಯುವತಿ ಫಯಾಜ್ ಮೋದಿ ಎಂಬ ಮುಸ್ಲಿಂ ಯುವಕನ ಜತೆ ಮದುವೆಯಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಯುವತಿಯ ಸಹೋದರ ಚಿರಾಗ್ ಸಾಂಘ್ವಿ, ಮತಾಂತರ ಮಾಡಿ ಮದುವೆ ಮಾಡಿಸುವ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಗೊತ್ತುವಳಿ ಹೊರಡಿಸಿದೆ.
ರಾಜಸ್ಥಾನ ಸರ್ಕಾರ ಸಹ ಮತಾಂತರ ತಡೆಯುವ ನಿಟ್ಟಿನಲ್ಲಿ 2006ರಲ್ಲೇ ರಾಜಸ್ಥಾನ ಧರ್ಮ ಸ್ವತಂತ್ರತಾ ಕಾಯಿದೆ ಅಂಗೀಕರಿಸಿ ರಾಷ್ಟ್ರಪತಿಯವರಿಗೆ ಸಲ್ಲಿಸಿದೆಯಾದರೂ, ಇನ್ನೂ ಜಾರಿಯಾಗಿಲ್ಲ. ಆದರೂ ರಾಜಸ್ಥಾನ ಹೈಕೋರ್ಟ್ ಹೊರಡಿಸಿರುವ ಗೊತ್ತುವಳಿಯಿಂದ ಮತಾಂತರಕ್ಕೆ ಕಡಿವಾಣ ಬೀಳಲಿದೆ ಎಂದು ವಿಶ್ಲೇಷಿಸಲಾಗಿದೆ.
Leave A Reply