ಮೋದಿ ಕುರಿತು ಕಾಂಗ್ರೆಸ್ ಗೆ ಅರ್ಥವಾಗದ ಆ ಸಂಗತಿ ಚೀನಾಕೆ ಅರ್ಥವಾಗಿದೆ ಅದೇನು ಗೊತ್ತೆ?
ದೆಹಲಿ; ಮಾತೆತ್ತಿದ್ದರೇ ಪ್ರಧಾನಿ ಮೋದಿ ವಿರುದ್ಧ ಮತ್ತು ಅವರ ಪ್ರಮುಖ ನಿರ್ಧಾರಗಳ ವಿರುದ್ಧ ಆಧಾರರಹಿತವಾಗಿ ಉರಿದು ಬೀಳುವ ಕಾಂಗ್ರೆಸ್ ಗೆ ಅರ್ಥವಾಗದ ಮೋದಿ ನೀತಿಗಳು ಚೀನಾ ದೇಶಕ್ಕೆ ಅರ್ಥವಾಗಿವೆ. ಭಾರತದ ವಿರುದ್ಧ ಸದಾ ಹಲ್ಲು ಮಸೆಯುವ, ಗಡಿಯಲ್ಲಿ ಕಿಟಲೇ ಮಾಡುತ್ತಾ, ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವುಗಳಿಗೆ ಅಡ್ಡಗಾಲು ಹಾಕುವ ಚೀನಾಕ್ಕೆ ಮೋದಿ ಆರ್ಥಿಕ ನೀತಿಗಳ ಬಗ್ಗೆ ಒಂದು ಕಣ್ಣಿಟ್ಟಿದೆ.
ನೋಟ್ಯಂತರ, ಜಿಎಸ್ ಟಿ ಸೇರಿ ಹಲವು ಮಹತ್ತರ ಆರ್ಥಿಕ ನೀತಿಗಳು ಜಾರಿ ತಂದರು ಭಾರತದ ಜನರು ಎಲ್ಲ ಚುನಾವಣೆಗಳಲ್ಲೂ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲಿಸುತ್ತಿರುವುದರ ಬಗ್ಗೆ ಚೀನಾ ಸದಾ ಕಣ್ಣಿಟ್ಟಿದೆ. ನೋಟ್ಯಂತರ ಜಾರಿ ನಂತರವೂ ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿರುವುದು ಮೋದಿ ತಾಕತ್ತು ಚೀನಾಕ್ಕೆ ಅರಿವಾಗಿದ್ದು, ಭಾರತದ ಜನರು ಮೋದಿ ಜತೆ ಇದ್ದಾರೆ ಎಂಬುದು ಅರಿವಿಗೆ ಬಂದಿದೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯನ್ನು ಡ್ರ್ಯಾಗನ್ ಕೂಲಂಕಷವಾಗಿ ವೀಕ್ಷಿಸುತ್ತಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಯೋಜನೆಗಳ ನಿರ್ಧಾರಕ್ಕೆ ನೀಡುವ ಪ್ರಬಲ ಪರೀಕ್ಷೆ ಎಂದು ಚೀನಾ ಮಾಧ್ಯಮಗಳು ವಿಶ್ಲೇಷಿಸಿವೆ.
ಕೇಂದ್ರ ಸರ್ಕಾರದ ಆರ್ಥಿಕ ನಿರ್ಧಾರಗಳನ್ನು ಭಾರತೀಯರು ಬೆಂಬಲಿಸಿದರೇ, ಅದರ ಪರಿಣಾಮದ ಬಿಸಿ ಚೀನಾಕೂ ತಟ್ಟಲಿದೆ. ಆದ್ದರಿಂದ ಅಲ್ಲವೇ ಚೀನಾ ಭಾರತದ ಪ್ರತಿ ನಿಲುವುಗಳ ಮೇಲೂ ಕಣ್ಗಾವಲಿಟ್ಟಿದೆ. ಚೀನಾ ವಸ್ತುಗಳಿಗೆ ಭಾರತ ಅದ್ಬುತ ಮಾರುಕಟ್ಟೆಯಾಗಿದೆ. ಆದ್ದರಿಂದ ಭಾರತದ ಆರ್ಥಿಕ ನೀತಿಗಳು ಏನೇ ಬದಲಾದರ ಅದರ ಪ್ರಭಾವ ಚೀನಾಕ್ಕೆ ಮೊದಲು ಬೀಳಲಿದೆ ಎಂದ ಸರ್ಕಾರಿ ಸ್ವಾಮದ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಇನ್ನು ಚೀನಾದ ಒಪ್ಪೋ, ಕ್ಸಿಯೋಮಿ ಸೇರಿ ಚೀನಾದ ಹಲವು ಕಂಪೆನಿಗಳು ಭಾರತದೊಂದಿಗೆ ನೇರ ಸಂಪರ್ಕ ಹೊಂದಿವೆ. ಒಂದು ವೇಳೆ ಎಲ್ಲ ಚುನಾವಣೆಗಳಲ್ಲಿ ಭಾರತೀಯರು ಮೋದಿ ಅವರನ್ನು ಬೆಂಬಲಿಸಿದರೇ ಭಾರತದ ಆರ್ಥಿಕ ನಿಲುವು ಇನ್ನಷ್ಟು ಬಲಿಷ್ಠವಾಗಲಿದೆ ಎಂಬುದು ಚೀನಾ ಮಾಧ್ಯಮಗಳ ನಿಲುವು. ಒಂದು ವೇಳೆ ಈ ಚುನಾವಣೆಗಳಲ್ಲಿ ಬಿಜೆಪಿ ಸೋತರೇ ಜನ ಮೋದಿ ಆರ್ಥಿಕ ನಿಲುವುಗಳನ್ನು ಬೆಂಬಲಿಸುತ್ತಿಲ್ಲ ಮತ್ತು ಭವಿಷ್ಯದಲ್ಲಿ ಭಾರತದ ಆರ್ಥಿಕ ಸ್ಥಿತಿ ದಿವಾಳಿಯಾಗುತ್ತದೆ ಎಂಬ ಅರ್ಥದಲ್ಲಿ ಚೀನಾ ಮಾಧ್ಯಮಗಳು ವಿಶ್ಲೇಷಿಸಿವೆ.
ಮೋದಿಯೇ ಮೂಲ, ಪ್ರಧಾನಿಯೇ ಬಲ
ಗುಜರಾತ್ ಸೇರಿ ದೇಶಾಧ್ಯಂತ ಬಿಜೆಪಿಯನ್ನು ಅಲ್ಲಲ್ಲ ಮೋದಿಯನ್ನು ಸೋಲಿಸಲು ಹೆಣಗಾಡುತ್ತಿರುವ ಕಾಂಗ್ರೆಸ್ ಹಲವು ಕಸರತ್ತುಗಳನ್ನು ನಡೆಸುತ್ತಿದೆ. ಇದರ ಮಧ್ಯೆ ಸ್ವತಃ ಮೋದಿಯೇ ಕಾಂಗ್ರೆಸ್ ನಾಯಕರು ಗುಜರಾತ್ ಚುನಾವಣೆಯಲ್ಲಿ ಗೆಲವು ಸಾಧಿಸಲು ಪಾಕಿಸ್ತಾನದ ಮುಖಂಡರನ್ನು ಭೇಟಿಯಾಗಿದ್ದಾರೆ ಎಂಬ ಆರೋಪ ಮಾಡಿದ್ದರು. ಹೀಗೆ ಭಾರತದ ರಾಜ್ಯಗಳ ಚುನಾವಣೆಯನ್ನು ವಿದೇಶಗಳು ಕೂಲಂಕಷವಾಗಿ ನೋಡುವಂತೆ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಸಲ್ಲುತ್ತದೆ. ಈಗ ಅದೇ ಸಾಲಿಗೆ ಬಲಿಷ್ಠ ಆರ್ಥಿಕ, ಸೈನಿಕ ಶಕ್ತಿ ಹೊಂದಿರುವ ಚೀನಾ ಕೂಡ ಮೋದಿ ಅವರ ಪ್ರತಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದು ಭಾರತದ ಹೊಸ ಯುಗಕ್ಕೆ ನಾಂದಿ ಎಂದು ಶ್ಲಾಘನೆ ವ್ಯಕ್ತವಾಗಿವೆ.
Leave A Reply