ಡೋಕ್ಲಾಂನಲ್ಲಿ ಎಂಥಹುದ್ದೇ ಪರಿಸ್ಥಿತಿಯನ್ನು ಎದುರಿಸಲು ಸೈನ್ಯ ಸಿದ್ಧ
ದೆಹಲಿ: ಪದೇಪದೆ ಡೋಕ್ಲಾಂ ಗಡಿಯಲ್ಲಿ ಕೀಟಲೇ ಮಾಡುತ್ತಿರುವ ಚೀನಾದ ವಿರುದ್ಧ ಎಂಥಹುದ್ದೇ ಕಠಿಣ ಪರಿಸ್ಥಿತಿ ಎದುರಿಸಲು ಭಾರತದ ಸೈನ್ಯ ಸಿದ್ಧವಿದೆ ಎಂದು ಜನರಲ್ ಆಫಿಸರ್ ಕಮಾಂಡಿಂಗ್ ಚೀಫ್ ಲೆ.ಜ ಅಭಯ ಕೃಷ್ಣನ್ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂತಾನ ಮತ್ತು ಭಾರತದ ಗಡಿಯಲ್ಲಿ ಚೀನಾ ಸೈನ್ಯ ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವ ವೇಳೆಯೇ ಈ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಹೊರ ಬಿದ್ದಿರುವುದು ಭಾರತ ಸೈನ್ಯದ ತಾಕತ್ತಿನ ಸಂದೇಶವನ್ನು ಚೀನಾಕ್ಕೆ ರವಾನಿಸಿದಂತಾಗಿದೆ.
ಭಾರತ ಸೈನಿಕರು ಡೋಕ್ಲಾ ಗಡಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಕ್ಷಮತೆ ಹೊಂದಿದ್ದಾರೆ. ನಮ್ಮ ಸೈನ್ಯಕ್ಕೆ ಪೂರಕ ಶಕ್ತಿಯೂ ದೊರಕಿದೆ. ಯಾರಾದ್ರೂ ದಾಳಿ ಮಾಡಿದರೇ ತಕ್ಕ ಪ್ರತಿರೋಧ ನೀಡುವ ಶಕ್ತಿಯನ್ನು ನಮ್ಮ ಸೈನ್ಯ ಹೊಂದಿದೆ. ಸಕಲ ರೀತಿಯಲ್ಲೂ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರತ್ಯೇಕ ರಾಷ್ಟ್ರಗಳ ಹೆಸರು ಹೇಳುವುದಿಲ್ಲ. ಯಾವುದೇ ರಾಷ್ಟ್ರ ಕೀಟಲೆ ಮಾಡಿದರೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ ಈಗಲೂ ಡೋಕ್ಲಾ ಗಡಿಯ ಕೆಲವೇ ಅಡಿಗಳಷ್ಟು ದೂರದಲ್ಲಿ ಚೀನಾ ತನ್ನ ಸೈನಿಕರನ್ನು ಜಮಾ ಮಾಡಿಟ್ಟುಕೊಂಡಿದೆ. ಈ ಕುರಿತು ಹಲವು ಭಾರಿ ಹೇಳಲಾಗಿದೆ. ಇನ್ನು ಹೇಳಲು ಏನು ಬಾಕಿ ಉಳಿದಿಲ್ಲ. ದೇಶ ಇದೀಗ ಎಂತಹುದ್ದೇ ಪರಿಣಾಮವನ್ನು ಎದುರಿಸಲು ಸಿದ್ಧ ಎಂದು ಅಭಯ ಕೃಷ್ಣನ್ ಹೇಳಿದ್ದಾರೆ.
Leave A Reply