ಮುಗ್ಧರನ್ನು ಮತಾಂತರ ಮಾಡುತ್ತಿದ್ದ 40 ಕ್ರಿಶ್ಚಿಯನ್ನರನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು
ಸತ್ನಾ: ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಮುಗ್ದ ಜನರನ್ನು ಒತ್ತಾಯದಿಂದ ಮತಾಂತರ ಮಾಡಲು ಯತ್ನಿಸುತ್ತಿದ್ದ 40 ಕ್ರಿಶ್ಚಿಯನ್ನರನ್ನು ಭಜರಂಗ ದಳ ಸೇರಿ ನಾನಾ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಒತ್ತಾಯದ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದ 40 ಕ್ರಿಶ್ಚಿಯನ್ನರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಒತ್ತಾಯದ ಮತಾಂತರ ಮಾಡುತ್ತಿದ್ದ ಕೆಲ ಕ್ರಿಶ್ಚಿಯನ್ನರಿಗೆ ಹಿಂದೂಗಳು ಕೆಲವು ಏಟು ಕೊಟ್ಟು, ಅವರ ಕಾರನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸತ್ನಾ ಜಿಲ್ಲೆಯಿಂದ 15 ಕಿಲೋ ಮೀಟರ್ ದೂರದಲ್ಲಿರುವ ಭೂಮ್ಕಾರ ಗ್ರಾಮದಲ್ಲಿ ಕ್ರಿಶ್ಚಿಯನ್ ಗೆ ಸೇರುವ ಮುಂಚಿನ ಕೆಲ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿತ್ತು. ಅಲ್ಲದೇ ರಾತ್ರಿ ಮತಾಂತರ ಪ್ರಕ್ರಿಯೆ ನಡೆಯಲಿತ್ತು ಎಂಬ ಮಾಹಿತಿ ಆಧಾರಿಸಿ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ, ಮತಾಂತರ ಪ್ರಕ್ರಿಯೆಯನ್ನು ತಡೆದಿದ್ದಾರೆ.
ಬಂಧಿತರನ್ನು ಬಿಡುಗಡೆ ಮಾಡಿರುವ ಪೊಲೀಸರು ಎಂ ಜಾರ್ಜ್ ಸೇರಿ ಐವರು ಕ್ರಿಶ್ಚಿಯನ್ನರ ವಿರುದ್ಧ ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಧರ್ಮೇಂದ್ರ ದೋಹ್ರಾ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
Leave A Reply