ಯೋಗ ಕಲಿಸಿದ್ದಕ್ಕೆ ಫತ್ವಾ ಹೊರಡಿಸುವ ಮುಸ್ಲಿಮರೇ ಸೌದಿಯ ಈ ನಿರ್ಧಾರ ಕೇಳಿ!
ಅಬುದಾಬಿ: ನಮ್ಮ ದೇಶದಲ್ಲಿ ಮುಸ್ಲಿಂ ಮಹಿಳೆಯರು ಸ್ಲೀವ್ ಲೆಸ್ ಬ್ಲೌಸ್ ಹಾಕಿಕೊಂಡಿದ್ದಕ್ಕೆ, ಯೋಗ ಕಲಿಸಿದ್ದಕ್ಕೆ, ಅಷ್ಟೇ ಏಕೆ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಕ್ಕೆ ಮುಸ್ಲಿಮರು ಹೆಂಡತಿಯರಿಗೆ ತಲಾಖ್ ಹಾಗೂ ಮುಸ್ಲಿಂ ಧರ್ಮಗುರುಗಳು ಫತ್ವಾ ಹೊರಡಿಸುತ್ತಾರೆ. ಆದರೆ ದುಬೈನಂಥ ರಾಷ್ಟ್ರಗಳಲ್ಲೇ ಮಹಿಳೆಯರಿಗೆ ಯೋಗ ಕಲಿಕೆ ಸೇರಿ ಹಲವು ಸ್ವಾತಂತ್ರ್ಯ ನೀಡಿದ್ದು, ಭಾರತೀಯ ಮುಸ್ಲಿಮರಿಗೆ ಬುದ್ಧಿ ಬರುವುದು ಯಾವಾಗ ಎಂಬ ಪ್ರಶ್ನೆ ಉದ್ಭವವಾಗಿದೆ.
ಹೌದು, ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರು ಇನ್ನು ಮುಂದೆ ಬೈಕ್, ಕಾರು ಹಾಗೂ ಟ್ರಕ್ ಓಡಿಸಬಹುದು ಎಂದು ಅಲ್ಲಿನ ರಾಜ ಸಲ್ಮಾನ್ ಆದೇಶ ಹೊರಡಿಸಿದ್ದು, ಈ ಕುರಿತು ಸಂಚಾರಿ ನಿಯಮ ಸಹ ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ.
ಸೆಪ್ಟೆಂಬರ್ ನಲ್ಲೇ ರಾಜ ಸಲ್ಮಾನ್ ಮಹಿಳೆಯರಿಗೆ ಬೈಕ್, ಕಾರು ಓಡಿಸಲು ಅನುಮತಿ ನೀಡುವುದಾಗಿ ಘೋಷಿಸಿದ್ದ. ಆ ದೇಶದ ಮುಸ್ಲಿಂ ಮಹಿಳೆಯರಿಗೆ ಚಾಲನಾ ಪರವಾನಗಿ ಸೇರಿ ಹಲವು ಸೌಲಭ್ಯ ಹಾಗೂ ತರಬೇತಿಗೆ ಸೌದಿಯ ಸಂಚಾರಿ ಪ್ರದಾನ ನಿರ್ದೇಶನಾಲಯ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮುಸ್ಲಿಂ ಮಹಿಳೆಯರು ಬೈಕ್, ಟ್ರಕ್ ಓಡಿಸಲು ಅನುಮತಿ ನೀಡಲು ಸಿದ್ಧತೆ ನಡೆಸಿದ್ದು, ಮಹಿಳೆ ಹಾಗೂ ಪುರುಷರಿಗೆ ಒಂದೇ ತೆರನಾದ ನಿಯಮ ಅನ್ವಯವಾಗುವಂತೆ ಕಾನೂನು ಕಾನೂನು ರಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಗಲ್ಫ್ ಹಾಗೂ ಮುಸ್ಲಿಂ ದೇಶಗಳ ಒಕ್ಕೂಟದಲ್ಲೇ ಸೌದಿ ಅರೇಬಿಯಾ ಒಂದೇ ಮುಸ್ಲಿಂ ಮಹಿಳೆಯರಿಗೆ ಬೈಕು, ಕಾರು ಓಡಿಸಲು ಅನುಮತಿ ನೀಡಿರಲಿಲ್ಲ. ಈಗ ನಿಷೇಧ ಹಿಂಪಡೆಯಲು ನಿರ್ಧಿರಿಸಲಾಗಿದ್ದು, ಇದು ಐತಿಹಾಸಿಕ ತೀರ್ಮಾನ ಎಂದೇ ಬಿಂಬಿಸಲಾಗಿದೆ.
Leave A Reply