ದೇಶಕ್ಕೆ ತನ್ನ ಚಿನ್ನದ ಪದಕ ಸಮರ್ಪಿಸಿದ ಸುಶೀಲ್ ಕುಮಾರ
ಜೋಹಾನ್ಸ್ ಬರ್ಗ್ (ದಕ್ಷಿಣ ಆಫ್ರಿಕಾ): ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮರಳಿರುವ ಕುಸ್ತಿಪಟು ಸುಶೀಲ್ ಕುಮಾರ್ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಕುಸ್ತಿ ಕಾಮನವೇಲ್ತ್ ನಲ್ಲಿಚಿನ್ನದ ಪದಕ ಪಡೆದಿದ್ದಾರೆ. ತಾನು ಗೆದ್ದಿರುವ ಚಿನ್ನದ ಪದಕವನ್ನು ದೇಶಕ್ಕೆ ಸಮರ್ಪಿಸುವ ಮೂಲಕ ದೇಶ ಭಕ್ತಿ ಮೆರೆದಿದ್ದಾರೆ.
74 ಕೆಜಿ ವಿಭಾಗದಲ್ಲಿ ನ್ಯೂಜಲೆಂಡ್ ನ ಆಕಾಶ್ ಕುಲ್ಲರ್ ಜತೆ ಸೆಣಸಾಟ ಫೈನಲ್ ಪಂದ್ಯದಲ್ಲಿ ವಿಜಯಿಯಾಗಿ ದೇಶಕ್ಕೆ ಚಿನ್ನದ ಪದಕ ನೀಡಿದ್ದಾರೆ. ಡ್ರಗ್ಸ್ ಸೇವನೆ ಆರೋಪದಿಂದ ಮುಕ್ತರಾದ ನಂತರ ಮೊದಲ ಭಾರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸಿದ್ದ ಸುಶೀಲ್ ಕುಮಾರ ಚಿನ್ನದ ಪದಕ ಪಡೆದಿರುವುದು ಭಾರತಕ್ಕೆ ಹೆಮ್ಮೆ ಮೂಡಿಸಿದೆ.
ಚಿನ್ನದ ಪದಕ ಪಡೆದ ನಂತರ ಟ್ವೀಟ ಮಾಡಿರುವ ಸುಶೀಲ್ ಕುಮಾರ ‘ಮೂರುವರ್ಷಗಳ ನಂತರ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಚಿನ್ನದ ಪದಕ ಪಡೆದಿದ್ದೇನೆ. ಪದಕವನ್ನು ನನ್ನ ತಂದೆ, ತಾಯಿ, ಗುರು ಮತ್ತು ದೇಶಕ್ಕೆ ಸಮರ್ಪಿಸುತ್ತೇನೆ’ ಇದು ನನ್ನ ಜೀವನದ ಸಾರ್ಥಕ ಕ್ಷಣ’ ಎಂದು ಹೇಳಿದ್ದಾರೆ.
Leave A Reply