ಮತಯಂತ್ರದ ಬಗ್ಗೆ ಅನುಮಾನ ಆಪ್ ಮುಖಂಡನಿಗೆ ಚಿಪ್ ಡಿಸೈನರ್ ಸವಾಲು
Posted On December 18, 2017

ದೆಹಲಿ: ಮತಯಂತ್ರದಲ್ಲಿ ಚಿಪ್ ಅಳವಡಿಸಿ ಬಿಜೆಪಿ ಚುನಾವಣೆಗಳನ್ನು ವಾಮಮಾರ್ಗದಿಂದ ಗೆಲ್ಲುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್, ಆಪ್, ಹಾರ್ದಿಕ್ ಪಟೇಲ್ ಸೇರಿ ಇತರಿರಿಗೆ ಚಿಪ್ ಡಿಸೈನರ್ ಒಬ್ಬರು ಸವಾಲು ಹಾಕಿದ್ದಾರೆ.
ಇತ್ತೀಚೆಗೆ ಆಪ್ ಮುಖಂಡ ಅಂಕಿತ್ ಲಾಲ್ ‘ಚುನಾವಣೆ ಆಯೋಗ ಮತಯಂತ್ರಗಳನ್ನು ಸರಿಯಾಗಿ ಬಳಸುತ್ತಿಲ್ಲ. ಮತಯಂತ್ರಗಳನ್ನು ಬಿಜೆಪಿ ಪರ ಮತ ಬೀಳುವಂತೆ ಸಿದ್ಧಪಡಿಸಲಾಗುತ್ತಿದೆ. ಚುನಾವಣೆ ಆಯೋಗ ಸಂಪೂರ್ಣವಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದ.
ಇದಕ್ಕೆ ಪ್ರತಿಕ್ರಿಯಿಸಿರುವ ರೋಷಿ ಸಿಬಿಜಿ ಸ್ಯಾನ್ ಎಂಬ ಚಿಪ್ ಡಿಸೈನರ್ ‘ಆತ್ಮೀಯ ಅಂಕಿತ್ ಲಾಲ್ ಅವರೇ ನಾನು ಪ್ರೋಪೇಷನಲ್ ಚಿಪ್ ಡಿಸೈನರ್ ಆಗಿದ್ದೇನೆ. ನಿಮಗೆ ಬಹಿರಂಗ ಸವಾಲು ಹಾಕುತ್ತೇನೆ. ಮತಯಂತ್ರದ ಚಿಪ್ ಹ್ಯಾಕ್ ಮಾಡುವ ಬಗ್ಗೆ ತಿಳಿಸಿಕೊಡಿ ಎಂದು ಸವಾಲು ಹಾಕಿದ್ದಾನೆ. ಇನ್ನು ಪೂಕರವಾಗಿ ಸೂಕ್ತ ಉದಾಹರಣೆಗಳನ್ನು ಸರಣಿ ಟ್ವೀಟ್ ಮಾಡುವ ಮೂಲಕ ಮನದಟ್ಟು ಮಾಡಿಸಿದ್ದಾನೆ.
- Advertisement -
Leave A Reply