ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಚಿತ್ರ ಪ್ರಕಟಿಸಿರುವ ಸಿಪಿಐ(ಎಂ) ಪಕ್ಷದ ಹಿಂಸಾತ್ಮಕ ಮನಸ್ಥಿತಿ ಅನಾವರಣ
ಕೇರಳದಲ್ಲಿ ಸರಣಿಯಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ನಡೆಸುತ್ತೀರುವ ಸಿಪಿಐ ಸೇರಿ ಎಡ ಪಕ್ಷಗಳ ಹಿಂಸಾತ್ಮಕ ಮನಸ್ಥಿತಿ ಇದೀಗ ಅನಾವರಣವಾಗಿದೆ. ಉತ್ತರ ಕೋರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನ ಚಿತ್ರವನ್ನು ಸಿಪಿಂ ತನ್ನ ಬ್ಯಾನರ್ ಗಳಲ್ಲಿ ಬಳಸುವ ಮೂಲಕ ತಾವು ಸರ್ವಾಧಿಕಾರಿ ಧೋರಣೆ ಹೊಂದಿದ್ದೇವೆ ಎಂಬುದನ್ನು ಪರೋಕ್ಷವಾಗಿ ಸಾಬೀತುಮಾಡಿದೆ.
ತನ್ನ ಕ್ರೂರ ನೀತಿಗಳ ಮೂಲಕ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಕಿಮ್ ಜಾಂಗ್ ಉನ್ ನ ಚಿತ್ರ ಬಳಸಿರುವುದು ಇದೀಗ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೇ ಇದು ಕೇರಳದಲ್ಲಿ ನಡೆಯುತ್ತಿರುವ ಸರಣಿ ಕಗ್ಗೊಲೆಗಳ ತಾಣವಾಗಿದೆ ಎಂಬುದಕ್ಕೆಸಾಕ್ಷಿ ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಡಪಂಥಿಯ ಪಕ್ಷಗಳು ಬಿಜೆಪಿ ಮತ್ತು ಆರ್ ಎಸ್ ಎಸ್ ಕಚೇರಿಗಳ ಮೇಲೆ ಮಿಸೈಲ್ ಉಡಾಯಿಸಿದರೂ ಅಚ್ಚರಿಯಿಲ್ಲ. ಕಮ್ಯುನಿಸ್ಟ್ ಪಕ್ಷ ಮಿಸೈಲ್ ಉಡಾಯಿಸುವ ಯೋಜನೆ ರೂಪಿಸಿದೆ ಎಂದು ಆರೋಪಿಸಿದ್ದಾರೆ.
ಕೇರಳದಲ್ಲಿ ಅಧಿಕಾರದಲ್ಲಿರುವ ಸಿಪಿಐ ಪಕ್ಷ ಶಸ್ತ್ರಾಗಳನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ವಿಶ್ವವನ್ನೇ ಹೆದರಿಸುತ್ತಿರುವ ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನನ್ನು ಮಾದರಿಯಾಗಿಟ್ಟುಕೊಂಡಿದ್ದು, ಭಾರಿ ಆತಂಕ ಮೂಡಿಸಿದೆ. ಭಾರತದಂತ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಸರ್ವಾಧಿಕಾರಿಯನ್ನು ವಿಜೃಂಭಿಸುತ್ತಿರುವುದು, ಅದೂ ಜವಾಬ್ದಾರಿಯುತವಾಗಿ ಆಡಳಿತದಲ್ಲಿರುವ ಸರ್ಕಾರದ ಪಕ್ಷದ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೇರಳದಲ್ಲಿ ಅಧಿಕಾರದಲ್ಲಿರುವ ಪಕ್ಷದವರೇ ಸರ್ವಾಧಿಕಾರಿಯನ್ನು ವೈಭವಿಕರಿಸಿರುವುದು ದೇಶದ ಶಾಂತಿ, ಸುವ್ಯವಸ್ಥೆ, ಭದ್ರತೆ ಬಗ್ಗೆ ಹಲವು ಅನುಮಾನಗಳನ್ನು ಮೂಡಿಸಿದೆ.
Leave A Reply