ಪ್ರಧಾನಿ ‘ಸಹಜ ಬಿಜಲಿ, ಹರ್ ಗರ್ ಬಿಜಲಿ’ ಯೋಜನೆ 70 ವರ್ಷದ ಬಳಿಕ ಹಳ್ಳಿಗೆ ಬಂತು ಕರೆಂಟ್
ದೆಹಲಿ: ದೇಶದ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಕಲ್ಪಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಹರ್ ಗರ್ ಬಿಜಲಿ’ ಯೋಜನೆ ಫಲದಿಂದ ದೇಶದ ಸ್ವಾತಂತ್ರ್ಯ ಬಂದ 70 ವರ್ಷದ ಬಳಿಕ ಹಳ್ಳಯೊಂದಕ್ಕೆ ವಿದ್ಯುತ್ ದೊರಕಿದೆ. ಚತ್ತಿಸ್ ಗಡದ ಬಲರಾಮಪುರ ಜಿಲ್ಲೆಯ ಜೋಕಪತ್ ಪ್ರಧಾನಿ ಕನಸನ ಯೋಜನೆಯ ಫಲ ಪಡೆದಿರುವ ಹಳ್ಳಿ
ದಡ್ಡ ಕಾಡು ಮತ್ತು ಗುಡ್ಡಗಳ ಮಧ್ಯೆ ಇರುವ ಜೋಕಪತ್ ಗ್ರಾಮದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ 70 ವರ್ಷಗಳ ನಂತರವೂ ವಿದ್ಯುತ್ ಪಡೆದಿರುವುದಿಲ್ಲ. 1,652 ಜನರಿರುವ ಈ ಹಳ್ಳಿಯಲ್ಲಿ ನಿತ್ಯ ಕತ್ತಲೆಯಲ್ಲಿ ಜೀವನ ಸಾಗಿಸಬೇಕಿತ್ತು. ವಿದ್ಯಾರ್ಥಿಗಳು ಓದಲು ದೀಪವನ್ನೆ ಆಶ್ರಯ ಪಡೆಯಬೇಕಿತ್ತು. ಆದರೆ ಕಾರ್ಗತ್ತಲಲ್ಲೇ ಜೀವಿಸುತ್ತಿದ್ದ ಜೋಕಪತ್ ಗ್ರಾಮಕ್ಕೆ ಬೆಳಕು ಬಂದಿದೆ.
ತಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ದೊರೆತಿದ್ದಕ್ಕೆ ಈ ಗ್ರಾಮದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ನಮಗೆ ರಾತ್ರಿ ಓಡಾಟಕ್ಕೆ ಚಿಂತೆ ಇಲ್ಲ. ನಮ್ಮ ಮಕ್ಕಳು ಉತ್ತಮ ಅಭ್ಯಾಸ ಮಾಡಬಹುದು. ವಿದ್ಯುತ್ ಸಂಪರ್ಕಕ್ಕೆ ಶ್ರಮಿಸಿದ ಸರ್ಕಾರ ಮತ್ತು ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ.
2019ರ ವೇಳೆಗೆ ಭಾರತದ ಎಲ್ಲ ಹಳ್ಳಿಗಳಿಗೆ ದಿನ 24/7 ಗಂಟೆಗೆ ವಿದ್ಯುತ್ ಒದಗಿಸಲು ಪ್ರಧಾನಿ ನರೇಂದ್ರ ಮೋದಿ 16,320 ಕೋಟಿ ರೂಪಾಯಿ ಅನುದಾನ ನೀಡಿದೆ. ಅಲ್ಲದೇ 2015ರಲ್ಲೇ ಪ್ರತಿ 1000 ದಿನಕ್ಕೆ 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿತ್ತು. ಅದನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ಜಾರಿಗೆ ತರುತ್ತಿದೆ.
Leave A Reply