ದಿನೇಶ್ ಅಮೀನ್ ಮಟ್ಟು ಸೋಲಿನ ದುಃಖದಲ್ಲಿ ಕಾಣೆ ಮೀನು ತಿನ್ನಲು ಸಮಯ ಸನಿಹ!
ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಭಾರಿ ಮುನ್ನಡೆಯೊಂದಿಗೆ ಮುನ್ನುಗ್ಗುತ್ತಿದ್ದು, ರಾಜ್ಯ ಸರ್ಕಾರದ ಮಾಧ್ಯಮ ಸಲಹೆಗಾರ ಸೋಲಿನ ದುಃಖದಲ್ಲಿ ಕಾಣೆ ಮೀನು ತಿನ್ನುವ ಕಾಲ ಸನಿಹವಾಗಿದೆ.
ಗುಜರಾತಿನಲ್ಲಿ ಬಿಜೆಪಿ 111 ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ ಸಾಧಿಸಿದ್ದು, ವಿಜಯದ ಹೊಸ್ತಿಲಲ್ಲಿದೆ. ಅತ್ತ ಹಿಮಾಚಲ ಪ್ರದೇಶದಲ್ಲೂ ಬಿಜೆಪಿ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಗದ್ದುಗೆ ಹಿಡಿಯಲು ಹಾತೊರೆಯುತ್ತಿದೆ. ಕಾಂಗ್ರೆಸ್ ಎರಡೂ ರಾಜ್ಯಗಳಲ್ಲಿ ಕ್ರಮವಾಗಿ 67 ಹಾಗೂ 23 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸುವ ಮೂಲಕ ಸೋಲಿನ ಸುಳಿಯಲ್ಲಿ ಬಹುತೇಕ ಸಿಲುಕಿಕೊಂಡಿದೆ.
ಇನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರಂತೂ ಕಾಂಗ್ರೆಸ್ ಗೆದ್ದರೆ ಖುಷಿಗೆ, ಸೋತರೆ ದುಃಖಕ್ಕೆ ನಾನು ಕಾಣೆ ಮೀನು ತಿನ್ನುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಹಾಗೂ ಕಾಂಗ್ರೆಸ್ ಸೋಲಿನತ್ತ ಹೆಜ್ಜೆ ಹಾಕುತ್ತಿರುವುದರಿಂದ ದುಃಖಕ್ಕಾಗಿಯೇ ಕಾಣೆ ಮೀನು ತಿನ್ನಬೇಕಾಗುತ್ತದೆ ಎಂಬ ಲಕ್ಷಣ ಕಾಣುತ್ತಿವೆ.
Leave A Reply