ನನ್ನ ಮಗ ಬಂದೆ ಬರುತ್ತಾನೆ ಎಂದು ಕಾಯುತ್ತಿದ್ದ ಅಪ್ಪ-ಅಮ್ಮನಿಗೆ ಮಕ್ಕಳು ಕೊಟ್ಟ ಉಡುಗೊರೆ ಏನು ಗೊತ್ತಾ??
Posted On July 6, 2017
ಒಂದು ರೈಲು ನಿಲ್ದಾಣ.. ಅಲ್ಲಿ ಒಬ್ಬ ಟೀ ಮಾರುವವನ ಕಣ್ಣಿಗೆ ಒಂದು ವೃದ್ಧ ದಂಪತಿಗಳು ಇಬ್ಬರೂ ಕೈ ಕೈ ಹಿಡಿದು ನಿಲ್ದಾಣದ ಒಂದು ಬದಿಯಲ್ಲಿ ಹೋಗುತ್ತಿರುವುದು ಕಾಣಿಸುತ್ತದೆ ಅವರು ಒಂದು ಬದಿಯಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ ಅಷ್ಟರಲ್ಲಿ ದೂರದಲ್ಲಿ ರೈಲು ಬರುವುದು ಗಮನಿಸಿ ಹುಡುಗ ತನ್ನ ಕಾರ್ಯದಲ್ಲಿ ತೊಡಗುತ್ತಾನೆ.
ಮತ್ತೆ ಆ ಹುಡುಗ ಅದೆ ನಿಲ್ದಾಣಕ್ಕೆ ಬಂದಾಗ ಸುಮಾರು ರಾತ್ರಿ 12 ಆಗಿರುತ್ತೆ ಆಗ ಆ ಹುಡುಗ ಅವರ ಬಳಿ ಹೋಗಿ ಕೇಳುತ್ತಾನೆ “ಅಜ್ಜ ನೀವು ಎಲ್ಲಿಗೆ ಹೋಗಬೇಕು ಯಾಕೆ ಬೆಳಗಿನಿಂದ ಇಲ್ಲೆ ಇರುವಿರಿ” ಎಂದು ಕೇಳಿದ ತಕ್ಷಣ ಆ ವೃದ್ಧ ತನ್ನ ಜೇಬಿನಿಂದ ಒಂದು ಚೀಟಿಯನ್ನು ತೆಗೆದು ಕೊಟ್ಟು ಹೇಳುತ್ತಾನೆ “ಮಗಾ ನಮಗೆ ಓದಲೂ ಬರೆಯಲು ಬರುವುದಿಲ್ಲ ನನ್ನ ಚಿಕ್ಕ ಮಗನ ಮನೆಗೆ ಹೋದಾಗ ಅವನು ನೀವು ರೈಲು ನಿಲ್ದಾಣದಲ್ಲಿ ಇರಿ ಅಣ್ಣ ಬಂದು ನಿಮ್ಮನ್ನು ಕರೆದುಕೊಂಡು ಹೋಗುವನು ಅಕಸ್ಮಾತ್ತಾಗಿ ಅವನು ಬರಲಿಲ್ಲ ಅಂದರೆ ಈ ಚೀಟಿ ತೋರಿಸಿ ಯಾರಾದರೂ ಕರೆದುಕೊಂಡು ಹೋಗುತ್ತಾರೆ ಅಂತ ಹೇಳಿದಾಗ ಹುಡುಗ ಕುತುಹಲದಿಂದ ಆ ಚೀಟಿ ನೋಡುತ್ತಾನೆ ನೋಡಿದಾಕ್ಷಣ ಹುಡುಗನ ಕಣ್ಣಲಿ ನೀರು ತುಂಬಿ ಬರುತ್ತದೆ ಯಾಕೆಂದರೆ ಆ ಚೀಟಿಲಿ ಬರೆದಿದ್ದು
“ನೋಡಿ ನೀವು ಯಾರೆ ಆಗಿರಿ ದಯವಿಟ್ಟು ಇಬ್ಬರನ್ನೂ ನಗರದ ಯಾವುದೇ ವೃದ್ಧಾಶ್ರಮಕ್ಕೆ ಸೇರಿಸಿ ” ಎಂದೂ ಬರೆದಿತ್ತು.
–ಜನ ಸಾಮಾನ್ಯ–
- Advertisement -
Leave A Reply