ಸ್ವಚ್ಛ ಭಾರತ ಯೋಜನೆಯಡಿ 5.6 ಕೋಟಿ ಶೌಚಾಲಯ ನಿರ್ಮಾಣ!
ದೆಹಲಿ: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗುತ್ತಲೇ ಜಾರಿಗೊಳಿಸಿದ ಸ್ವಚ್ಛ ಭಾರತ ಯೋಜನೆ ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ದೇಶಾದ್ಯಂತ ಯೋಜನೆಯಡಿಯಲ್ಲಿ 5.6 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಈ ಕುರಿತು ಸರ್ಕಾರದ ಪರವಾಗಿ ರಾಜ್ಯಸಭೆಗೆ ಮಾಹಿತಿ ನೀಡಿದ್ದು, ಯೋಜನೆ ಯಶಸ್ಸಿಗೆ ಮುನ್ನುಡಿ ಬರೆದಂತಾಗಿದೆ.
ಸ್ವಚ್ಛ ಭಾರತ ಅಭಿಯಾನದಡಿ ಇದುವರೆಗೆ ದೇಶದ ಗ್ರಾಮೀಣ ಪ್ರದೇಶದಲ್ಲಿ 5.61 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಏಳು ರಾಜ್ಯಗಳನ್ನು (ಕೇಂದ್ರಾಡಳಿತ ಪ್ರದೇಶ ಒಳಗೊಂಡು) ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ ಎಂದು ರಾಜ್ಯಸಭೆಗೆ ಲಿಖಿತವಾಗಿ ಮಾಹಿತಿ ನೀಡಿದ್ದಾರೆ.
ಜತೆಗೆ ನರೇಗಾ ಯೋಜನೆ ಅನ್ವಯವೂ 29.08 ಲಕ್ಷ ಶೌಚಾಲಯ ನಿರ್ಮಿಸಲಾಗಿದ್ದು, ಸ್ವಚ್ಛ ಭಾರತ ಯೋಜನೆ ಬೇಡಿಕೆ ಆಧಾರಿತ ಯೋಜನೆಯಾದ ಕಾರಣ ರಾಜ್ಯವಾರು ಅನುದಾನ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಸಹ ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳು ಹಣ ಬಳಸಿದ ಮಾಹಿತಿ ಒದಗಿಸಿದರೆ ಎಸ್ ಬಿಎಂ ಯೋಜನೆಯನ್ವಯ ಹಣ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
Leave A Reply