ಮೈಸೂರಿನಲ್ಲಿ ಲವ್ ಜಿಹಾದ್, ಇಬ್ಬರು ಪತ್ನಿಯರಿಗೆ ತಲಾಖ್ ಕೊಟ್ಟವನಿಂದ ಹಿಂದೂ ಯುವತಿಗೆ ಮೋಸ
ಮೈಸೂರು: ಹಿಂದೂ ಯುವತಿಯರನ್ನು ಲವ್ ಜಿಹಾದ್ ಖೆಡ್ಡಾಗೆ ಕೆಡವಿ ಮತಾಂತರ ಮಾಡಿ ಹಿಂಸಿಸುತ್ತಿದ್ದ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಯುವತಿ ಪಾಲಕರು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಶಿವಮೊಗ್ಗದ ಅರವಿಂದ್ ಹೆಗಡೆ-ಆಶಾ ದಂಪತಿ ಪುತ್ರಿ ಅನುಷಾ ಹೆಗಡೆ ಲವ್ ಜಿಹಾದ್ ಗೆ ಬಲಿಯಾದ ಯುವತಿ. ಮೂಲತ ಶಿವಮೊಗ್ಗದವರಾದ ಇವರು ಹದಿಮೂರು ವರ್ಷಗಳಿಂದ ಮೈಸೂರಿನಲ್ಲಿ ಬಂದು ನೆಲೆಸಿದ್ದರು. ಮಗಳು ವಿದ್ಯಾಭ್ಯಾಸಕ್ಕಾಗಿ ಮೈಸೂರಿನ ಎಂಜಿನಿಯರಿಂಗ್ ಕಾಲೇಜಿಗೆ ಕಳಿಸಿದ್ದರು. ಮೈಸೂರಿನಲ್ಲಿ ತನ್ನ ಮಗಳನ್ನು ಪ್ರೀತಿಸುವ ನೆಪದಲ್ಲಿ ಜಾವೀದ್ ಖಾನ್ ಎಂಬಾತ ಲವ್ ಜಿಹಾದ್ ಗೆ ಸಿಲುಕಿಸಿ, ಮದುವೆಯಾಗಿ ಕಿರಿಕುಳ ನೀಡಿದ್ದಾನೆ ಎಂದು ಯುವತಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಯುವತಿ ಅನುಷಾಳನ್ನು ಪ್ರೀತಿಯ ಹೆಸರಲ್ಲಿ ಲವ್ ಜಿಹಾದ್ ಗೆ ಒಳಪಡಿಸಿ ಕಿರಿಕುಳವನ್ನು ನಡೆಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಮದುವೆಯಾದ ಕೇವಲ ಎರಡೇ ತಿಂಗಳಲ್ಲಿ ಯುವತಿಯನ್ನು ಗೃಹ ಬಂಧನಲ್ಲಿಸಿರಿ ಕಿರುಕುಳ ನೀಡಲಾಗಿದೆ ಎಂದು ಯುವತಿ ಕಣ್ಣೀರಿಟ್ಟು, ತವರಿಗೆ ಮರಳಿಸಿದ್ದಾಳೆ. ಯುವತಿ ತಾನು ಮಾಡಿದ್ದ ತಪ್ಪಿನಿಂದ ಇಂದು ಪಶ್ಚಾತಾಪ ಪಡುವಂತ ಸ್ಥಿತಿ ನಿರ್ಮಾಣವಾಗಿದೆ.
ಮೈಸೂರಿನಲ್ಲಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಜಾವೀದ್ ಖಾನ್ ಎಂಬಾತನ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ, ಮನೆಯವರ ವಿರೋಧದ ಮಧ್ಯೆ ಯುವತಿ ಜಾವೀದ್ ಖಾನ್ ನನ್ನು ಮದುವೆಯಾಗಿದ್ದಳು. ಆದರೆ ಇದೀಗ ಆತ ಅದಾಗಲೇ ಇಬ್ಬರು ಮಹಿಳೆಯರನ್ನು ತಲಾಖ್ ನೀಡಿದ್ದ ಎಂಬ ಮಾಹಿತಿ ತಿಳಿದು ಅನುಷಾ ಮತ್ತು ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಯುವತಿ ಹೆತ್ತವರು ತಮ್ಮ ಮಗಳನ್ನು ಜಾವೇದ್ ಖಾನ್ ಅಪಹರಿಸಿದ್ದಾನೆ ಎಂದು ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಇನ್ನು ಪ್ರಕರಣ ಬೆಳಕಿಗೆ ಬರುತ್ತಲೇ ಜಾವೀದ್ ಖಾನ್ ನ ಮೊದಲ ಹೆಂಡತಿಯ ಮನೆಯವರು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತ ತಮ್ಮ ಮಗಳನ್ನು ಕಿರಿಕುಳ ನೀಡಿದ್ದಾನೆ. ಹಣಕ್ಕಾಗಿ ಪೀಡಿಸಿದ್ದಾನೆ. ನಿನ್ನ ಕಿಡ್ನಿಯನ್ನಾದರೂ ಮಾರಿ ಹಣ ತೆಗೆದುಕೊಂಡು ಬಾ ಎಂದು ನಿತ್ಯ ಕಿರಿಕುಳ ನೀಡಿದಲ್ಲದೇ ತಮ್ಮ ಸಹೋದರಿಗೆ ತಲಾಖ್ ನೀಡಿ ಅನ್ಯಾಯ ಎಸಗಿದ್ದಾನೆ ಎಂದು ಜಾವೀದ್ ಖಾನ್ ಮೊದಲ ಪತ್ನಿ ಅಣ್ಣ ರೇಹಾನ್ ಜಾವೇದ್ ತಿಳಿಸಿದ್ದಾರೆ.
Leave A Reply