ಪಾಕಿಸ್ತಾನದಲ್ಲಿ ಸಿಖ್ಖರ ಒತ್ತಾಯದ ಮತಾಂತರ, ತಡೆಗಟ್ಟಲು ಮುಂದಾದ ಸುಷ್ಮಾ ಸ್ವರಾಜ್
ದೆಹಲಿ: ಪಾಕಿಸ್ತಾನದ ಖೈಬರ್ ಪಖ್ತೂನ್‌ವಾ ಪ್ರಾಂತ್ಯದ ಹಂಗು ಜಿಲ್ಲೆಯಲ್ಲಿ ಸಿಖ್ಖರನ್ನು ಮುಸ್ಲಿಮರನ್ನಾಗಿ ಮತಾಂತರ ಮಾಡಲು ಒತ್ತಾಯ ಮಾಡಲಾಗುತ್ತಿದೆ ಎಂಬ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಸುಷ್ಮಾ ಸ್ವರಾಜ್ ಮತಾಂತರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಸಿಖ್ಖರನ್ನು ಒತ್ತಾಯದಿಂದ ಮುಸ್ಲಿಂ ಧರ್ಮಕ್ಕೆ ಒತ್ತಾಯದಿಂದ ಮತಾಂತರ ಮಾಡಲಾಗುತ್ತಿದೆ ಎಂದು ಪಾಕಿಸ್ತಾನದ ಟ್ರಿಬ್ಯೂನ್ ವರದಿ ಪ್ರಕಟಿಸಿತ್ತು. ಈ ವರದಿ ಕುರಿತು ಪ್ರತಿಕ್ರಿಯಿಸಿದ್ದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸುಷ್ಮಾ ಸ್ವರಾಜ್ ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆದರೆ ಯಾವುದೇ ಮತಾಂತರ ಪ್ರಕ್ರಿಯೆ ನಡೆದಿಲ್ಲ ಎಂದು ಹಂಗೂ ಜಿಲ್ಲಾಡಳಿತ ಹೇಳಿದೆ.
ಸಿಖ್ಖರ ಮತಾಂತರ ಕುರಿತು ಟ್ವೀಟ್ ಮಾಡಿರುವ ಸಚಿವೆ ಸುಷ್ಮಾ ಸ್ವರಾಜ್ ‘ಪಾಕಿಸ್ತಾನದಲ್ಲಿನ ಸಿಖ್ಖರನ್ನು ಮತಾಂತರಗೊಳಿಸುತ್ತಿರುವ ಪ್ರಕ್ರಿಯೆ ಕುರಿತು ಕ್ರಮ ಕೈಗೊಳ್ಳುವಂತೆ ಪಾಕ್ ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
Leave A Reply