ಕಾಶ್ಮೀರದಲ್ಲಿ ಜಿಹಾದಿಗಳ, ಉಗ್ರರ, ಪ್ರತ್ಯೇಕವಾದಿಗಳ ಹುಟ್ಟಡಗಿಸಿದ ನಾಲ್ಕು ಅಸ್ತ್ರಗಳು ಇಲ್ಲಿವೆ ಕೇಳಿ..

ದೆಹಲಿ: ಭಾರತದ ಆತಂರಿಕ ಭದ್ರತೆಗೆ ಸವಾಲಾಗಿದ್ದ ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನೆಯನ್ನು, ಪ್ರತ್ಯೇಕವಾದಿಗಳನ್ನು ಹುಟ್ಟಡಗಿಸಲಾಗಿದೆ. ಭಯೋತ್ಪಾದನೆ ಮತ್ತು ಪ್ರತ್ಯೇಕವಾದವನ್ನು ತಣ್ಣಗೆ ಮಾಡಲು ಕೇಂದ್ರ ಸರ್ಕಾರ ಬಳಸಿದ್ದು ನಾಲ್ಕೇ ನಾಲ್ಕು ಅಸ್ತ್ರಗಳು ಎಂದರೇ ನೀವು ನಂಬಲೇಬೇಕು.
ಅದನ್ನು ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಇಲಾಖೆಯೇ ದಾಖಲೆ ಸಮೇತ, ಉದಾಹರಣೆ ಸಹಿತ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ನೋಟ್ಯಂತರ, ಎನ್ಐಎ ತನಿಖೆ ತೀವ್ರ ಮತ್ತು ಬಿಗಿಗೊಳಿಸಿದ್ದು, ಪ್ರಮುಖ ಉಗ್ರರನ್ನು ಹೊಡೆದುರುಳಿಸಿದ್ದು ಮತ್ತು ಕಾಶ್ಮೀರ ಸಮಸ್ಯೆ ಕುರಿತು ಕೇಂದ್ರ ಸರ್ಕಾರ ನೇಮಿಸಿರುವ ಸಂಧಾನಕಾರ ದಿನೇಶ್ವರ ಶರ್ಮಾ ಎಂಬುವವೇ ಆ ನಾಲ್ಕು ಕಾರಣಗಳು.
ಭಾರತೀಯ ಸೇನೆ ಕಾಶ್ಮೀರ ಕಣಿವೆಯಲ್ಲಿ ಕಂಟವಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಉದಾಹರಣೆಗೆ ಎಲ್ ಇಟಿ ಮತ್ತು ಜಮಾತ್ ಉದ್ ದಾವಾ ಸಂಘಟನೆಯ ಉಗ್ರರಾದ ಅಬು ಹಮಾಜ್, ವಾಸೀಮ್ ಶಾ, ಶಹೀದ್ ಶೌಖತ್ ಸೇರಿ ನೂರಾರು ಉಗ್ರರನ್ನು ಸದೆ ಬಡೆಯಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಗೃಹ ಖಾತೆ ತಿಳಿಸಿದೆ.
ಕೇಂದ್ರ ಸರ್ಕಾರ ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸಲು ನೇಮಿಸಿರುವ ಸಂಧಾನಕಾರ ದಿನೇಶ್ವರ ಶರ್ಮಾ ಯಶಸ್ವಿಯಾಗಿ ಕಾರ್ಯಚರಣೆ ನಡೆಸಿದ್ದು, ಪ್ರತ್ಯೇಕವಾದಿಗಳೊಂದಿಗೆ, ಸ್ಥಳೀಯರೊಂದಿಗೆ ಸರ್ಕಾರದ ಸಂವಹನ ಏರ್ಪಡಿಸಿ ತಕ್ಕ ಮಟ್ಟಿಗೆ ಕೇಂದ್ರದ ಹೋರಾಟಕ್ಕೆ ಬಲ ನೀಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೋಟ್ಯಂತರ ಉಗ್ರರು ಮತ್ತು ಪ್ರತ್ಯೇಕವಾದಿಗಳಿಗೆ ಮಗ್ಗಲ ಮುಳ್ಳಾಗಿ ಕಾಡಿದಲ್ಲದೇ, ಅವರ ಹೋರಾಟಕ್ಕೆ ಇಂಧನದಂತೆ ಹರಿದು ಬರುತ್ತಿದ್ದ ಕೋಟಾ ನೋಟಿಗೆ ದೊಡ್ಡ ಹೊಡೆತ ಬಿದ್ದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರತ್ಯೇಕವಾದಿಗಳ ನಡ ಮುರಿದು, ಜೈಲಿಗಟ್ಟಲು ಯಶಸ್ವಿಯಾಗಿದೆ. ಆದ್ದರಿಂದ ಕಣಿವೇ ರಾಜ್ಯಗಳಲ್ಲಿ ಶಾಂತಿ ನೆಲೆಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Leave A Reply