ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಮೇಲಿನ ಹಲ್ಲೆಗೆ ಕೊನೆ ಯಾವಾಗ?

ತಿರುವನಂತಪುರ: ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬರುತ್ತಲೇ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಗೆ ಮಿತಿ ಇಲ್ಲವಾಗಿದೆ.
ಮಂಗಳವಾರ ಸಂಜೆ ಕಣ್ಣೂರು ಜಿಲ್ಲೆ ಕಿಥಿರೂರ್ ಎಂಬಲ್ಲಿ ಆರೆಸ್ಸೆಸ್ ಮಂಡಲ್ ಕಾರ್ಯಕರ್ತ ಪ್ರವೀಣ್ ಮೇಲೆ ಅಪರಿಚಿತರು ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಪ್ರವೀಣ್ ಅವರಿಗೆ ಮನಬಂದಂತೆ ಇರಿದಿದ್ದು, ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
2016ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇದುವರೆಗೆ ಬಿಜೆಪಿ ಹಾಗೂ ಆರೆಸ್ಸಿನ 17 ಕಾರ್ಯಕರ್ತರು ಮತ್ತು ಮುಖಂಡರನ್ನು ಹತ್ಯೆ ಮಾಡಲಾಗಿದೆ. ಇಷ್ಟಾದರೂ ಮುಖ್ಯಮಂತ್ರಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದು, ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ.
ಅಲ್ಲದೆ, ಕಣ್ಣೂರು ಪಿಣರಾಯಿ ವಿಜಯನ್ ಸ್ವಕ್ಷೇತ್ರವಾಗಿದ್ದರೂ, ಅಪರಾಧ ನಿಗ್ರಹಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಸಿಪಿಎಂ ಗೂಂಡಾಗಳನ್ನು ನಿಯಂತ್ರಿಸಿಲ್ಲ ಎಂಬ ಆರೋಪ ಕೇಳಿಬಂದಿವೆ.
ಆದಾಗ್ಯೂ, ಇದುವರೆಗೂ ಕೇರಳದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದ್ದರೂ, ಕೇರಳದಲ್ಲಿ ಭಯವಿಲ್ಲದೆ ಓಡಾಡುವ, ಕರ್ನಾಟಕದಲ್ಲಿ ಬಂದು ಕೇಂದ್ರ ಸರ್ಕಾರದ ವಿರುದ್ಧ ಹಾರಾಡುವ ಪ್ರಕಾಶ್ ರೈ ಇದರ ವಿರುದ್ಧ ಒಂದೂ ಮಾತನಾಡುವುದಿಲ್ಲ. ಹಿಂದೂಗಳು, ಆರೆಸ್ಸೆಸ್ ಕಾರ್ಯಕರ್ತರು ಹತ್ಯೆಯಾದರೆ ಪ್ರಕಾಶ್ ರೈ ಅವರೊಳಗಿನ ನಟ ಜಾಗೃತವಾಗುವುದಿಲ್ಲವೇನೋ? ಅಥವಾ ನಾಲಿಗೆ ಹೊರಳುವುದಿಲ್ಲವೇನೋ?