ಮುಸ್ಲಿಂ ಯುವಕನೊಂದಿಗೆ “ಓಡಿ ಹೋಗಿ” ಸುಖವಾಗಿರುವ ಹೆಣ್ಣುಮಕ್ಕಳು ಇದ್ದಾರಾ!
ಪ್ರಿಯಾಂಕಾ ಇನ್ನೂ ಪತ್ತೆಯಾಗಿಲ್ಲ ಎಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ಭಂಡಾರಿ ಸಮಾಜದ ಪ್ರಮುಖರು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಇಲ್ಲಿ ಪ್ರತಿಭಟನೆ ರಸ್ತೆ ಮೇಲೆ ಆಗುತ್ತದೆ. ಪೊಲೀಸ್ ಅಧಿಕಾರಿಗಳಿಗೆ ಮನವಿ ಕೊಡುವುದು ಎಲ್ಲವೂ ನಡೆಯುತ್ತೆ. ಆದರೆ ಆ ತಾಯಿಯ ಮನಸ್ಸಿನಲ್ಲಿ ಯಾವ ರೀತಿಯಲ್ಲಿ ಪ್ರತಿಭಟನೆ ಆಗುತ್ತಿರಬಹುದು ಎಂದು ಯಾರಿಗಾದರೂ ಗೊತ್ತಾಗುತ್ತಾ? ಹದಿನೆಂಟೋ, ಇಪ್ಪತ್ತೋ ವರ್ಷ ಸಾಕಿ, ಬೆಳೆಸಿ, ಅದರ ಮೊದಲು ಒಂಭತ್ತು ತಿಂಗಳು ಹೊತ್ತು, ಹೆತ್ತು, ಆ ಸಂಕಟ ಅನುಭವಿಸಿದ ಹೆಣ್ಣಿಗೆ ತಾನು ಜನ್ಮ ಕೊಟ್ಟ ಮಗು ಮುದೊಂದು ದಿನ ತನಗೆ ಜ್ಯೂಸ್ ನಲ್ಲಿ ಅದೇನೋ ಬೆರೆಸಿ ಅಪರಾತ್ರಿ ಯಾವುದೋ ತಲೆ ಮಾಸಿದ ವ್ಯಕ್ತಿಯೊಂದಿಗೆ ಓಡಿ ಹೋಗುತ್ತೆ ಎಂದು ಗೊತ್ತಿದ್ರೆ ಹೇರುವುದೇ ಬೇಡಾ ಎಂದು ನಿರ್ಧರಿಸಿಬಿಡುತ್ತಿದ್ದಳೋ ಏನೋ. ತನ್ನ ರೆಕ್ಕೆ ಬಂದ ಕೂಡಲೇ ಹಾರಿ ಹೋಗಿ ಸಂಬಂಧವನ್ನೇ ಕಳಚಲು ನಾವು ಹಕ್ಕಿಗಳಲ್ಲ.
ಇದನ್ನು ಲವ್ ಜಿಹಾದ್ ಎಂದು ಕರೆಯುವುದೋ, ಹುಚ್ಚು ಮನಸ್ಸಿನ ಪ್ರೇಮ ಎಂದು ಹೇಳುವುದೋ, ಪ್ರೀತಿ, ಪ್ರೇಮಕ್ಕೆ ಕಣ್ಣಿಲ್ಲ ಎಂದು ಹೇಳಬೇಕೊ ಅವರವರ ಭಾವಕ್ಕೆ ಬಿಟ್ಟಿದ್ದು. ಆದರೆ ಒಂದಂತೂ ಸತ್ಯ. ಈ ಘಟನೆಯಿಂದ ಯಾರ ಮನಸ್ಸಿಗೂ ನೆಮ್ಮದಿ ಎನ್ನುವುದು ಇರುವುದಿಲ್ಲ. ಒಂದು ಹಿಂದೂ ಹುಡುಗಿ ಮುಸಲ್ಮಾನ ಹುಡುಗನೊಡನೆ ಓಡಿ ಹೋಗುವುದನ್ನು ತಪ್ಪು ಎಂದು ಹೇಳಿದ ಕೂಡಲೇ ಸಿಕ್ಕಾಪಟ್ಟೆ ಜಾತ್ಯಾತೀತರು ಅದಕ್ಕೆ ವಿರುದ್ಧ ಕಮೆಂಟ್ ಹಾಕಬಹುದು. ಆದರೆ ವಿಷಯ ಇರುವುದು ಪ್ರಿಯಾಂಕಳಂತಹ ಹಿಂದು ಹೆಣ್ಣು ಮಕ್ಕಳು ಒಂದು ವರ್ಷದ ನಂತರ ತಾಯಿ ಮನೆಗೆ ನವರಾತ್ರಿ ಹಬ್ಬಕ್ಕೆಂದು ಖುಷಿಯಿಂದ ಬರುವಂತಹ ಸ್ಥಿತಿಯಲ್ಲಿ ಅವರನ್ನು ಮದುವೆಯಾದವರು ಬಿಟ್ಟಿರುತ್ತಾರಾ ಎನ್ನುವುದು ಪ್ರಶ್ನೆ. ಇವಳು ಅಂತಲ್ಲ ಮೊನ್ನೆ ಇನ್ನೊಂದು ಹೆಣ್ಣುಮಗಳು, ಕಳೆದ ವಾರ ಮತ್ತೊಂದು ಹೆಣ್ಣು ಮಗಳು ಹೀಗೆ ಅಮ್ಮಿಗಳೊಂದಿಗೆ ಓಡಿ ಹೋಗಲು ಜೀವ ಬಿಡುವುದೇನೋ ಸರಿ. ವಯಸ್ಸು, ವಾಟ್ಸ್ ಅಪ್ , ಫೇಸ್ ಬುಕ್, ಸಿನೆಮಾಗಳು ಮನಸ್ಸು ಕೆಡಿಸಿಬಿಡುತ್ತವೆ ಸರಿ. ಆದರೆ ಅದೇ ಫೇಸ್ ಬುಕ್, ವಾಟ್ಸ್ ಅಪ್ ನಲ್ಲಿ ಪೊನ್ನಾನಿಯಲ್ಲಿ ಹಿಂದೂ ಹೆಣ್ಣುಮಕ್ಕಳು ಅನುಭವಿಸಿ ಬಂದ ಸತ್ಯ ಘಟನೆ ಕೂಡ ಇರುತ್ತದೆಯಲ್ಲ, ಅದನ್ನು ಯಾಕೆ ಓದಲ್ಲ. ಒಂದು ವೇಳೆ ಓದಿದ್ದರೆ ಮದುವೆಯ ಹಿಂದಿನ ರಾತ್ರಿ ಮನೆಯವರಿಗೆ ನಿದ್ರೆಯ ಮಾತ್ರೆ ಜ್ಯೂಸ್ ನಲ್ಲಿ ಹಾಕಿ ಓಡುವ ಕೆಲಸ ಇವರು ಮಾಡಲ್ಲ. ಅದು ಡಿಸೆಂಬರ್ ತಿಂಗಳ ಒಂಭತ್ತನೆ ರಾತ್ರಿ.
ರಾತ್ರಿ ಎಲ್ಲರೂ ಟಿವಿ ನೋಡುತ್ತಾ, ಮದುವೆಯ ಸಿದ್ಧತೆಯಲ್ಲಿ ತೊಡಗಿರುವಾಗ ಪ್ರಿಯಾಂಕ ಜ್ಯೂಸ್ ತೆಗೆದುಕೊಂಡು ಬಂದಳು. ನಾಡಿದ್ದು ಮದುವೆಯಾಗುವ ಹುಡುಗಿಗೆ ಮನೆಯವರ ಬಗ್ಗೆ ಎಷ್ಟು ಕಾಳಜಿ, ನೆಂಟರಿಷ್ಟರ ಬಗ್ಗೆ ಎಷ್ಟು ಅಕ್ಕರೆ ಎಂದು ಎಲ್ಲರೂ ಖುಷಿಪಟ್ಟರು. ಮನೆಯಲ್ಲಿ ಹೆಚ್ಚಿನವರು ಜ್ಯೂಸ್ ಕುಡಿದರು. ಕೆಲವರು ಗ್ಲಾಸಿಗೆ ಏನೋ ವಾಸನೆ, ಜ್ಯೂಸ್ ಕಹಿಯಾಗಿದೆ ಎಂದು ಕುಡಿಯಲು ಹೋಗಲಿಲ್ಲ. ಆ ರಾತ್ರಿ ನಂತರ ಏನಾಯಿತು ಎನ್ನುವುದು ಅವಳಿಗೆ ಮಾತ್ರ ಗೊತ್ತು. ಪ್ರಿಯಾಂಕ ಎಸ್ಕೇಪ್ ಆಗಿ ಇವತ್ತಿಗೆ ಹನ್ನೆರಡು ದಿನ.
ದಿವಂಗತ ಐತಪ್ಪ ಭಂಡಾರಿಯವರ ಎರಡನೇಯ ಮಗಳು ತನ್ನ ಪ್ರಿಯಕರ ಹೈದರ್ ಗೋಸ್ಕರ ತನ್ನ ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಓಡಿ ಹೋಗುತ್ತಾಳೆ. ಅಷ್ಟಕ್ಕೂ ಮೂಡಬಿದ್ರೆಯ ಶಿತಾಡರ್ಿಯ ದರೆಗುಡ್ಡೆ ತುಂಬಾ ಚಿಕ್ಕ ಊರು. ಆದರೆ ಪ್ರಿಯಾಂಕಾಳಿಗೆ ತನ್ನ ಪ್ರೀತಿ, ಪ್ರೇಮವನ್ನು ಹಂಚಿಕೊಳ್ಳಲು ಹುಡುಗ ಸಿಗುವುದು ಕಷ್ಟವಾಗುತ್ತಿರಲಿಲ್ಲ. ಅವಳಲ್ಲಿ ಸ್ಥಿಗ್ನ ಸೌಂದರ್ಯವಿತ್ತು. ಹುಡುಗಿಯಲ್ಲಿ ಲವಲವಿಕೆ ಇತ್ತು. ಚುರುಕಾಗಿದ್ದಳು. ಎಲ್ಲಕ್ಕಿಂತ ಹೆಚ್ಚಾಗಿ ಧರೆಗುಡ್ಡೆಗೆ ಬರುವ ಮೊದಲು ಆಕೆ ಮತ್ತು ಅವಳ ತಾಯಿ ಫರಂಗಿಪೇಟೆಯಲ್ಲಿ ಮನೆ ಮಾಡಿಕೊಂಡಿದ್ದರು. ಹೈದರ್ ನನ್ನು ಅವಳು ಮೊದಲು ನೋಡಿದ್ದೇ ಅಲ್ಲಿ. ಈ ಪ್ರೇಮಕ್ಕೆ ಸಿಲುಕುವ ಹುಡುಗಿಯರು ಹುಡುಗನ ಕೆಲಸ, ವಿದ್ಯಾಭಾಸದ ಕಡೆ ಹೆಚ್ಚು ಗಮನ ಕೊಡಲು ಹೋಗುವುದಿಲ್ಲ. ಅದೇ ಮನೆಯವರು ನಿಶ್ಚಯಿಸಿ ಮಾಡಿದ ಮದುವೆಯಾದರೆ ಹುಡುಗನ ಬಗ್ಗೆ ನೂರು ಸಲ ವಿಚಾರಿಸುತ್ತಾರೆ. ಅವನಿಗೆ ಸರಿಯಾಗಿ ಕೆಲಸ ಇದ್ಯಾ, ಅದು ಪರಮನೆಂಟ್ ಕೆಲಸವಾ, ಆಸ್ತಿಪಾಸ್ತಿ ಇದೆಯಾ, ಸ್ವಂತ ಮನೆ ಇದೆಯಾ, ಎಷ್ಟು ಸಂಬಳ ಬರುತ್ತದೆ, ಮನೆಯಲ್ಲಿ ಗಂಡನ ಮುದಿ ತಂದೆ ತಾಯಿ ಇರುತ್ತಾರಾ, ಅವರನ್ನು ನಾನೇ ನೋಡಬೇಕಾ ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ ಮೇಲೆ ಅದು ಸಮಾಧಾನಕರವಾಗಿದ್ದರೆ ಮಾತ್ರ ಮದುವೆಯಾಗುತ್ತಾರೆ. ಇಲ್ಲದಿದ್ದರೆ ಜಪ್ಪಯ್ಯ ಎಂದರೂ ಮದುವೆಯಾಗುವುದಿಲ್ಲ. ಅದೇ ಲವ್ ಆದರೆ ಹುಡುಗ ನೋಡಲಿಕ್ಕೆ ಸುಮಾರಾಗಿ ಅವಳ ಹೃದಯದಲ್ಲಿ ಗಂಟೆಯ ಶಬ್ದ ಹೊಮ್ಮಿದರೆ ಸಾಕು, ಉಳಿದ ವಿಷಯಗಳು ಗೌಣವಾಗುತ್ತವೆ. ಪ್ರಿಯಾಂಕಾಳಿಗೆ ಮುಸ್ಲಿಂ ಹುಡುಗನೊಂದಿಗೆ ಲವ್ ಆಗಿದೆ ಎನ್ನುವ ಸುದ್ದಿ ನಿಧಾನವಾಗಿ ಅವಳ ತಾಯಿಯ ಕಿವಿಗೆ ಬೀಳಲು ಶುರುವಾಗುತ್ತದೆ. ಅವರು ಮಗಳನ್ನು ಕರೆದು ಬುದ್ಧಿ ಹೇಳುತ್ತಾರೆ. ಆದರೆ ಅಷ್ಟರಲ್ಲಿ ಪ್ರಿಯಾಂಕಾ ಹೈದರಿಗೆ ಮನಸ್ಸು, ಕನಸು ಕೊಟ್ಟು ಆಗಿರುತ್ತದೆ. ಹೈದರ್ ಇನ್ನೋಳಿಯವನಾಗಿದ್ದರೂ ಫರಂಗಿಪೇಟೆಗೆ ಆಗಾಗ ಬಂದು ಪ್ರಿಯಾಂಕಾಳನ್ನು ಭೇಟಿಯಾಗುವುದರಿಂದ ತಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುವುದು ಎಂದು ಅರಿತ ಪ್ರಿಯಾಂಕಾ ತಾಯಿ ಫರಂಗಿಪೇಟೆಗೆ ಯಾವುದೇ ರೀತಿಯಲ್ಲಿಯೂ ಸಂಬಂಧ ಇರದ ಊರಿಗೆ ಶಿಫ್ಟ್ ಆಗುತ್ತಾರೆ. ಅದು ದರೆಗುಡ್ಡೆ.
ಇವಳನ್ನು ಹೀಗೆ ಬಿಟ್ಟರೆ ಇವಳು ಅವನೊಂದಿಗೆ ಓಡಿ ಹೋಗಿ ತಮ್ಮ ಮಾನ ಮರ್ಯಾದೆಯನ್ನು ಹರಾಜು ಹಾಕುತ್ತಾಳೆ ಎಂದು ಗೊತ್ತಾದ ನಂತರ ಪ್ರಿಯಾಂಕಾ ತಾಯಿ ಮತ್ತು ಸಂಬಂಧಿಕರು ಆಕೆಗೆ ಬೇರೆ ಯಾವುದಾದರೂ ಹುಡುಗನಿಗೆ ಗಂಟು ಹಾಕಿ ಬಿಡೋಣ ಎಂದು ತೀಮರ್ಾನಕ್ಕೆ ಬರುತ್ತಾರೆ. ಸಾಮಾನ್ಯವಾಗಿ ಎಲ್ಲ ಎವರೆಜ್ ತಂದೆ ತಾಯಿ ಮಾಡುವ ಕೆಲಸವನ್ನೇ ಇವರು ಮಾಡಿದ್ದಾರೆ. ಅದರಂತೆ ಫಾರಿನ್ ನಲ್ಲಿರುವ ಶಿರೂರು ಮೂಲದ ಯುವಕನನ್ನು ಹುಡುಕಿ ನಿಶ್ಚಿತಾರ್ಥ ಶಾಸ್ತ್ರವನ್ನು ಕೂಡ ಮುಗಿಸುತ್ತಾರೆ. ಹೇಗೂ ಮಗಳನ್ನು ಮದುವೆಯಾದ ನಂತರ ಅಳಿಯ ವಿದೇಶಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಕೆಲವು ವರ್ಷ ಇದ್ದ ಬಳಿಕ ಈ ಪ್ರೇಮ, ಲವ್ ಅಮಲು ಇಳಿದಿರುತ್ತದೆ. ನಂತರ ಹೇಗೂ ಮಗಳು, ಅಳಿಯ ಸುಧಾರಿಸಿಕೊಂಡು ಹೋಗುತ್ತಾರೆ ಎಂದು ತಾಯಿ ಜೀವ ಅಂದುಕೊಳ್ಳುತ್ತದೆ. ಇಲ್ಲಿಯೇ ಇರುವ ಯುವಕನಿಗೆ ಮದುವೆ ಮಾಡಿ ಕೊಟ್ಟರೆ ಹೈದರ್ ಹುಡುಕಿಕೊಂಡು ಹೋಗಿ ರಾದ್ಧಾಂತ ಮಾಡಿದರೆ ಮತ್ತು ಅವನ ಬಳಿ ಇವಳ ಯಾವ್ಯಾವ ಫೋಟೋ ಇದೆ, ಯಾರಿಗೊತ್ತು ಎಂದು ಅಂದುಕೊಂಡ ಎಲ್ಲರೂ ಶಿರೂರು ಹುಡುಗನಿಗೆ ಜೈ ಅಂದುಬಿಡುತ್ತಾರೆ. ಹೀಗೆ ಕೆಲವು ದಿನಗಳ ಹಿಂದೆ ನಿಶ್ಚಿತಾರ್ಥ ಕೂಡ ಮುಗಿದಿರುತ್ತದೆ. ಅದರ ನಂತರ ಪ್ರಿಯಾಂಕಾಳಿಗೆ ಚಡಪಡಿಕೆ ಶುರುವಾಗುತ್ತದೆ. ಎಲ್ಲಿ ಎಲ್ಲರೂ ಸೇರಿ ತನ್ನನ್ನು ಹೈದರ್ ನಿಂದ ಶಾಶ್ವತವಾಗಿ ದೂರ ಮಾಡುತ್ತಾರೋ ಎನ್ನುವ ಆತಂಕ ಶುರುವಾಗುತ್ತದೆ. ಅದಲ್ಲದೆ ಹೈದರ್ ತನ್ನನ್ನು ಚೆನ್ನಾಗಿ ನೋಡಿಕೊಳ್ಳುವ ವಾಗ್ದಾನ ಮಾಡಿದ್ದಾನೆ. ಅದಕ್ಕೆ ಪೂರ್ವಭಾವಿಯಾಗಿ ಪ್ರತಿ ತಿಂಗಳು ತನ್ನ ಬ್ಯಾಂಕ್ ಖಾತೆಗೆ ಹಣ ಕೂಡ ಹಾಕುತ್ತಿದ್ದಾನೆ. ಇನ್ನು ತಾನು ಅವನನ್ನು ಮದುವೆಯಾಗದೇ ಇದ್ದರೆ ಅವನು ಏನಾದರೂ ಮಾಡಿಕೊಂಡಾನು ಎನ್ನುವ ಹೆದರಿಕೆ ಪ್ರಿಯಾಂಕಾಳಿಗೆ ಬರುತ್ತದೆ. ಫೈನಲಿ ಏನೇ ಆಗಲಿ, ತಾನು ಓಡಿ ಹೋಗುವುದೇ ಸರಿ ಎನ್ನುವ ನಿಧರ್ಾರಕ್ಕೆ ಬರುತ್ತಾಳೆ.
ಪ್ರಿಯಾಂಕಾ ಓಡಿಹೋದ ವಿಷಯ ಗೊತ್ತಾದದ್ದೇ ಮರುದಿನ ಬೆಳಿಗ್ಗೆ ಮನೆಯವರೆಲ್ಲರೂ ಎದ್ದಾಗ. ನೋಡಿದರೆ ಹುಡುಗಿ ಮನೆಯಲ್ಲಿ ಇಲ್ಲ. ರಾತ್ರಿ ಸರಿ ಇದ್ಳು. ಎಲ್ಲರಿಗೂ ಜ್ಯೂಸ್ ಮಾಡಿಕೊಟ್ಟಿದ್ಳು. ಪ್ರೀತಿಯಿಂದ ಮಾತನಾಡಿಸಿದ್ಳು. ಬೆಳಿಗ್ಗೆ ನೋಡಿದರೆ ಮಾಯ ಆದ್ಳು ಎಂದರೆ ಏನು ಕಥೆ. ನಾವು ಹೈದರ್ ನೊಂದಿಗೆ ಮದುವೆ ಮಾಡಿಕೊಡಲಿಲ್ಲ ಎಂದು ಆತ್ಮಹತ್ಯೆ ಏನಾದರೂ ಮಾಡಿಕೊಂಡಳಾ ಎಂದು ಮನೆಯವರು ಎಲ್ಲಾ ಕಡೆ ಹುಡುಕುತ್ತಾರೆ. ಆದರೆ ಎಲ್ಲಿ ಕೂಡ ಹುಡುಗಿಯ ಸುಳಿವಿಲ್ಲ. ಅಷ್ಟರಲ್ಲಿ ಯಾರೋ ಬಂದು ಹೇಳುತ್ತಾರೆ “ನಿನ್ನೆ ರಾತ್ರಿ ಕಾರೋಂದು ನಿಮ್ಮ ಮನೆಯ ಹತ್ತಿರ ತುಂಬಾ ಹೊತ್ತು ಆಚೀಚೆ ಹೋಗುತ್ತಿತ್ತು” ಅಲ್ಲಿಗೆ ಪ್ರಿಯಾಂಕಾ ಓಡಿಹೋದ ವಿಷಯ ಎಲ್ಲರಿಗೂ ಕನ್ ಫರ್ಮ ಆಗುತ್ತದೆ. ಪ್ರಿಯಾಂಕಾ ಭಂಡಾರಿಯನ್ನು ಕಿಡ್ನಾಪ್ ಮಾಡಿರುವ ಸಾಧ್ಯತೆ ಕೂಡ ಇದೆ ಎಂದು ಸವಿತಾ ಸಮಾಜದ ಮುಖಂಡರು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಆದಷ್ಟು ಶೀಘ್ರದಲ್ಲಿ ಅವಳ ಪತ್ತೆಗೆ ಆಗ್ರಹಿಸಿದ್ದಾರೆ. ಪ್ರಿಯಾಂಕಾ ಇವತ್ತಲ್ಲ ನಾಳೆ ಪತ್ತೆಯಾಗಬಹುದು. ಆದರೆ ಅವಳ ಭವಿಷ್ಯ ಮಾತ್ರ ಹೇಗಿರುತ್ತೆ ಎನ್ನುವುದನ್ನು ಯೋಚಿಸುವಾಗ ಕಳವಳ ಉಂಟಾಗುವುದು ಸಹಜ. ಅವಳು ಕೊನೆ ತನಕ ಹೈದರ್ ನೊಂದಿಗೆ ಸುಖವಾಗಿ ಬಾಳಿದಳು ಎಂದು ಕಥೆ ಬರೆದ ಹಾಗೆ ಬದುಕು ನಡೆಯುವುದಿಲ್ಲ. ಮುಂದೆ ಅವಳ ಧರ್ಮ, ನಡೆ, ನುಡಿ ಅವಳನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅವಳ ಭವಿಷ್ಯ ಚೆನ್ನಾಗಿ ಇರಲಿ ಎಂದು ಹಾರೈಸುವುದಷ್ಟೇ ನಾವು ಈಗ ಮಾಡಬಹುದಾದ ಕೆಲಸ.
Leave A Reply