ಹಿಂದೂಗಳ ಮೇಲೆ ಮುಸ್ಲಿಮರ ದಾಳಿ, ಒಬ್ಬನ ಹತ್ಯೆ
ನವದೆಹಲಿ: ತಂದೆ-ಮಗ, ಹಾಗೂ ಆತನ ಗೆಳೆಯನೊಬ್ಬ ಸೇರಿ ಮೂವರ ಮೇಲೆ ಮುಸ್ಲಿಮರು ದಾಳಿ ಮಾಡಿದ್ದು, ಒಬ್ಬ ಹಿಂದೂ ವ್ಯಕ್ತಿ ಮೃತಪಟ್ಟಿದ್ದಾರೆ.
ಪೂರ್ವ ದೆಹಲಿಯ ಮಂಡಾವಾಲಿ ಎಂಬಲ್ಲಿ ಮುಸ್ಲಿಮರು ದೊಣ್ಣೆ ಹಾಗೂ ಗುಂಡಿನ ದಾಳಿ ಮಾಡಿದ್ದು, ಕಾಂತಿ ಪ್ರಸಾದ್ ಎಂಬುವವರು ಮೃತಪಟ್ಟಿದ್ದಾರೆ. ಅಲ್ಲದೆ ಆತನ ಮಗ ಧೀರಜ್ ಹಾಗೂ ಗೆಳೆಯರೊಬ್ಬರಿಗೆ ಗಾಯಗಳಾಗಿವೆ.
ಈ ಕುರಿತು ಸಿಸಿಟಿಯವಲ್ಲಿ ದೃಶ್ಯಗಳು ಸೆರೆಯಾಗಿದ್ದು, ಮುಸ್ಲಿಮರು ಕಾಂತಿ ಪ್ರಸಾದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಆತ ಸಹಾಯಕ್ಕಾಗಿ ಅಂಗಲಾಚಿದರೂ ದಾರಿಹೋಕರಾರೂ ಜೀವಭಯದಿಂದ ಸಹಾಯ ಮಾಡಿಲ್ಲ. ಕಾಂತಿ ಪ್ರಸಾದ್ ಪುತ್ರ ಸಹಾಯಕ್ಕೆ ಧಾವಿಸಿದ್ದು, ಆತನ ಮೇಲೆಯೇ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕಾಂತಿ ಪ್ರಸಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟೊತ್ತಿಗೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಸುಮಾರು 10-12 ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡಿದ್ದು, ಈಗಾಗಲೇ ಪೊಲೀಸರು ಮಹಮ್ಮದ್ ಅಲಿ ಹಾಗೂ ಮತ್ತೊಬ್ಬನನ್ನು ಬಂಧಿಸಿದ್ದು, ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಕೊಲೆಗೆ ನಿಖರ ಕಾರಣವೂ ತಿಳಿದುಬಂದಿಲ್ಲ.
Leave A Reply