ಕಾಂಗ್ರೆಸ್ ನೊಂದಿಗೆ ಪಾಕ್ ಸಂಬಂಧ ಕುರಿತ ಪ್ರಧಾನಿ ಹೇಳಿಕೆ ಕ್ಷಮೆಯಾಚಿಸುವ ಅಗತ್ಯವಿಲ್ಲ: ವೆಂಕಯ್ಯ ನಾಯ್ಡು
ದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪಾಕಿಸ್ತಾನದ ಜತೆ ಕಾಂಗ್ರೆಸ್ ಕೈ ಜೋಡಿದೆ ಎಂಬರ್ಥದಲ್ಲಿ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಗದ್ದಲ ಮಾಡಿತು.
ಈ ವೇಳೆ ಮಾತನಾಡಿದ ರಾಜ್ಯ ಸಭೆ ಸಭಾಪತಿ ವೆಂಕಯ್ಯ ನಾಯ್ಡು ವಿರೋಧ ಪಕ್ಷಗಳು ದುರ್ವರ್ತನೆ ತೋರುವುದು ಸರಿಯಲ್ಲ. ಹೇಳಿಕೆ ಬಗ್ಗೆ ಯಾರೂ ಕ್ಷಮಾಪಣೆ ಕೇಳುವುದಿಲ್ಲ. ರಾಜ್ಯಸಭೆ ಕಲಾಪದಲ್ಲಿ ಆ ರೀತಿಯ ಹೇಳಿಕೆಯನ್ನು ನೀಡಿಲ್ಲ. ಆದ್ದರಿಂದ ಇಲ್ಲಿ ಯಾರೂ ಕ್ಷಮೆ ಕೇಳುವುದಿಲ್ಲ ಎಂದು ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ನ ಇತರ ಮುಖಂಡರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಜತೆ ಕಾಂಗ್ರೆಸ್ ನಾಯಕರಿಗೆ ನಂಟಿದೆ ಎಂದಿದ್ದಾರೆ. ಆದ್ದರಿಂದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಪ್ರಧಾನಿ ಕ್ಷಮೆಗೆ ಆಗ್ರಹಿಸಿ, ಪಟ್ಟು ಹಿಡಿದು ಗದ್ದಲ ಆರಂಭಿಸಿದ್ದರು. ಇದರಿಂದ ಎರಡು ಭಾರಿ ಕಲಾಪ ಮುಂದೂಡಲಾಗಿತ್ತು. ನಂತರವೂ ಪ್ರತಿಭಟನೆ ಮುಂದುವರಿದಾಗ ತಾಳ್ಮೆ ಕಳೆದುಕೊಂಡ ವೆಂಕಯ್ಯ ನಾಯ್ಡು ಪ್ರತಿಭಟನೆ ನಡೆಸುತ್ತಿರುವವರನ್ನು ತರಾಟೆಗೆ ತೆಗೆದುಕೊಂಡರು.
Leave A Reply