ಮುಂದುವರಿದ ಪಾಕ್ ಕುತಂತ್ರ, ಉಗ್ರ ಹಫೀಜ್ ಸಯೀದ್ ಗೆ ಪಾಕ್ ಸೈನ್ಯದ ಬೆಂಬಲ
ದೆಹಲಿ: ಪಾಕಿಸ್ತಾನದ ಜನಸಾಮಾನ್ಯರಂತೆ ಕಾಶ್ಮೀರದ ವಿಚಾರದಲ್ಲಿ ಹೋರಾಟ ಮಾಡಲು ಉಗ್ರ ಹಫೀಜ್ ಸಯೀದ್ ಗೆ ಸ್ವಾತಂತ್ರ್ಯವಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೀದ್ ಬಜ್ವಾ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಾಕಿಸ್ತಾನ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಭಯೋತ್ಪಾದಕ ಹಫೀಜ್ ಸಯೀದ್ ಬೆಂಬಲಕ್ಕೆ ನಿಂತಿದೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೆಜ್ ಮುಷರಫ್ ‘ದೇಶ ರಕ್ಷಣೆ ಮತ್ತು ಭದ್ರತೆ ಕುರಿತು ಉಗ್ರ ಸಂಘಟನೆಗಳಾದ ಜೆಯುಡಿ ಮತ್ತು ಎಲ್ಇಟಿಯೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿ, ಉಗ್ರ ಹಫೀಜ್ ಸಯೀದ್ ಪರ ಮಾತನಾಡಿದ್ದ. ಮುಷರಫ್ ಹೇಳಿಕೆ ಬಂದ ನಂತರದ ದಿನವೇ ಸೈನ್ಯದ ಮುಖ್ಯಸ್ಥನೂ ಹಫೀಜ್ ಸಯೀದ್ ನನ್ನು ಬೆಂಬಲಿಸಿದ್ದಾರೆ.
ಲಷ್ಕರ್ ಈ ತಯ್ಯಬಾ ಉಗ್ರ ಸಂಘಟನೆ ಸ್ಥಾಪಕ ವಿಶ್ವ ಭಯೋತ್ಪಾದಕ ಪಟ್ಟಿಯಲ್ಲಿರುವ ಹಫೀಜ್ ಸಯೀದ್ ತಲೆ ತಂದವರಿಗೆ ವಿಶ್ವ ಸಂಸ್ಥೆ 10 ದಶಲಕ್ಷ ಹಣ ವಿಟ್ಟಿದೆ. ನವೆಂಬರ್ ನಲ್ಲಿ ಗೃಹ ಬಂಧನದಿಂದ ಉಗ್ರ ಹಫೀಜ್ ಸಯೀದ್ ನನ್ನು ಬಿಡುಗಡೆ ಮಾಡಿದ್ದನ್ನು ಭಾರತ ಸೇರಿ, ವಿಶ್ವ ಸಂಸ್ಥೆ ಖಂಡಿಸಿದ್ದವು. ಅಲ್ಲದೇ ಆತನ ವಿರುದ್ಧ ಕ್ರಮಕ್ಕೆ ಅಮೆರಿಕ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.
ವಿಶ್ವದ ಬಹುತೇಕ ರಾಷ್ಟ್ರಗಳು ವಿರೋಧಿಸಿದರೂ ಕೂಡ ಪಾಕಿಸ್ತಾನ ಸರ್ಕಾರ ಮತ್ತು ಸೈನ್ಯ ಉಗ್ರ ಹಫೀಜ್ ಸಯೀದ್ ಬೆಂಬಲಕ್ಕೆ ನಿಂತಿರುವುದು ಪಾಕ್ ಉದ್ಧಟತನಕ್ಕೆ ಸಾಕ್ಷಿಯಾಗಿದೆ.
Leave A Reply