ಗಂಡಿಗೆ ಹೆಣ್ಣು ಸಮಾನಳಲ್ಲ: ಮೌಲ್ವಿ ವಿವಾದಾತ್ಮಕ ಹೇಳಿಕೆ
ಟರ್ಕಿ: ಮುಸ್ಲಿಂ ಆಚರಣೆ ಕುರಿತು ಸದಾ ವಿವಾದ ಸೃಷ್ಟಿಸುವ ಮುಸ್ಲಿಂ ಮೌಲ್ವಿಗಳು ಇದೀಗ ಗಂಡಸ್ತನ ಗಂಡಿಗೆ ಹೆಣ್ಣು ಸಮಾನಳಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಹೆಣ್ಣು ಮತ್ತು ಗಂಡು ಸಮಾನಳಲ್ಲ. ಹೆಣ್ಣು ಬೇರೆ ಗಂಡೇ ಬೇರೆ ಎಂದು ಟರ್ಕಿಯ ಖ್ಯಾತ ಇಸ್ಲಾಮಿಕ್ ಮೌಲ್ವಿ ರಾಷ್ಟ್ರ ಮಟ್ಟದ ಟಿವಿ ಚಾನೆಲ್ ಒಂದರಲ್ಲಿ ಮಾತನಾಡುವಾಗ ಹೇಳಿದ್ದಾರೆ. ಅಲ್ಲದೇ ಗಡ್ಡ ತೆಗೆದಿರುವ ವ್ಯಕ್ತಿಯನ್ನು ಮಹಿಳೆಯರಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ, ಆತನಿಗೂ ಮಹಿಳೆಯರ ಮಧ್ಯೆ ಭಿನ್ನತೆ ಹುಡುಕಾಡಲು ಸಾಧ್ಯವಿಲ್ಲ ಎಂದು ಗಡ್ಡವಿಲ್ಲದ ಗಂಡಸರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಡು ಮತ್ತು ಹೆಣ್ಣನ್ನು ಪ್ರತ್ಯೇಕಿಸುವ ದೇಹದ ಎರಡು ಭಾಗಗಳಲ್ಲಿ ಗಡ್ಡ ಕೂಡ ಒಂದು ಎಂದು ಮೌಲ್ವಿ ಹೇಳಿದ್ದನ್ನು ಹರಿಯತ್ ಡೈಲಿ ವರದಿ ಮಾಡಿದೆ. ನೀವು ಗಡ್ಡವಿಲ್ಲದೇ ಉದ್ದ ಕೂದಲು ಬಿಟ್ಟವರನ್ನು ಹಿಂದೆಯಿಂದ ನೋಡಿ ಹೆಣ್ಣು ಎನ್ನಬಹುದು. ಆದರೆ ಗಡ್ಡವಿದ್ದರೆ ಇಂತಹ ಪ್ರಸಂಗ ಉಂಟಾಗುವುದಿಲ್ಲ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಗಂಡು ಮತ್ತು ಹೆಣ್ಣು ಒಂದೇ ಸಮನಾದ ಉಡುಪುಗಳನ್ನು ಧರಿಸುತ್ತಿದ್ದಾರೆ’ ಎಂದು ಮೌಲ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Leave A Reply