ಕ್ರಿಕೆಟ್ ದೇವರು, ಭಾರತ ರತ್ನ ಸಚಿನರನ್ನು ಅವಮಾನ ಮಾಡಿದ ಕಾಂಗ್ರೆಸ್
ದೆಹಲಿ: ಕ್ರಿಕೆಟ್ ದೇವರು, ಭಾರತ ರತ್ನ, ರಾಜ್ಯಸಭೆ ಸದಸ್ಯ ಸಚಿನ್ ತೆಂಡೂಲ್ಕರ್ ಅವರನ್ನು ರಾಜ್ಯ ಸಭೆ ಕಲಾಪದಲ್ಲಿ ಮಾತನಾಡಲು ಅವಕಾಶ ನೀಡದೆ ಕಾಂಗ್ರೆಸ್ ಸದಸ್ಯರು ಅವಮಾನಿಸಿದ್ದು, ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತದಲ್ಲಿ ಕ್ರೀಡಾ ಭವಿಷ್ಯದ ಬಗ್ಗೆ ಮಾತನಾಡಲು ಸಚಿನ್ ಎದ್ದು ನಿಂತಾಗ ಕಾಂಗ್ರೆಸ್ ಸದಸ್ಯರು ಗದ್ದಲ ಆರಂಭಿಸಿದ್ದರು. 2ಜಿ ಹಗರಣದ ಕುರತು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಬಗ್ಗೆ ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಸದನದಲ್ಲಿ ತೀವ್ರ ಗದ್ದಲ, ಕೋಲಾಹಲ ಸೃಷ್ಟಿಸಿದರು. ಇದರಿಂದ ಸಚಿನ್ ತೆಂಡೂಲ್ಕರ್ ಗೆ ತೀವ್ರ ಇರಿಸು ಮುರಿಸು ಉಂಟಾಯಿತು.
ರಾಜ್ಯಸಭೆಯಲ್ಲಿ ಪ್ರಥಮ ಭಾರಿಗೆ ಮಾತನಾಡಲು ಸಚಿನ್ ಮುಂದಾದಾಗ ಕಾಂಗ್ರೆಸ್ ಸದಸ್ಯರು ತೀವ್ರ ಗದ್ದಲ ಆರಂಭಿಸಿದ್ದರು. ಇದರಿಂದ ಸಚಿನ್ ಸುಮಾರು 10 ನಿಮಿಷ ನಿಂತುಕೊಂಡೆ ಇದ್ದರು. ಆದರೂ ಕಾಂಗ್ರೆಸ್ ಸದಸ್ಯರು ಗದ್ದಲ ಮುಂದುವರಿಸಿದರು. ರಾಜ್ಯಸಭೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ‘ಭಾರತ ರತ್ನ ಕ್ರಿಕೆಟ್ ದೇವರಿಗೆ ಅವಮಾನ ಮಾಡುವುದು ಸರಿಯಲ್ಲ. ಅವರಿಗೆ ಮಾತನಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದರೂ ಕಾಂಗ್ರೆಸ್ ಸದಸ್ಯರು ತಮ್ಮ ಪಟ್ಟು ಸಡಿಲಿಸಲಿಲ್ಲ.
ದೇಶದ ಕ್ರೀಡಾಲೋಕಕ್ಕೆ ಮಹತ್ವದ ಕೊಡುಗೆ ನೀಡಿದವರು ಮಾತನಾಡುತ್ತಿದ್ದಾರೆ. ಕೊನೆ ಪಕ್ಷ ಕ್ರೀಡಾ ಸ್ಫೂರ್ತಿಯನ್ನಾದರೂ ಮೆರೆಯಿರಿ ಎಂದರೂ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರಿಸಿ ಸಚಿನ್ ಗೆ ಮಾತನಾಡಲು ಅವಕಾಶ ನೀಡದೇ ಅವಮಾನ ಮಾಡಿದರು.
Leave A Reply