ಉತ್ತರ ಪ್ರದೇಶದಲ್ಲಿ ಗೋಧಾಮ ನಿರ್ಮಿಸಲು ಯೋಗಿ ಆದಿತ್ಯನಾಥ ನಿರ್ಧಾರ!

ಲಖನೌ: ಸದಾ ಒಂದಿಲ್ಲೊಂದು ದಿಟ್ಟ ಹಾಗೂ ಉಪಯುಕ್ತ ನಿರ್ಧಾರ ಕೈಗೊಳ್ಳುವುದರಲ್ಲಿ ಹೆಸರುವಾಸಿಯಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮತ್ತೊಂದು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.
ಅಕ್ರಮ ಕಸಾಯಿಖಾನೆಗಳಿಗೆ ಮುಕ್ತಿ ನೀಡಿ ಗೋರಕ್ಷಣೆಗೆ ಕಂಕಣಬದ್ಧರಾಗಿರುವ ಆದಿತ್ಯನಾಥ ಅವರು ಈಗ ಗೋವುಗಳ ರಕ್ಷಣೆಗಾಗಿ “ಗೋಧಾಮ” ನಿರ್ಮಿಸುವ ನಿರ್ಧಾರ ಪ್ರಕಟಿಸಿದ್ದಾರೆ.
ಇದು ಹಸುವಿನ ಅಭಯಾರಣ್ಯಕ್ಕೆ ಅನ್ವಯವಾಗುವ ಯೋಜನೆಯಾಗಿದ್ದು, ಕನ್ಹಾ ಉಫನ್ ಮಾರ್ಗದ ಜಮೀನಿನಲ್ಲಿ ಗೋಧಾಮ ನಿರ್ಮಿಸಲು ತೀರ್ಮಾನಿಸಲಾಗಿದೆ. “ಗೋವುಗಳ ರಕ್ಷಣೆಗಾಗಿ ಗೋಧಾಮಗಳನ್ನು ಸ್ಥಾಪಿಸುತ್ತಿದ್ದೇವೆ” ಎಂದು ಯೋಗಿ ಆದಿತ್ಯನಾಥ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರತಿ ಗೋಧಾಮಗಳಲ್ಲೂ ಒಂದು ಸಾವಿರ ಹಸುಗಳನ್ನು ಪೋಷಣೆ ಮಾಡುವ ನಿರ್ಧಾರ ಘೋಷಿಸಿದ್ದು, ಆರಂಭಿಕ ಹಂತವಾಗಿ ಬುಂದೇಲಖಂಡದ ಏಳು ಜಿಲ್ಲೆಗಳಲ್ಲಿ ಗೋಧಾಮ ನಿರ್ಮಿಸಿ ಸಕಲ ಸೌಲಭ್ಯ ಒದಗಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟಪಡಿಸಿದೆ.
ಒಟ್ಟಿನಲ್ಲಿ ಅಕ್ರಮ ಕಸಾಯಿಖಾನೆಗಳನ್ನು ನಿಷೇಧಿಸಿ ಗೋರಕ್ಷಣೆಗೆ ಮುಂದಾಗಿದ್ದ ಯೋಗಿ ಆದಿತ್ಯನಾಥರು ಈಗ ಗೋಧಾಮ ಸ್ಥಾಪಿಸಿ ಗೋವುಗಳ ರಕ್ಷಣೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.
Leave A Reply