ಹಿಂದೂ ಯುವತಿಯನ್ನು ಅಪಹರಿಸಿ, ಇಸ್ಲಾಂಗೆ ಮತಾಂತರಿಸಿ ಮದುವೆಯಾದ ಮತಾಂಧರು
ಕರಾಚಿ: ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಮುಸ್ಲಿಂ ಮತಾಂಧರ ದಾಳಿ ಮುಂದುವರಿದಿದ್ದು, ಪಾಕಿಸ್ತಾನದಲ್ಲಿ ಹಿಂದೂಗಳು ಸ್ವತಂತ್ರವಾಗಿ ಜೀವಿಸುವುದೇ ಕಷ್ಟವಾಗಿ ಪರಿಣಮಿಸಿದೆ. ಇದಕ್ಕೆ ಪುಷ್ಟಿ ಎಂಬಂತೆ ಪಾಕಿಸ್ತಾನದ ಥಾರ್ ಪ್ರದೇಶದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ, ಒತ್ತಾಯದಿಂದ ಅವಳನ್ನು ಮತಾಂತರ ಮಾಡಿ, ಮದುವೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಯುವತಿ ಕುಟುಂಬಸ್ಥರು ದೂರು ನೀಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಯುವತಿಯನ್ನು ಅಪಹರಣ ಮಾಡಿರುವ ಕುರಿತು ಇಸ್ಲಾಂಕೋಟ್ ನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವತಿ ಕುಟುಂಸ್ಥರು ‘ಮೂರು ಶಸ್ತ್ರಸಜ್ಜಿತ ವ್ಯಕ್ತಿಗಳು ಯುವತಿಯನ್ನು ಅಪಹರಿಸಿದಲ್ಲದೇ, ಮನೆಯಲ್ಲಿ ದರೋಡೆ ಮಾಡಿದ್ದಾರೆ. ಅಲ್ಲದೇ ಯುವತಿ ಸೇರಿ ಕುಟುಂಬಸ್ಥರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಪಾಕಿಸ್ತಾನ ಪತ್ರಿಕೆ ಡಾನ್ ವರದಿ ಮಾಡಿದೆ.
ಯುವತಿ ತಂದೆ ಹೀರಾ ಮೇಘ್ವಾರ ಸ್ಥಳೀಯ ಪೊಲೀಸರಿಗೆ ತನ್ನ ಮಗಳನ್ನು ಅಪಹರಿಸಿ, ಮತಾಂತರ ಮಾಡಲಾಗಿದೆ ಎಂದು ದೂರು ನೀಡಿದ್ದರು, ಯಾವುದೇ ಪೊಲೀಸರು ನೆರವಿಗೆ ಬಂದಿಲ್ಲ. ಸ್ಥಳೀಯ ಪೊಲೀಸರು ತಮ್ಮ ಮಗಳನ್ನು ರಕ್ಷಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Leave A Reply