ಲವ್ ಜಿಹಾದ್ ಗೆ ಯುವತಿ ಬಲಿ: ಅತ್ಯಾಚಾರವೆಸಗಿ, ಕೈಮೇಲಿದ್ದ ಓಂ ಟ್ಯಾಟೂ ಸುಟ್ಟ ಕಟುಕರು
ದೆಹಲಿ: ಹಿಂದೂ ಯುವತಿಯನ್ನು ಲವ್ ಜಿಹಾದ್ ಬಲಿ ಮಾಡಿ, ಮತಾಂತರಿಸಿ, ಅತ್ಯಾಚಾರ ಮಾಡಿ, ಮದುವೆಯಾಗಿದಲ್ಲದೇ, ಅವಳ ಕೈ ಮೇಲಿದ್ದ ಓಂ ಹಚ್ಚೆಯನ್ನು ಸುಟ್ಟು ಹಾಕಿರುವ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. 21 ವರ್ಷದ ಯುವತಿ ಮುಸ್ಲಿಂ ಯುವಕನಿಂದ ಲವ್ ಜಿಹಾದ್ ಗೆ ಬಲಿಯಾಗಿ ಇದೀಗ ಸಂಕಷ್ಟದಲ್ಲಿ ದಿನದೂಡುತ್ತಿದ್ದಾಳೆ.
ನಿರಂತರವಾಗಿ 15 ದಿನ ಅತ್ಯಾಚಾರ ಮಾಡಿ, ಮದುವೆಯಾಗಿದಲ್ಲದೇ, ಮುಸ್ಲಿಂ ಯುವಕನ ತಂದೆ ಯುವತಿಯ ಕೈ ಮೇಲಿದ್ದ ಓಂ ಹಚ್ಚೆಯನ್ನು ಆ್ಯಸಿಡ್ ಹಾಕಿ ಸುಟ್ಟಿದ್ದಾನೆ ಎಂದು ಯುವತಿಯನ್ನು ರಕ್ಷಿಸಿರುವ ಮೀರತ್ ಪೊಲೀಸರು ತಿಳಿಸಿದ್ದಾರೆ. ದೆಹಲಿಯ ಹೊರವಲಯದ ಮಂಗಲಪೂರಿಯಲ್ಲಿ ವಾಸಿಸುತ್ತಿದ್ದ ಯುವತಿಯನ್ನು ಇಮ್ರಾನ್ ಎಂಬ ಕಾಮಾಂಧ ಮರಳು ಮಾಡಿ ಅತ್ಯಾಚಾರ ಎಸಗಿದಲ್ಲದೇ ಕಿರುಕುಳ ನೀಡಿದ್ದಾನೆ.
ಕಾಲೇಜಿನಲ್ಲಿ ಪರಿಚಯವಾದ ಯುವತಿಯನ್ನು ಸೋನು ಎಂಬ ಹೆಸರಿನಲ್ಲಿ ಮರಳು ಮಾಡಿದ ದುರುಳ ಇಮ್ರಾನ್, ನನ್ನ ಸಹೋದರಿಗೆ ಹುಷಾರಿಲ್ಲ, ನೀನು ಅವಳ ಜತೆಗಿರಬೇಕು ಎಂದು ಆಹ್ವಾನಿಸಿ, ಮನೆಗೆ ಬಂದ ಯುವತಿಯನ್ನು ಕೋಣೆಯೊಳಗೆ ಕೂಡಿ ಹಾಕಿ 15 ದಿನ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಯುವತಿ ಪ್ರತಿರೋಧ ಒಡ್ಡಿದಾಗ ಇಮ್ರಾನನ ತಂದೆ ಯುವತಿ ಕೈಮೇಲೆ ಇದ್ದ ಓಂ ಹಚ್ಚೆಯನ್ನು ಆ್ಯಸಿಡ್ ಹಾಕಿ ಸುಟ್ಟಿದ್ದಾನೆ.
ಈ ಕುರಿತು ಮಂಗಲಪುರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯನ್ನು ಅತ್ಯಾಚಾರ ಮಾಡಿ, ಆ್ಯಸಿಡ್ ಹಾಕಿದ ತಂದೆ ಮತ್ತು ಮಗನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Leave A Reply