• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಬಿಜೆಪಿಯ ಮೇಲಿನ ಪ್ರೀತಿ, ಹೇಳಲಾಗದ ಬೇಗುದಿ, ಹೇಳಲೇಬೇಕಾದ ವಿಷಯಗಳನ್ನು ಒಳಗೊಂಡ ಪತ್ರ!

Nagendra Shenoy Posted On December 22, 2017
0


0
Shares
  • Share On Facebook
  • Tweet It

ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲು ದಿನಗಣನೆ ಆರಂಭವಾಗಿದೆ. ಇದು ಮತದಾರ ಮಾನಸಿಕವಾಗಿ ಸಜ್ಜಾಗುವಂತಹ ಸಮಯವೂ ಹೌದು. ರಾಜಕೀಯ ಪಕ್ಷಗಳು ಗೆಲ್ಲಲು ತಮ್ಮ ಕಸರತ್ತನ್ನು ಕೂಡ ಆರಂಭಿಸಿವೆ. ಈ ಹೊತ್ತಿನಲ್ಲಿ ಸಾಮಾನ್ಯ ಮತದಾರನ ಮನಸ್ಸಿನಲ್ಲಿ ಏನು ಸುಳಿಯುತ್ತಿದೆ ಎನ್ನುವುದು ತಿಳಿಯುವುದು ಕಷ್ಟ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಯುವಕನೊಬ್ಬ ತನ್ನ ಪಕ್ಷದ ಮೇಲಿನ ಪ್ರೀತಿ ಮತ್ತು ಹೇಳಲಾಗದ ಬೇಗುದಿ ಮತ್ತು ಹೇಳಲೇಬೇಕಾಗಿರುವ ಅನಿಸಿಕೆಗಳನ್ನು ಒಂದು ಪತ್ರದಲ್ಲಿ ಬರೆದು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕಳುಹಿಸಿದ್ದಾರೆ. ಆ ಪತ್ರ ಈಗ ಸಾಮಾಜಿಕ ತಾಣಗಳಲ್ಲಿ ಬಹಿರಂಗಗೊಂಡಿದೆ. ಅದರ ಭಾವಾರ್ಥವನ್ನು ಹಾಗೆ ಇಲ್ಲಿ ಹೇಳಿದ್ದೇವೆ.

“ಮೊತ್ತ ಮೊದಲಿಗೆ ಹಿಮಾಚಲ ಪ್ರದೇಶ ಮತ್ತು ಗುಜರಾತಿನ ಚುನಾವಣೆಯ ಗೆಲುವಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಮತ್ತು ಅದು ಕರ್ನಾಟಕದಲ್ಲಿಯೂ ಮರುಕಳಿಸಲಿ ಎಂದು ಬಯಸುತ್ತೇನೆ, ಅದಕ್ಕಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ.

ಮೊದಲಿಗೆ ಕರ್ನಾಟಕದ ಬಿಜೆಪಿಯಲ್ಲಿ ಒಳ್ಳೆಯ ವಕ್ತಾರರ ನೇಮಕವನ್ನು ತಾವು ಮಾಡಬೇಕು ಮತ್ತು ಬೇರೆ ಯಾರಿಗೂ ಬೇಕಾಬಿಟ್ಟಿ ಮಾತನಾಡಲು ಅವಕಾಶ ಕೊಡಬಾರದು. ಇತ್ತೀಚೆಗೆ ವಿಧಾನಪರಿಷತ್ ವಿಪಕ್ಷ ನಾಯಕ ಕೆ ಈಶ್ವರಪ್ಪನವರು ಕೊಟ್ಟ ಹೇಳಿಕೆಯನ್ನು ಉಪಯೋಗಿಸಿ ಕಾಂಗ್ರೆಸ್ ಸಾಕಷ್ಟು ಮೈಲೇಜ್ ಪಡೆದುಕೊಂಡಿದೆ. ಬಿಜೆಪಿಯ ಉನ್ನತ ನಾಯಕರು ಸಮಯ, ಸಂದರ್ಭ ನೋಡದೆ ಮನಸ್ಸಿಗೆ ತೋಚಿದ್ದನ್ನು ಮಾಧ್ಯಮಗಳಲ್ಲಿ ಮಾತನಾಡುವುದು ಮತ್ತು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಹಗುರವಾಗಿ ರಿಯಾಕ್ಟ್ ಮಾಡುವುದರಿಂದ ಪಕ್ಷಕ್ಕೆ ತುಂಬಾ ನಷ್ಟವಾಗುತ್ತಿದೆ. ಅದಕ್ಕೆ ತಾವು ಕಡಿವಾಣ ಹಾಕಬೇಕು.

ಇನ್ನು ಚುನಾವಣೆ ನಡೆಯಲು ಹೆಚ್ಚು ಕಡಿಮೆ ನಾಲ್ಕು ತಿಂಗಳು ಇವೆ. ಹೀಗಿರುವಾಗ ಯಾರನ್ನು ಕೂಡ ಪಕ್ಷದ ಮುಖವನ್ನಾಗಿ ಬಳಸುವುನ್ನು ತಡೆಯುವುದು ಸೂಕ್ತ. ಬಿಎಸ್ ಯಡಿಯೂರಪ್ಪನವರು ಬಿಜೆಪಿಯ ಉನ್ನತ ನಾಯಕರು ನಿಜ. ಆದರೆ ನಾನು ಗಮನಿಸಿದ ಅನೇಕ ಸರ್ವೆಗಳಲ್ಲಿ ಮತ್ತು ನನ್ನ ಮಟ್ಟಿಗಿನ ರಾಜಕೀಯ ವಿಶ್ಲೇಷಣೆಯ ಪ್ರಕಾರ ಬಿಜೆಪಿ ಪಕ್ಷದ ಮತದಾರನ ಮನಸ್ಸಿನೊಳಗೆ ಒಂದು ಭಾವನೆ ಇದೆ. ಯಡಿಯೂರಪ್ಪ ಪಕ್ಷಕ್ಕೆ ಅಗತ್ಯ ಇದ್ದಾಗ ಪಕ್ಷ ತೊರೆದು ಬೇರೆ ಪಕ್ಷ ಕಟ್ಟಿ ನಮ್ಮನ್ನು ಸೋಲಿಸಿದವರು. ಈಗ ಮತ್ತೆ ಪಕ್ಷಕ್ಕೆ ಬಂದಿರುವುದು ಮತ್ತು ಈಗಲೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವುದು ಸರಿಯಾ ಎನ್ನುವ ಭಾವನೆ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಮುಂದಿನ ಯಾವುದೇ ರ್ಯಾಲಿಯಲ್ಲಿ ಕೇವಲ ರಾಷ್ಟ್ರೀಯ ನಾಯಕತ್ವದ ಚಹರೆಗಳು ಇರಲಿ ಎನ್ನುವುದು ನನ್ನ ನಿರೀಕ್ಷೆ.
ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅನೇಕ ಯೋಜನೆಗಳು ಕೇವಲ ಹೆಸರಿಗೆ ಮಾತ್ರ ಇವೆ, ಅವು ಬೋಗಸ್ ಎಂದು ಸಾಬೀತಾಗಿವೆ. ಇನ್ನು ಅಲ್ಪಸಂಖ್ಯಾತರ ಒಲೈಕೆಗಾಗಿ ಅವರಿಗೂ ಬೇಡವಾದ ಟಿಪ್ಪು ಜಯಂತಿ, ವಿಫಲಗೊಂಡಿರುವ ಇಂದಿರಾ ಕ್ಯಾಂಟಿನ್, ಶಾದಿ ಭಾಗ್ಯ, ರೈತರ ಸಾವಿರಕ್ಕೂ ಹೆಚ್ಚಿನ ಆತ್ಮಹತ್ಯೆ, ಬಿಜೆಪಿ, ಸಂಘಪರಿವಾರದ ನಾಯಕರ ಕಗ್ಗೊಲೆ, ರಾಜಧಾನಿಯಲ್ಲಿ ಸ್ಥಗಿತಗೊಂಡಿರುವ ಅಭಿವೃದ್ಧಿ ಹೀಗೆ ಇದನ್ನೆಲ್ಲ ಜನರಿಗೆ ತಲುಪಿಸುವ ಕೆಲಸ ಮಾಡಬೇಕು.  ಪಕ್ಷದ ಯುವ ಮುಖಂಡರನ್ನು ಮುಂಚೂಣಿಯಲ್ಲಿ ತನ್ನಿ, ಅದು ಟಿಕೆಟ್ ಹಂಚಿಕೆಯಲ್ಲಿಯೂ ಇರಬಹುದು ಮತ್ತು ಪ್ರಚಾರದ ಸಮಯದಲ್ಲಿಯಾದರೂ ಅವರನ್ನು ಬಳಸುವ ಕೆಲಸ ನಡೆಯಲಿ. ಅನಂತ ಕುಮಾರ್ ಹೆಗ್ಡೆ, ನಳಿನ್ ಕುಮಾರ್ ಕಟೀಲ್ ಅವರಂತಹ ನಾಯಕರು ಬಿಜೆಪಿಯ ಸಿದ್ಧಾಂತವನ್ನು ಮನೆಮನ ಮುಟ್ಟಿಸುವಲ್ಲಿ ಸಮರ್ಥರಾಗಿದ್ದಾರೆ. ಅವರ ಸೇವೆ ಇನ್ನಷ್ಟು ಪಡೆಯುವಂತಾಗಲಿ.

ಪ್ರತಿ ಜಿಲ್ಲೆಯಲ್ಲಿ ಪ್ರಧಾನಿ ಮಂತ್ರಿಗಳು ಕನಿಷ್ಟ ಒಂದಾದರೂ ರ್ಯಾಲಿ ನಡೆಸುವಂತೆ ನೋಡಿಕೊಳ್ಳಿ. ಕರ್ನಾಟಕ ಸರಕಾರದ ವೈಫಲ್ಯ ಮತ್ತು ಕೇಂದ್ರದ ಯಶಸ್ವಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ನಡೆಯಲಿ. ಅಗತ್ಯ ಬಿದ್ದಲ್ಲಿ ಪ್ರಧಾನಿಗಳ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿ ಗ್ರಾಮಾಂತರ ಭಾಗದ ಜನರಿಗೆ ಅರ್ಥವಾಗುವಂತೆ ಮಾಡುವ ಕೆಲಸ ಕೂಡ ನಡೆಯಲಿ.
ನಮ್ಮ ಪಕ್ಷದಲ್ಲಿ ಕಾಂಗ್ರೆಸ್ಸಿನಿಂದ ಬಂದ ಎಸ್ ಎಂ ಕೃಷ್ಣ ಅವರಂತಹ ಹಿರಿಯ ನಾಯಕರಿದ್ದಾರೆ. ಅವರನ್ನು ಸಮರ್ಥವಾಗಿ ಬಳಸುವ ಕೆಲಸ ಕೂಡ ನಡೆಯಲೇಬೇಕು. ಅವರು ಕಾಂಗ್ರೆಸ್ಸಿನ ಹುಳುಕುಗಳನ್ನು ಹೇಳಲು ಯೋಗ್ಯರಿದ್ದಾರೆ. ಅವರ ಸೇವೆ ಪಕ್ಷ ಯಾಕೆ ಬಳಸಲ್ಲ ಎಂದು ಗೊತ್ತಾಗುತ್ತಿಲ್ಲ.
ಕರ್ನಾಟಕದ ಕಾಂಗ್ರೆಸ್ ಸರಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ನಿರತವಾಗಿದ್ದರೂ ಅದನ್ನು ಜನರಿಗೆ ತಿಳಿಸುವ ಮತ್ತು ಆ ಕುರಿತು ಪರಿಣಾಮಕಾರಿಯಾಗಿ ಹೋರಾಡುವ ಕೆಲಸ ರಾಜ್ಯ ಬಿಜೆಪಿ ಮಾಡುತ್ತಿಲ್ಲ. ಹಾಗೆ ಹಿಂದೂ ಸಹೋದರರು ಕೊಲೆಯಾದಾಗಲೂ ತೀಕ್ಣವಾಗಿ ಪ್ರತಿಭಟಿಸುವ ಕೆಲಸ ನಡೆಯುತ್ತಿಲ್ಲ. ಎಲ್ಲವೂ ಕೇವಲ ಸಾಂಕೇತಿಕವಾಗಿ ಒಂದೆರಡು ದಿನಕ್ಕೆ ಮಾತ್ರ ಸೀಮಿತವಾಗಿವೆ. ಕಾಂಗ್ರೆಸ್ಸಿನ ಐದು ವರ್ಷಗಳ ದುರಾಡಳಿತದಲ್ಲಿ ಬಿಜೆಪಿ ಸರಿಯಾಗಿ ನಡೆಸಿದ ಪ್ರತಿಭಟನೆ ಎಂದರೆ ಅದು ಮಂಗಳೂರು ಚಲೋ ಮಾತ್ರ. ಅದರ ನಂತರ ಮತ್ತೆ ಪಕ್ಷ ಮೌನಕ್ಕೆ ಶರಣಾಗಿದೆ.

ಕಳೆದ ಬಾರಿ ಲೋಕಸಭಾ ಚುನಾವಣೆಯ ಸಂದರ್ಭ ಬಿಜೆಪಿ ರಾಜ್ಯ ಘಟಕದಿಂದ ಅನೇಕ ಕಾರ್ಯಕ್ರಮಗಳು ನಡೆದಿವೆ. ಆ ಸಮಯದಲ್ಲಿ “ಮಿಸ್ಡ್ ಕಾಲ್ ಅಭಿಯಾನ” ಸಹಿತ ಪಕ್ಷಕ್ಕೆ ಜನರನ್ನು ಸೆಳೆಯುವ ಅನೇಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆದಿದ್ದವು. ಆವತ್ತು ವಿವಿಧ ಕ್ಷೇತ್ರ, ಸ್ತರ, ಉದ್ಯಮದ ಜನ ಸಾಗರೋಪಾದಿಯಲ್ಲಿ ಭಾಗವಹಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರಣಿಕರ್ಥರಾಗಿದ್ದರು. ಅಂತಹ ದೂರವಾಣಿ ಸಂಖ್ಯೆಗಳು ಬಿಜೆಪಿಯ ಕೇಂದ್ರ ಘಟಕದಲ್ಲಿ ಇದ್ದು ಅದನ್ನು ಕೂಡ ಪಕ್ಷ ಬಳಸಿಕೊಳ್ಳುವುದು ಸೂಕ್ತ ಎನ್ನುವುದು ನನ್ನ ಅಪೇಕ್ಷೆ.

ಇಷ್ಟು ಹೇಳಿ ನನ್ನ ಪತ್ರವನ್ನು ಮುಗಿಸುತ್ತಿದ್ದೇನೆ. ನಿಮಗೆ ಮತ್ತೊಮ್ಮೆ ಅಭಿನಂದನೆ ಮತ್ತು ಶುಭಹಾರೈಕೆಗಳು. ಪಕ್ಷ ಕರ್ನಾಟಕದಲ್ಲಿ ಹೊಸ ಶಕ್ತಿಯೊಂದಿಗೆ ನವಸಂವತ್ಸರವನ್ನು ಕಾಣಲು ಕಾತರಿಸುತ್ತಿದೆ ಎಂದು ಹೇಳಲು ಬಯಸುತ್ತೇನೆ
ಭಾರತೀಯ ಜನತಾ ಪಾರ್ಟಿಯ ಹಿತಚಿಂತಕ”

0
Shares
  • Share On Facebook
  • Tweet It


- Advertisement -


Trending Now
ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
Nagendra Shenoy May 31, 2025
ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
Nagendra Shenoy May 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
    • ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search