ಸ್ವತಂತ್ರ ಅಭ್ಯರ್ಥಿ ಬೆಂಬಲ, ಗುಜರಾತಿನಲ್ಲಿ ಶತಕ ಬಾರಿಸಿದ ಬಿಜೆಪಿ
Posted On December 23, 2017
0
ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕವೂ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಬಿಜೆಪಿ ಶತಕ ಬಾರಿಸಿದೆ.
99 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಬಿಜೆಪಿಗೆ ಲುಡಾವಾಡ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ರತನ್ ರಾಥೋಡ್ ಬೆಂಬಲ ಸೂಚಿಸಿದ್ದು, ಬಿಜೆಪಿ ಶಾಸಕರ ಸಂಖ್ಯೆ 100 ತಲುಪಿದೆ.
ಕಾಂಗ್ರೆಸ್ಸಿನಿಂದ ಅಮಾನತುಗೊಂಡಿದ್ದ ಇವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಸೆಡ್ಡು ಹೊಡೆದು ಜಯಿಸಿದ್ದರು. ಈಗ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.
ಅಲ್ಲದೆ ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ಮೊರ್ವಾ ಹದೀಫ್ ಅವರು ಸಹ ಬಿಜೆಪಿಗೆ ಬೆಂಬಲ ಸೂಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಗುಜರಾತಿನಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ, ಕಾಂಗ್ರೆಸ್ ನಾವೇ ಗೆದ್ದಿದ್ದೇವೆ ಎಂಬ ರೀತಿಯಲ್ಲಿ ಬೀಗಿದ್ದರಲ್ಲದೆ, ಬಿಜೆಪಿ 100ರ ಗಡಿ ಸಹ ದಾಟಲಿಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು. ಆದರೆ ಕೊನೆಗೂ ಬಿಜೆಪಿ ಶತಕ ಬಾರಿಸಿದೆ.
Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
January 28, 2026









