ಅಷ್ಟಕ್ಕೂ ವಿಜಯ್ ರೂಪಾನಿ ಅವರನ್ನೇ ಸಿಎಂ ಅಗಿ ಮುಂದುವರಿಸಿದ್ದು ಏಕೆ ಗೊತ್ತಾ?
Posted On December 23, 2017
ಗಾಂಧಿನಗರ: ಈ ಬಾರಿ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಲೇ ಪಟೇಲರೊಬ್ಬರು ಗುಜರಾತ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತಿಗೆ ತೆರೆ ಬಿದ್ದಿದ್ದು, ಎರಡನೇ ಅವಧಿಗೂ ಜೈನ್ ಬನಿಯಾ ಸಮುದಾಯದ ವಿಜಯ್ ರೂಪಾನಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ನಿತೀನ್ ಪಟೇಲ್ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಆದರೆ ಬಲಿಷ್ಠ ಸಮುದಾಯ ಪಟೇಲರನ್ನು ಬಿಟ್ಟು ಬಿಜೆಪಿ ವರಿಷ್ಠರೇಕೆ ವಿಜಯ್ ರೂಪಾನಿ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಯಲು ಅನುವು ಮಾಡಿಕೊಟ್ಟಿದ್ದಾರೆ? ವಿಜಯ್ ರೂಪಾನಿ ಅವರ ಆಡಳಿತದ ಗುಣವೈಶಿಷ್ಟ್ಯಗಳೇನು? ಅವರನ್ನೇ ಮುಂದುವರಿಸಲು ಕಾರಣಗಳೇನು? ಅವರೇ ಏಕೆ ಮತ್ತ ಗುಜರಾತಿನ ಸಿಎಂ ಆಗಬೇಕು? ಈ ಎಲ್ಲ ಕಾರಣ ಗಮನಿಸಿಯೇ ಬಿಜೆಪಿ ಮುಖಂಡರು ವಿಜಯ್ ರೂಪಾನಿ ಅವರನ್ನು ಸಿಎಂ ಆಗಿ ಮುಂದುವರಿಸಲು ತೀರ್ಮಾನಿಸಿದ್ದಾರೆ. ಆ ಕಾರಣಗಳು ಇಲ್ಲಿವೆ.
- ಗುಜರಾತ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಆನಂದಿಬೆನ್ ಬಳಿಕ ಅಧಿಕಾರ ವಹಿಸಿಕೊಂಡ ವಿಜಯ್ ರೂಪಾನಿ ಉತ್ತಮ ಆಡಳಿತ ನೀಡಿದ್ದಾರೆ.
- ಉತ್ತಮ ಆಡಳಿತದ ಜತೆಗೆ ನರೇಂದ್ರ ಮೋದಿ ಅವರ ಕ್ಲೀನ್ ಇಮೇಜನ್ನು ಜನರಿಗೆ ನೀಡಿದ ಕೀರ್ತಿ ವಿಜಯ್ ರೂಪಾನಿ ಅವರದ್ದು. ಇವರ ವಿರುದ್ಧ ಯಾವುದೇ ಹಗರಣದ ಆರೋಪ ಕೇಳಿಬಂದಿಲ್ಲ.
- ವಿಜಯ್ ರೂಪಾನಿ ಅವರು ನರೇಂದ್ರ ಮೋದಿ, ಆನಂದಿಬೆನ್, ಅಮಿತ್ ಶಾ ಅವರಿಗೆ ಆಪ್ತರು. ಅವರ ಮೊದಲ ಅವಧಿಯ ಆಡಳಿತ ಇವರೆಲ್ಲರ ಮೆಚ್ಚುಗೆ ಪಡೆದಿದೆ.
- ವಿದ್ಯಾರ್ಥಿ ಜೀವನದಿಂದಲೂ ವಿಜಯ್ ರೂಪಾನಿ ಸಂಘಟನೆಯಲ್ಲಿ ತೊಡಗಿದವರು. ಸಂಘಟನಾ ಚತುರ ಎನಿಸಿದವರು. ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಬಂದವರು.
- ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, 3 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಇವರು 1971 ಆರೆಸ್ಸೆಸ್, ಬಿಜೆಪಿ (ಆಗಿನ ಜನಸಂಘ) ಸೇರಿದ್ದು, ಅಂದಿನಿಂದ ಇಂದಿನವರೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- Advertisement -
Trending Now
ಕೃಷಿ ಮಾಡ್ಬೇಕು, ಪೆರೋಲ್ ಕೊಡಿ ವಿನಂತಿಗೆ ಹೈಕೋರ್ಟ್ ಅಸ್ತು!
December 2, 2024
Leave A Reply