ಬಾಹ್ಯ ಸೌಂದರ್ಯಕ್ಕಿಂತ ಆಂತರ್ಯದ ಸೌಂದರ್ಯವೇ ಮುಖ್ಯ ಎನ್ನುತ್ತೆ ಈ ಮೊಟ್ಟೆ!
Posted On July 7, 2017
29 ದಾಟಿದರೆ ಇನ್ನು ಜನಾರ್ಧನನಿಗೆ ಮದುವೆಯಾಗುವುದು ಕಷ್ಟ, ಸನ್ಯಾಸಿಯಾಗುವ ಯೋಗವಿದೆ ಎಂದು ಹೇಳುವ ಜೋತಿಷಿಗಳ ಮಾತಿನಿಂದ ಶುರುವಾಗುವ ಕಥೆ ಅಧ್ಭುತವಾಗಿ ಮುಂದೆ ಸಾಗುತ್ತದೆ. 28ರ ವಯಸ್ಸಿನಲ್ಲಿ ಹುಡುಗಿ ಸಿಗುವುದೇ ಕಷ್ಟ ಅಂತಹ ಸಂಧರ್ಭದಲ್ಲಿ ಬೋಳು ತಲೆಯ ನಾಯಕನಿಗೆ ಮದುವೆಯಾಗಲು ಹುಡುಗಿ ಸಿಗುವಳೆ ಅನ್ನೋದೇ ಚಿತ್ರದ ಕಥಾ ವಸ್ತು.
ಒಂದೆಡೆ ಮನೆ ಮನೆಗೆ ಹೋಗಿ ಹುಡುಗಿ ನೋಡಿ ಕಿತ್ತಳೆ ಹಣ್ಣಿನ ಜೂಸ್ ಕುಡಿಯೋದು ಬಿಟ್ರೆ ಹೆಣ್ಣು ಒಪ್ಪಿಕೊಳ್ಳುತ್ತಿಲ್ಲ ಎನ್ನುವ ತಲೆನೋವು ಜನಾರ್ಧನ ನ ಅಪ್ಪ ಅಮ್ಮನಿಗೆ. ಹೀಗೆ ನಾಯಕನಿಗೆ ಹೆಣ್ಣು ಹುಡುಕುವ ವಿಷಯದಲ್ಲೇ ಕಥೆ ಮುಂದುವರಿಯುತ್ತಾ ಸಾಗುತ್ತದೆ! ಹುಡುಗಿ ಸಿಗದೆ ಇದ್ದಾಗ ಜನಾರ್ಧನನಿಗೆ ಒಬ್ರೆ ಸ್ಪೂರ್ತಿ ಅದು ನಟ ಸಾರ್ವಭೌಮ ಡಾ. ರಾಜ್‌ಕುಮಾರ್. ಹಳೆಯ ರಾಜ್‌ಕುಮಾರ್ ಅವರ ಹಾಡುಗಳನ್ನು ಅಲ್ಲಲ್ಲಿ ಬಳಸಿರುವುದು ವಿಭಿನ್ನವಾಗಿ ಮೂಡಿ ಬಂದಿದೆ. ಹೀಗೆ ಸಿನಿಮಾದಲ್ಲಿ ನಾಯಕ ನಟ ತಾನಾಗಿಯೇ ಹುಡುಗಿಯನ್ನು ಹುಡುಕಿ ಕೊಳ್ಳುತ್ತಾನಾ ಇಲ್ಲ ಸನ್ಯಾಸಿಯಾಗುತ್ತಾನ ಅನ್ನೋದನ್ನ ನೀವು ಸಿನಿಮಾ ಮಂದಿರಕ್ಕೆ ಹೋಗಿ ನೋಡಬೇಕು!
ಚಿತ್ರದ ನಾಯಕ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಈ ಪ್ರಯತ್ನಕ್ಕೆ ಭೇಷ ಅನ್ನಲೇ ಬೇಕು. ಒಂದು ಸಿನಿಮಾಗೆ ಎಷ್ಟು ವಿಷಯಗಳು ಬೇಕೋ ಅಷ್ಟೇ ವಿಷಯಗಳನ್ನು ತೋರಿಸುವ ಕೆಲಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ ಅಂದ್ರೆ ತಪ್ಪಾಗದು. ಪ್ರವೀಣ್ ಶ್ರೀಯಾನ್ ಅವರ ಕ್ಯಾಮರ ಕೆಲಸ ಸಿನಿಮಾ ಚೆನ್ನಾಗಿ ಮೂಡಿ ಬರಲು ಸಹಕಾರಿಯಾಗಿದೆ. ಸಿನಿಮಾ ಕೆಲವು ಕಡೆ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂದು ಒಂದೊಮ್ಮೆ ಅನ್ನಿಸಿದರು ಅಲ್ಲಲಿ ಬರುವ ಹಾಸ್ಯದ ಸನ್ನಿವೇಶ ನಗೆಗಡಲಲ್ಲಿ ತೇಲಿಬಿಡುತ್ತದೆ. ಹೀಗೆ ಸಿನಿಮಾ ಸಾಗುವವಾಗ ಬರುವ ಹಿನ್ನಲೆ ಸಂಗೀತ ಮತ್ತು ಚಿತ್ರದ ಹಾಡುಗಳು ನಿಜಕ್ಕೂ ಚೆನ್ನಾಗಿ ಮೂಡಿಬಂದಿದೆ. ಮಿಧುನ್ ಮುಕುಂಧನ್ ನಾನು ಕನ್ನಡದ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಎಂದು ಎಲ್ಲರ ದೃಷ್ಟಿ ಅವ್ರನ್ನೇ ನೋಡುವ ಹಾಗೆ ಮಾಡಿದೆ.
ಚಿತ್ರದಲ್ಲಿ ಎಲ್ಲರ ಪಾತ್ರವು ಚೆನ್ನಾಗಿ ಮೂಡಿ ಬಂದಿದೆ. ಕಾಲೇಜ್ ನಲ್ಲಿ ಕೆಲಸ ಮಾಡುವ ಶ್ರೀನಿವಾಸ ಅವರ ಪಾತ್ರವಂತು ಅಧ್ಭುತ. ಹೀಗೆ ಪ್ರತಿ ಒಬ್ಬರ ಪಾತ್ರವು ನಿಮ್ಮನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.. ಮ್ಯಾಂಗೋ ಪಿಕಲ್ ನಿರ್ಮಾಣದ ಈ ಸಿನಿಮಾವನ್ನು ನೋಡಿ ಲೂಸಿಯ ಪವನ್ ಕುಮಾರ್ ಕೈ ಜೋಡಿಸಿದ್ದು ಯಾವ ಕಾರಣಕ್ಕೆ ಅನ್ನೋದು ಈ ಚಿತ್ರ ಈಗ ಸಾಬೀತು ಪಡಿಸಿದೆ. ಒಟ್ಟಿನಲ್ಲಿ ಸಿನಿಮಾ ನಿಮ್ಮನ್ನು ಎರಡು ಘಂಟೆ ಐದು ನಿಮಿಷ ಮನೋರಂಜಿಸುವುದರಲ್ಲಿ ಎರಡು ಮಾತಿಲ್ಲ.
ರಾಜ್ ಶೆಟ್ಟಿ ಕಥೆ ಹೇಳಿ ಶಾರ್ಟ್ ಫಿಲ್ಮ್ ಮಾಡೋಣ ಎಂದು ಸುಹಾನ್ ಪ್ರಸಾದ್ ಗೆ ಹೇಳಿದಾಗ ‘ ಬೇಡ ರಾಜ್ ಇದನ್ನು ದೊಡ್ಡ ಮಟ್ಟದಲ್ಲೇ ಮಾಡೋಣ ಎಂದು ಹೇಳದ್ದಿದ್ದ್ರೆ ಈ ಸಿನಿಮಾ ಇವತ್ತು ಯೂಟ್ಯೂಬ್ನಲ್ಲಿ ಇರುತ್ತಿತ್ತು!!!
- Advertisement -
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply