ಎಲ್ಲಿದ್ದೀರಿ ಪರಿಸರವಾದಿಗಳೇ ಬನ್ನಿ ಕ್ರಿಸ್ ಮಸ್, ಹೊಸ ವರ್ಷದ ಪರಿಸರ ಮಾಲಿನ್ಯ ತಡೆಯ ಬನ್ನಿ
ನಮಗೆಲ್ಲರಿಗೂ ಗೊತ್ತಿರುವಂತೆ ಕೆಲ ದಿನಗಳಲ್ಲಿ ಹೊಸ ವರ್ಷದ ಆಗಮನವಾಗಲಿದೆ, ಅದಕ್ಕಿಂತಲೂ ಮುಂಚೆ ಕ್ರಿಸ್ ಮಸ್ ಆಚರಣೆ ನಡೆಯಲಿದೆ. ಆದರೆ ನಮ್ಮ ನ್ಯಾಯಾಂಗ, ಮಾಧ್ಯಮ, ರಾಜಕಾರಣಿಗಳು, ಸಾಮಾಜಿಕ ಜಾಲತಾಣದ ಸ್ವಘೋಷಿತ ಬುದ್ಧಿಜೀವಿಗಳು ಮತ್ತು ಪರಿಸರವಾದಿಗಳು ಈ ಎರಡು ಹಬ್ಬಗಳು ಮುಗಿಯುವವರೆಗೆ ಬಾಯಿ ಮುಚ್ಚಿಕೊಂಡೆ ಇರುತ್ತಾರೆ. ಇವರೆಲ್ಲರ ಪರಿಸರ ಹಾನಿಯ ಕಲ್ಪನೆ ಈ ಎರಡು ಹಬ್ಬಗಳಿಗೆ ಅನ್ವಯವೇ ಆಗುವುದಿಲ್ಲ.
ಬುದ್ಧಿಜೀವಿಗಳು, ಪರಿಸರವಾದಿಗಳು ಕೇವಲ ಹಿಂದೂ ಹಬ್ಬಗಳಾದ ಹೋಳಿ, ದೀಪಾವಳಿ, ಜಲಿಕಟ್ಟು, ಗಣೇಶ್ ಚತುರ್ಥಿ, ದುರ್ಗಾ ಪೂಜೆ ವೇಳೆಗೆ ಮಾತ್ರ ಇವರ ಪರಿಸರ ಕಾಳಜಿ ಹೊರಹೊಮ್ಮುತ್ತೆ. ಕೇವಲ ಹಿಂದೂ ಧರ್ಮಗಳ ಹಬ್ಬಗಳದ್ದೂ ಮಾತ್ರ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವ ಇವರ ಎಡಬಿಡಂಗಿತನ ಈ ಹಬ್ಬಗಳಂದೇ ಹೊರಬೀಳುತ್ತದೆ. ಹಿಂದೂಯೇತರ ಧರ್ಮಗಳ ಹಬ್ಬಗಳಲ್ಲಿ ಉಂಟಾಗದ ಪರಿಸರ ಮಾಲಿನ್ಯ, ಮೌಢ್ಯತೆ ಇವರಿಗೆ ಹಿಂದೂಗಳ ಹಬ್ಬದಲ್ಲಿ ಕಾಣಿಸುತ್ತದೆ.
ಹಿಂದೂ ವಿರೋಧಿ, ಎಡಬಿಡಂಗಿ ಪರಿಸರವಾದಿಗಳಿಗೊಂದಿಷ್ಟು ಪ್ರಶ್ನೆಗಳು
- ದೀಪಾವಳಿಗೆ ಶಬ್ಧಮಾಲಿನ್ಯ, ವಾಯುಮಾಲಿನ್ಯ ಆಗುತ್ತದೆ ಎಂದು ಘೀಳಿಡುವವರು ಕ್ರಿಸ್ ಮಸ್ ನಿಂದಾಗುವ ಮಾಲಿನ್ಯವನ್ನು ಪ್ರಶ್ನಿಸಬೇಕಲ್ಲವೇ?
- ಬಕ್ರಿದ್ ಮತ್ತು ಕ್ರಿಸ್ ಮಸ್ ವೇಳೆಯೂ ಪ್ರಾಣಿಗಳ ಹಿಂಸೆ ಮಾಡಲಾಗುತ್ತದೆ. ಆದರೆ ಕೇವಲ ಜಲಿಕಟ್ಟು ಕ್ರೀಡೆ ವೇಳೆ ಮಾತ್ರ ಹಿಂಸೆ ನೀಡಲಾಗುತ್ತದೆ ಎಂಬುದಕ್ಕೆ ಅರ್ಥವಿದೆಯೇ?
- ಬಕ್ರೀದ್ ಮತ್ತು ಕ್ರಿಸ್ ಮಸ್ ಹಬ್ಬದಿಂದಲೂ ವಾಯು, ಪರಿಸರ, ಮಣ್ಣು, ಜಲ ಮಾಲಿನ್ಯವಾಗುತ್ತದೆ. ಅದರಿಂದ ರೋಗಗಳು ಹರಡುತ್ತವೆ. ಸ್ವಚ್ಛತೆ ಸಮಸ್ಯೆ ತೀವ್ರವಾಗುತ್ತದೆ. ಆದರೆ ಕೇವಲ ಹೋಳಿ ಹಬ್ಬಕ್ಕೆ ಮಾತ್ರ ಏಕೆ ವಿರೋಧ ವ್ಯಕ್ತಪಡಿಸಲಾಗುತ್ತೇ? ಹೋಳಿ ಹಬ್ಬದಂದು ಜಲಮಾಲಿನ್ಯ ಆಗುತ್ತದೆ ಎಂದು ಘೀಳಿಡುವುದು ಎಷ್ಟು ಸರಿ
- ಈದ್ ಮತ್ತು ಕ್ರಿಸ್ ಮಸ್ ಆಚರಣೆ ವೇಳೆ ಬಳಸುವ ಪದಾರ್ಥಗಳಿಂದಲೂ ಅಪಾರ ಪ್ರಮಾಣದ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಆದರೆ ಕೇವಲ ಗಣೇಶ ಚತುರ್ಥಿ ವೇಳೆ ಮಾತ್ರ ತ್ಯಾಜ್ಯ ಉತ್ಪಾದನೆಯಾಗುತ್ತದೆ ಎಂದು ಬೊಗಳುವುದು ಏಕೆ?
- ಸಾರ್ವಜನಿಕ ಜಮೀನಿನಲ್ಲಿ ಮಸೀದಿ, ಚರ್ಚ್ ಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಆದರೆ ಕೇವಲ ಹಿಂದೂ ದೇವಾಲಯಗಳ ಮೇಲೆ ಏಕೆ ಕ್ರಮ ಕೈಗೊಳ್ಳಲಾಗುತ್ತಿದೆ.
- ಕ್ರಿಸ್ ಮಸ್ ಹಬ್ಬದಲ್ಲಿ ಸಿಕ್ಕಾಪಟ್ಟೆ ಬಳಸುವ ಲೈಟಿಂಗ್ಸ್ ನಿಂದ ಜಾಗತಿಕ ತಾಪಮಾನದ ಮೇಲೆ ಹೊಡೆತ ಬೀಳುವುದಿಲ್ಲವೇ?
ಕೇವಲ ಹಿಂದೂ ಧರ್ಮದ ಆಚರಣೆಗಳನ್ನು ಗುರಿಯಾಗಿಟ್ಟುಕೊಂಡು ಬೇಕಾಬಿಟ್ಟಿಯಾಗಿ ವಿರೋಧಿಸುವ ಬದಲು ಎಲ್ಲ ಧರ್ಮದಲ್ಲಿನ ಕೊಳಕುಗಳನ್ನು ತಡೆಯಲು ಮುಂದಾಗಿ. ಹಿಂದೂಗಳ ಸಹನಾಶೀಲರು ಎಂಬುದನ್ನು ದುರುಯೋಗ ಪಡಿಸಿಕೊಂಡರೆ, ಭಾರಿ ಪರಿಣಾಮ ಎದುರಿಸಬೇಕಾದೀತು. ಹಿಂದೂಗಳಿಗೆ ಶಾಂತಿ ಧೂತ ರಾಮ ಆದರ್ಶವೂ ಇದೆ, ಹಿಂದೂ ರಕ್ಷಕ ಶಿವಾಜಿಯ ಕಾರ್ಯಶೈಲಿಯ ಆದರ್ಶವೂ ಇದೆ. ನೆನಪಿರಲಿ
Leave A Reply