ಉಗ್ರ ಬುರ್ಹಾನ್ ವನಿ ಹುತಾತ್ಮ ಎನ್ನುವ ನ್ಯಾಷನಲ್ ಕಾನ್ಫರೆನ್ಸ್ ಶಾಸಕನ ಬೆಂಬಲ ಯಾರಿಗೆ?
ಶ್ರೀನಗರ: ಜವಾಹರ್ ಲಾಲ್ ನೆಹರೂ ಕಾಲದಿಂದಲೂ, ಶೇಖ್ ಅಬ್ದುಲ್ಲಾರಿಂದ ಒಮರ್ ಅಬ್ದುಲ್ಲಾವರೆಗೂ ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಪಾಕಿಸ್ತಾನದ ಪರ ಒಲಿವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ನ್ಯಾಷನಲ್ ಕಾನ್ಫರೆನ್ಸ್ ಶಾಸಕ ಅಬ್ದುಲ್ ಮಜೀದ್, ಕಾಶ್ಮೀರದಲ್ಲಿ ಹತ್ಯೆಗೀಡಾಗಿರುವ ಬುರ್ಹಾನ್ ವನಿ ಸೇರಿ ಎಲ್ಲರೂ ಹುತಾತ್ಮರು ಎಂದು ಕರೆದಿದ್ದಾರೆ.
ಕಾಶ್ಮೀರದಲ್ಲಿ ಇದುವರೆಗೂ ಹಲವು ಮಿಲಿಟಂಟ್ ಗಳ ಹತ್ಯೆಯಾಗಿದೆ. ಬುರ್ಹಾನ್ ವನಿ ಸೇರಿ ಅವರೆಲ್ಲರೂ ಹುತಾತ್ಮರು ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಆದರೆ, ಇವರೆಲ್ಲರೂ ಉಗ್ರರು ಎಂದು ಗೊತ್ತಿದ್ದರೂ, ಅವರು ಹುತಾತ್ಮರು ಎನ್ನುವ ಮಜೀದ್ ಅವರ ಬೆಂಬಲ ಉಗ್ರರಿಗಾ? ಇವರೂ ಉಗ್ರರನ್ನು ಬೆಂಬಲಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ.
2016ರ ಜುಲೈ 8ರಂದು ಉಗ್ರ ಬುರ್ಹಾನ್ ವನಿಯನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು. ಅಲ್ಲದೆ ಪ್ರಸಕ್ತ ವರ್ಷದಲ್ಲಿ ಕಾಶ್ಮೀರದಲ್ಲಿ ಸೇನೆ ಬರೋಬ್ಬರಿ 203 ಉಗ್ರರನ್ನು ಹತ್ಯೆ ಮಾಡಿದೆ. ಆದರೆ, ಹತರಾದ ಉಗ್ರರು ಹುತಾತ್ಮರನ್ನು ಎನ್ನುವ ನ್ಯಾಷನಲ್ ಕಾನ್ಫರೆನ್ಸ್ ಶಾಸಕನ ಮನಸ್ಥಿತಿ ಎಂಬುದು ಗೊತ್ತಾಗುತ್ತದೆ ಬಿಡಿ.
Leave A Reply