ದೆಹಲಿ ನಿವಾಸಿಗಳಿಗೆ ಕ್ರಿಸ್ ಮಸ್ ಉಡುಗೊರೆ, ಮೆಟ್ರೋ ರೈಲಿಗೆ ಇಂದು ಮೋದಿ ಚಾಲನೆ
Posted On December 25, 2017
ದೆಹಲಿ: ದೆಹಲಿ ನಿವಾಸಿಗಳಿಗೆ ಕ್ರಿಸ್ ಮಸ್ ಉಡುಗೊರೆ ಸಿಗಲಿದ್ದು, ಸೋಮವಾರ ದೆಹಲಿಯ ಮೆಟ್ರೋ ಮೆಜೆಂತಾ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ನೋಯ್ಡಾದ ಬೊಟ್ಯಾನಿಕಲ್ ಗಾರ್ಡನ್ ನಿಂದ ದಕ್ಷಿಣ ದೆಹಲಿಯ ಕಲ್ಕಾಜಿ ಮಂದಿರದವರೆಗೆ ಸಂಪರ್ಕ ಕಲ್ಪಿಸುವ 12.64 ಕಿ.ಮೀ. ಉದ್ದದ ರೈಲು ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.
ಬೊಟ್ಯಾನಿಕಲ್ ಗಾರ್ಡನ್ ನಲ್ಲಿ ಮೆಟ್ರೋ ರೈಲಿಗೆ ಪ್ರಧಾನಿ ಚಾಲನೆ ನೀಡಲಿದ್ದು, ವಿಶೇಷ ಭದ್ರತಾ ತಂಡ ಬಿಗಿ ಬಂದೋಬಸ್ತ್ ಒದಗಿಸಲು ಸಕಲ ಸಿದ್ಧತೆ ನಡೆಸಿದೆ.
ಭದ್ರತೆಗಾಗಿ ಬೊಟ್ಯಾನಿಕಲ್ ಗಾರ್ಡನ್ ಸುತ್ತ 15 ವಲಯಗಳನ್ನಾಗಿ ಮಾಡಿದ್ದು, ಪ್ರತಿ ವಲಯಕ್ಕೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಮೆಜೆಂತಾ ಮೆಟ್ರೋ ರೈಲಿನ ಕುರಿತು ಮಾತನಾಡಿರುವ ಮೋದಿ ಅವರು, ನಗರ ಸಾರಿಗೆ ಆಧುನೀಕರಣದ ನಿದರ್ಶನ ಎಂದು ಬಣ್ಣಿಸಿದ್ದಾರೆ. ಒಟ್ಟಿನಲ್ಲಿ ಕ್ರಿಸ್ ಮಸ್ ದಿನವೇ ಮೆಟ್ರೋ ರೈಲಿಗೆ ಚಾಲನೆ ನೀಡಲಿರುವುದು ಜನರಿಗೆ ಉಡುಗೊರೆಯಾದಂತಾಗಲಿದೆ.
- Advertisement -
Leave A Reply