• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯುವ ಶಾಸಕನಾಗಿದ್ದಾಗ ವಿಧಾನಸಭೆಗೆ ಬಿಡದೇ ದರ್ಪ ಮೆರೆದ ಕಾಂಗ್ರೆಸ್ಸಿಗರ ಎದುರೇ ಸಿಎಂ ಗದ್ದುಗೆ ಏರಿದ ಜೈರಾಮ್ ಠಾಕೂರ್

ತೇಜಸ್ವಿಪ್ರತಾಪ್, ಮಂಗಳೂರು Posted On December 25, 2017


  • Share On Facebook
  • Tweet It

ಅದು 2013ರ ಮಳೆಗಾಲದ ಸಮಯ, ಹಿಮಾಚಲದ ಶಿಮ್ಲಾ ಹಸುರು ಮೈತುಂಬಿಕೊಂಡು ನಿಂತಿತ್ತು. ಅದೇ ವೇಳೆ ಕಾಂಗ್ರೆಸ್ ನ ರಾಷ್ಟ್ರೀಯ ಸಮಾವೇಶ ಹಮ್ಮಿಕೊಂಡಿತ್ತು. ದೇಶದ ನಾನಾ ರಾಜ್ಯಗಳ ಘಟಾನುಘಟಿ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ನಾಲ್ಕನೇ ಭಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ವೀರಭದ್ರ ಸಿಂಗ್ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶವನ್ನು ಅದ್ಧೂರಿಯಾಗಿ ಏರ್ಪಡಿಸಿ, ಹೈ ಕಮಾಂಡ್ ಗೆ ಧನ್ಯತೆ ಅರ್ಪಿಸಿದ್ದರು. ಸೋನಿಯಾ ಗಾಂಧಿ ನೇತೃತ್ವದ ಆ ಸಮಾವೇಶದಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ, ದಿಗ್ವಿಜಯ್ ಸಿಂಗ್, ಅಶೋಕ್ ಗೆಹ್ಲೋಟ್, ಶೀಲಾ ದಿಕ್ಷಿತ್, ವಿಲಾಸರಾವ್ ದೇಶಮುಖ್ ಮತ್ತು ಅಮರಿಂದರ್ ಸಿಂಗ್ ಸೇರಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಸಮಾಗಮವೇ ಆಗಿತ್ತು.

ಅತ್ತ ಕಾಂಗ್ರೆಸ್ ಅದ್ಧೂರಿ, ವೈಭವೋಪೇತ ಕಾರ್ಯಕ್ರಮ ನಡೆಯುತ್ತಿದ್ದರೇ, ಸಮಾವೇಶದ ಅನತಿ ದೂರದಲ್ಲೇ ಶಾಸಕನಾಗಿ ಆಯ್ಕೆಯಾಗಿದ್ದ ಯುವಕನೊಬ್ಬನಿಗೆ ವಿಧಾನಸಭೆ ಕಟ್ಟದೊಳಗೆ ಹೋಗಲು ಬಿಡಲಿಲ್ಲ. ಇನ್ನು ಅದೇ ವೇಳೆ ಅತ್ತ ಆಗಮಿಸಿದ್ದ ಸೋನಿಯಾ ಗಾಂಧಿ, ವೀರಭದ್ರ ಸಿಂಗ್ ರನ್ನು ಒಳಬಿಟ್ಟ ಬೆಂಗಾವಲು ಪಡೆಯುವರು ಆ ಯುವ ಶಾಸಕನನ್ನು ಅರ್ಧ ಗಂಟೆ ಕಾಯಿಸಿದರು.

ಆಗ ಯುವ ಶಾಸಕ ‘ನಾನು ಶಾಸಕ, ನನಗೇಕೆ ವಿಧಾನಸಭೆ ಕಚೇರಿಯೊಳಗೆ ಬಿಡುತ್ತಿಲ್ಲ. ಇದು ಪ್ರಜಾಪ್ರಭುತ್ವ. ಅವರೇನು ರಾಜ್ಯಾಡಳಿತದಲ್ಲಿದ್ದಾರೆ. ಈ ದರಿದ್ರ ಸಂಸ್ಕೃತಿಗೆ ತಡೆ ಹಾಕಬೇಕು ಎಂದು ಅಲ್ಲೇ ಇದ್ದ ವರದಿಗಾರರ ಎದುರು ಆಕ್ರೋಶ ವ್ಯಕ್ತಪಡಿಸಿದ್ದ.

‘ಆ ದರಿದ್ರ ಸಂಸ್ಕೃತಿಗೆ ತಡೆ ಹಾಕಬೇಕಾದರೆ ನೀನು ಸಿಎಂ ಆಗಬೇಕು’ ಎಂದು ಹೀಯಾಳಿಸಿ, ಪುಕಟ್ಟೆ ಸಲಹೆ ನೀಡಿದ್ದರು ಸಂಬಂಧಿಕರೊಬ್ಬರು. ಯುವಕ ಮುಗುಳು ನಗೆ ಬೀರಿ ಸುಮ್ಮನಾಗಿದ್ದ.

ಅಂದು ಯುವಕನಾಗಿದ್ದ ಆ ಯುವಕನಿಗೆ ಇದೀಗ 52 ವರ್ಷ ವಯಸ್ಸಾಗಿರುವ ಜೈರಾಮ್ ಠಾಕೂರ್ ಇಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಶಾಸಕನಾಗಿದ್ದರು ವಿಧಾನ ಸಭೆ ಕಚೇರಿಯೊಳಗೆ ಬಿಡದೇ ದಾಷ್ಟ್ರ್ಯ ಮೆರೆದ ಕಾಂಗ್ರೆಸ್ ನ ದರ್ಪಾಡಳಿತವನ್ನು ಮೆಟ್ಟಿ ನಿಂತು ಅದೇ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು ಪ್ರಜಾಪ್ರಭುತ್ವಕ್ಕೆ ಜಯವೇ ಸರಿ.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಡ ಕುಟುಂಬದಿಂದ ಹೋರಾಟದ ಮೂಲಕವೇ ಮುನ್ನೆಲೆಗೆ ಬಂದಿರುವ ಜೈರಾಮ್ ಠಾಕೂರ್ ರಾಜಕೀಯ ಜೀವನವೇ ಅದ್ಭುತ. 1965ರಲ್ಲಿ ಬಡ, ರೈತ ಕುಟುಂಬದಲ್ಲಿ ಜನಿಸಿರುವ ಜೈರಾಮ್ ಅವರಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದಾರೆ. ಇಡೀ ಕುಟುಂಬವನ್ನು ಜೈ ರಾಮ್ ಅವರ ತಂದೆ ಕಷ್ಟದಲ್ಲೇ ಸಲಹಿದ್ದರು. ಜೈರಾಮ್ ಶಿಕ್ಷಣಕ್ಕೆ ಅವರ ಅಪ್ಪ ನಿತ್ಯ ಕೃಷಿ ಮಾಡಿ ಸಹಾಯ ಮಾಡಿದ್ದರು. ಚಂಡಿಗಡದ ಪಂಜಾಬ್ ವಿವಿಯಿಂದ ಎಂಎ ಪಡೆದ ನಂತರ ಕೃಷಿಗೆ ಸಹಾಯ ಮಾಡಲು ಕುಟುಂಬಸ್ಥರು ಆಹ್ವಾನ ನೀಡಿದ್ದರು.

ಆದರೆ ಠಾಕೂರ್ ತಮ್ಮ ಕುಟುಂಬಸ್ಥರ ವಿರೋಧದ ಮಧ್ಯೆ 1993ರಲ್ಲಿ ಶಾಸಕ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿ ಉತ್ತಮ ಪೈಪೋಟಿ ನೀಡಿ ಸೋಲಂಡರು. 1998ರ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿ ವಿಜಯಿಯಾಗಿದ್ದರು. ನಂತರ ಅವರ ವಿಜಯ ಯಾತ್ರೆಯನ್ನು ತಡೆದವರಿಲ್ಲ. ಐದು ಭಾರಿ ಒಂದೇ ಕ್ಷೇತ್ರದಿಂದ ನಿರಂತರವಾಗಿ ವಿಜಯಶಾಲಿಯಾಗಿದ್ದಾರೆ.

ಹಲವು ಮಹತ್ತರ ಘಟಗಳನ್ನು ಎದುರಿಸಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಸಚಿವರಾಗಿ, ಕಾರ್ಯನಿರ್ವಹಿಸಿರುವ ಜೈರಾಮ್ ಠಾಕೂರ್ ತಳಮಟ್ಟದ ಜನರ ನೋವು ಅರಿತವರು. ಇವರ ಪತ್ನಿ ಕರ್ನಾಟಕದ ಶಿವಮೊಗ್ಗದ ಡಾ.ಸಾಧನಾ ಕನ್ನಡತಿ ಎಂಬುದು ಹೆಮ್ಮೆಯಾದರೇ, ಅವರೂ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ಕಾರ್ಯಕರ್ತೆಯಾಗಿ ಹೋರಾಟದ ಹಿನ್ನೆಲೆಯಲ್ಲಿ ಬಂದವರು.

  • Share On Facebook
  • Tweet It


- Advertisement -


Trending Now
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
ತೇಜಸ್ವಿಪ್ರತಾಪ್, ಮಂಗಳೂರು March 25, 2023
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
ತೇಜಸ್ವಿಪ್ರತಾಪ್, ಮಂಗಳೂರು March 24, 2023
Leave A Reply

  • Recent Posts

    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
  • Popular Posts

    • 1
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 2
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 3
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 4
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 5
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search