ಕೊನೆಗೂ ಮಣಿದ ಪಾಕಿಸ್ತಾನ, ಕುಲಭೂಷಣ ಜಾಧವ್ ಅವರಿಗೆ ರಾಯಭಾರ ಒಪ್ಪಿಗೆ
ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪದಲ್ಲಿ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಿರುವ ಪಾಕಿಸ್ತಾನ ಜಾಧವ್ ಅವರ ತಾಯಿ ಹಾಗೂ ಪತ್ನಿಯ ಭೇಟಿಗೆ ಸೋಮವಾರ ಅವಕಾಶ ನೀಡಿರುವ ಬೆನ್ನಲ್ಲೇ ರಾಯಭಾರ ಒಪ್ಪಿಗೆ ನೀಡುವುದಾಗಿ ಸಹ ತೀರ್ಮಾನಿಸಿದೆ.
ರಾಯಭಾರ ಒಪ್ಪಿಗೆಗೆ ಭಾರತ ಇದುವರೆಗೆ ಸಲ್ಲಿಸಿದ್ದ 22 ಮನವಿ ತಿರಸ್ಕರಿಸಿದ್ದ ಪಾಕಿಸ್ತಾನ ಕೊನೆಗೂ ಮಣಿದು ಸೋಮವಾರ ರಾಯಭಾರ ಅನುಮತಿಗೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಒಪ್ಪಿಗೆ ಸೂಚಿಸಿದೆ.
ಅತ್ತ ಜಾಧವ್ ಅವರ ಪತ್ನಿ ಹಾಗೂ ತಾಯಿ ಪಾಕಿಸ್ತಾನ ತಲುಪುವ ವಿಮಾನ ತಡವಾಗಿದ್ದು,ಇಬ್ಬರೂ ಪಾಕಿಸ್ತಾನದಲ್ಲಿ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಜಾಧವ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ವಿರುದ್ಧ ಬೇಹುಗಾರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಕುಲಭೂಷಣ ಜಾಧವ್ ಅವರನ್ನು ಬಂಧಿಸಿ ಉದ್ಧಟತನ ಮೆರೆದಿದ್ದಲ್ಲದೆ, ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ ಭಾರತ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ದು ಸಮರ್ಪಕವಾಗಿ ವಾದ ಮಾಡಿತ್ತಲ್ಲದೇ, ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕಿಸ್ತಾನ ವಿಧಿಸಿದ್ದ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಮಾಡಿತ್ತು.
ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಬಳಿಕ ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ಮೆತ್ತಗಾಗಿದ್ದು, ಜಾಧವ್ ಅವರ ಪತ್ನಿ ಹಾಗೂ ತಾಯಿಗೆ ಭೇಟಿ ನೀಡಲು ಅವಕಾಶ ನೀಡಿತ್ತು. ಈಗ ರಾಯಭಾರ ಒಪ್ಪಿಗೆ ಸಹ ನೀಡಿದೆ.
Leave A Reply