ಭದ್ರತೆಗೆ ಅಪಾಯ, ಮುಂಬೈ ಸೈಂಬಿಯೋಸಿಸ್ ಶಾಲೆಯಲ್ಲಿ ಬುರ್ಖಾ ನಿಷೇಧ
ಮುಂಬೈ: ಶಾಲೆಯಲ್ಲಿ ಬುರ್ಖಾ ಧರಿಸಿ ಹೊರಗಿನ ಯುವತಿಯರು ಪ್ರವೇಶ ಮಾಡುತ್ತಿರುವುದರಿಂದ ಶಾಲೆಯ ಭದ್ರತೆಗೆ ಅಪಾಯ ಎದುರಾಗಿದ್ದು, ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಶಾಲೆಗೆ ಬರುವುದನ್ನು ಮುಂಬೈನ ಸೈಂಬಿಯೋಸಿಸ್ ಶಾಲಾ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಬುರ್ಖಾ ನಿಷೇಧಿಸಿರುವ ಕುರಿತು ವಿದ್ಯಾರ್ಥಿನಿಯರ ಕುಟುಂಬಕ್ಕೆ ಪತ್ರ ಬರೆದಿರುವ ಶಾಲಾ ಆಡಳಿತ ಮಂಡಳಿ ‘ವಿದ್ಯಾರ್ಥಿನಿಯರೆಂದು ಹೇಳಿಕೊಂಡು, ಹೊರಗಿನ ಯುವತಿಯರು ಶಾಲೆ ಪ್ರವೇಶಿಸುತ್ತಿದ್ದಾರೆ. ಇದು ಶಾಲೆಯ ಭದ್ರತೆಗೆ ಅಪಾಯ ಒಡ್ಡಿದೆ. ಅಲ್ಲದೇ ಪೋಷಕರು ಬಂದಾಗ ವಿದ್ಯಾರ್ಥಿನಿಯರನ್ನು ಗುರುತಿಸಲು ಆಗದೇ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶಾಲೆಯಲ್ಲಿ ಬುರ್ಖಾ ನಿಷೇಧಿಸಲು ಕಾರಣ ಎಂದು ಹೇಳಿದ್ದಾರೆ.
ಶಾಲೆಯಲ್ಲಿ ಮಾತ್ರ ಬುರ್ಖಾ ನಿಷೇಧಿಸಿದ್ದು, ಶಾಲೆ ಮುಗಿದ ತಕ್ಷಣ ವಿದ್ಯಾರ್ಥಿನಿಯರು ಬುರ್ಖಾ ಧರಿಸಬಹುದು. ಇತ್ತೀಚೆಗೆ ವಿದ್ಯಾರ್ಥಿನಿಯರ ಸಾಲಿನಲ್ಲಿ ಇಬ್ಬರು ಬುರ್ಖಾಧಾರಿಗಳು ಬಂದು ಕೂಡಿದ್ದರು. ಅವರ ಹೆಸರು, ಹಾಜರಾತಿ ಸಂಖ್ಯೆ ಕೇಳಲು ಹೋದಾಗ ಶಾಲೆಯಿಂದ ಓಡಿ ಹೋಗಿದ್ದಾರೆ. ಹೀಗೆ ಶಾಲೆಗೆ ಯಾರ್ಯಾರೋ ಬರಲು ಅವಕಾಶ ನೀಡುವ ಬುರ್ಖಾ ನಿಷೇಧಿಸಲಾಗಿದೆ. ಅದನ್ನು ಶಾಲೆ ಬಿಟ್ಟ ತಕ್ಷಣ ಧರಿಸಬಹುದು ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ನಾವು ಯಾವುದೇ ಧರ್ಮದ ಆಚರಣೆ ವಿರುದ್ಧವಲ್ಲ. ಕ್ಯಾಮೆರಾಕೆ ಮುಖ ಕಾಣದೇ ಭದ್ರತೆ ಪರಿಶೀಲನೆಗೆ ಸಮಸ್ಯೆಯಾಗುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ. ಇದರಲ್ಲಿ ಧಾರ್ಮಿಕ ಕಾರಣಗಳನ್ನು ಹುಡುಕಬಾರದು. ಕೇವಲ ನಮ್ಮ ದಾಖಲೆಗಾಗಿ ಮತ್ತು ಶಾಲೆಯ ರಕ್ಷಣೆಗೆ ಮಾತ್ರ ಈ ನಿಯಮ ಜಾರಿ ತರಲಾಗಿದೆ ಎಂದು ಶಾಲೆ ಟ್ರಸ್ಟಿ ಕಮಲರಾಜ್ ತಿಳಿಸಿದ್ದಾರೆ.
Leave A Reply