ಆಸ್ಪತ್ರೆಗೆ ವೀಲ್ ಚೇರ್ ,ವಾಟರ್ ಹೀಟರ್ ಮತ್ತು ಹಣ್ಣುಹಂಪಲುಗಳನ್ನು ವಿತರಿಸಿ ಅಟಲ್ ಜೀ ಜನ್ಮದಿನಾಚರಣೆ
ಮಾಜಿ ಪ್ರಧಾನ ಮಂತ್ರಿ, ದೇಶ ಕಂಡ ಅಪ್ರತಿಮ ನಾಯಕ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಹುಟ್ಟುಹಬ್ಬವನ್ನು ಮಂಗಳೂರು ನಗರ ದಕ್ಷಿಣ ಭಾರತೀಯ ಜನತಾ ಪಾರ್ಟಿಯು ಅರ್ಥಪೂರ್ಣವಾಗಿ ಆಚರಿಸಿತು.ವೆನ್ ಲಾಕ್ ಆಸ್ಪತ್ರೆಗೆ ಐದು ವಿಲ್ ಚೇರ್ ಗಳನ್ನು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಹಸ್ತಾಂತರಿಸಿದರೆ, ಲೇಡಿಗೋಶನ್ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಯಂತ್ರ, ವಾಟರ್ ಹೀಟರ್ ಮತ್ತು ರೋಗಿಗಳಿಗೆ ಹಣ್ಣುಹಂಪಲುಗಳನ್ನು ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಪೂರ್ಣಿಮಾ ಅವರು ವಿತರಿಸಿದರು.
ಕೊಡಿಯಾಲ್ ಬೈಲ್ ನಲ್ಲಿರುವ ಡಾ| ಗಿರಿಧರ್ ರಾವ್ ಸಂಜೀವ್ ಬಾಯಿ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಹಣ್ಣುಹಂಪಲುಗಳನ್ನು ಯೋಗೀಶ್ ಭಟ್ ಅವರು ವಿತರಿಸಿದರೆ,
ಜೆಪ್ಪು ಮಾರುಕಟ್ಟೆಯಲ್ಲಿರುವ ಭಗಿನಿ ಸಮಾಜ ಶಿಶು ನಿಲಯದಲ್ಲಿ ಭೋಜನ ವ್ಯವಸ್ಥೆ ಏರ್ಪಡಿಸಿ, ಹಣ್ಣು ಹಂಪಲು ಜೊತೆಗೆ ಅಗತ್ಯ ವಸ್ತುಗಳನ್ನು ವಿತರಿಸಿ ವಾಜಪೇಯಿಯವರ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಸುವಂತೆ ಮೋನಪ್ಪ ಭಂಡಾರಿಯವರು ಪ್ರಾರ್ಥಿಸಿದರು.ಶಿವಭಾಗ್ ನಲ್ಲಿರುವ ಸಿಟಿಜನ್ ಎಲೈಯನ್ಸ್ ಫಾರ್ ರೂರಲ್ ಡೆವೆಲಪ್ ಮೆಂಟ್ ಮತ್ತು ಸಂವೇದನಾ ಸೊಸೈಟಿಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ ಹಾಗೂ ಮಂಜುಳಾ ರಾವ್ ಅವರು ಹಣ್ಣುಹಂಪಲು ವಿತರಿಸಿದರು.
ಈ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆ ಹಾಗೂ ನೇತೃತ್ವವನ್ನು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಅವರು ವಹಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ ಬಂಗೇರ, ರಾಜೇಂದ್ರ, ಕ್ಯಾ.ಬ್ರಿಜೇಶ್ ಚೌಟ, ಪ್ರಭಾ ಮಾಲಿನಿ, ಪೂರ್ಣಿಮ ರಾವ್, ಸಂಜಯ್ ಪ್ರಭು, ಭಾಸ್ಕರ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ವಸಂತ ಜೆ ಪೂಜಾರಿ, ದೇವೋಜಿ ರಾವ್, ಜನಾರ್ಧನ ಕುಡ್ವ, ರಮೇಶ್ ಹೆಗ್ಡೆ, ಅಜಯ್, ಗ್ಲಾಡ್ವಿನ್ ಡಿಸೋಜ, ಅನಿಲ್ ಕುಮಾರ್, ಲಲ್ಲೇಶ್, ಶ್ರೀನಿವಾಸ ಶೇಟ್, ಪ್ರದೀಪ್, ಕಿಶೋರ್ ಕೊಟ್ಟಾರಿ, ಗಿರೀಶ್ ಕೊಟ್ಟಾರಿ, ಉಪಸ್ಥಿತರಿದ್ದರು.
Leave A Reply