ಸೇಡು ತೀರಿಸಿಕೊಂಡ ಭಾರತೀಯ ಸೇನೆ, ಮೂವರು ಪಾಕಿಸ್ತಾನಿ ಸೈನಿಕರ ಹತ್ಯೆ
ಶ್ರೀನಗರ: ಕಳೆದ ಶನಿವಾರವಷ್ಟೇ ಗಡಿರೇಖೆ ನಿಯಮ ಉಲ್ಲಂಘಿಸಿ ದಾಳಿ ಮಾಡಿ ಭಾರತದ ನಾಲ್ವರು ಯೋಧರನ್ನು ಹತ್ಯೆ ಮಾಡಿದ್ದ ಪಾಕಿಸ್ತಾನಿ ಸೈನಿಕರ ವಿರುದ್ಧ ಭಾರತೀಯ ಸೇನೆ ಸೇಡು ತೀರಿಸಿಕೊಂಡಿದ್ದು, ಪಾಕಿಸ್ತಾನದ ಮೂವರು ಸೈನಿಕರನ್ನು ಹತ್ಯೆ ಮಾಡಿದೆ.
ಭಾರತ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದ್ದು, “ಅಪ್ರಚೋದಿತ ಗುಂಡಿನ ದಾಳಿ” ಎಂದು ಬೊಗಳೆಬಿಟ್ಟಿದ್ದು, ಮೂವರು ಯೋಧರು ಹತ್ಯೆಯಾಗಿ ಒಬ್ಬ ಯೋಧ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
ಡಿ.23ರಂದು ರಾಜೌರಿ ಜಿಲ್ಲೆ ವ್ಯಾಪ್ತಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನದ ಸೈನಿಕರು ದಾಳಿ ಮಾಡಿ ನಾಲ್ವರು ಯೋಧರು ಹುತಾತ್ಮರಾಗುವಂತೆ ಮಾಡಿದ್ದರು. ಮೇಜರ್ ಮೋಹರ್ಕರ್ ಪ್ರಫುಲ್ಲಾ ಅಂಬಾದಾಸ್, ಲಾನ್ಸ್ ನಾಯಕ್ ಗುರ್ಮೈಲ್ ಸಿಂಗ್, ಪರ್ಗತ್ ಸಿಂಗ್ ಹುತಾತ್ಮರಾಗಿದ್ದರು.
ಇದೇ ದಾಳಿಗೆ ಪ್ರತೀಕಾರವಾಗಿ ಭಾರತ ಪ್ರತಿದಾಳಿ ಮಾಡಿ ಮೂವರು ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಪ್ರಸಕ್ತ ವರ್ಷದ ಡಿ.10ರವರೆಗೆ ಗಡಿ ರೇಖೆ ನಿಯಮ ಉಲ್ಲಂಘಿಸಿ 771 ಬಾರಿ ಹಾಗೂ 110 ಬಾರಿ ಅಂತಾರಾಷ್ಟ್ರೀಯ ಗಡಿ ನಿಯಮ ಉಲ್ಲಂಘಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಇದಕ್ಕೆ ಭಾರತ ಪ್ರತಿದಾಳಿ ಮಾಡಿ ಪಾಠ ಕಲಿಸಿದರೂ ಪಾಕಿಸ್ತಾನ ಮಾತ್ರ ಇದುವರೆಗೆ ಬುದ್ಧಿ ಕಲಿತಿಲ್ಲ.
Leave A Reply