ನೋಯ್ಡಾಗೆ ಭೇಟಿ ನೀಡಿ ಇದುವರೆಗೆ ಇದ್ದ ಮೌಢ್ಯಕ್ಕೆ ಇತಿಶ್ರೀ ಹಾಡಿದ ಯೋಗಿ ಆದಿತ್ಯನಾಥ!
ದೆಹಲಿ: ರಾಜಕಾರಣಿಗಳಿಗೆ ಅಪಶಕುನದ ಪ್ರದೇಶ ಎಂದೇ ಬಿಂಬಿಸಲಾಗಿರುವ ನೋಯ್ಡಾಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭೇಟಿ ನೀಡುವ ಮೂಲಕ ಇದುವರೆಗೆ ಇದ್ದ ಮೌಢ್ಯಕ್ಕೆ ಇತಿಶ್ರೀ ಹಾಡಿದ್ದಾರೆ.
ದೆಹಲಿಯ ಮೆಜೆಂತಾ ಮೆಟ್ರೋ ರೈಲ್ವೆ ಸ್ಟೇಷನ್ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಗೌತಮಬುದ್ಧ ನಗರ ಜಿಲ್ಲೆಯಲ್ಲಿರುವ ಕಲ್ಕಜಿ ಮಂದಿರ್ ಬೊಟ್ಯಾನಿಕಲ್ ಗಾರ್ಡನ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಯೋಗಿ ಆದಿತ್ಯನಾಥರು ನೋಯ್ಡಾಗೆ ಭೇಟಿ ನೀಡಿದರು.
ನೋಯ್ಡಾಗೆ ಭೇಟಿ ನೀಡುವ ಮುಖ್ಯಮಂತ್ರಿಗಳು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಹಾಗೂ ಎಂದಿಗೂ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ನಂಬಿಕೆ ಇದುವರೆಗೆ ಇದೆ. ಆದರೆ ಆ ಮೂಢನಂಬಿಕೆಯನ್ನು ಯೋಗಿ ಆದಿತ್ಯನಾಥರು ಮುರಿದಿದ್ದಾರೆ.
ನಾನು ಒಮ್ಮೆ ನೋಯ್ಡಾ ಪ್ರದೇಶಕ್ಕೆ ಭೇಟಿ ನೀಡಿದರೆ ಬೇರೆಯವರಲ್ಲೂ ಇರುವ ಮೂಢನಂಬಿಕೆ ದೂರವಾಗುತ್ತದೆ. ಹಾಗಾಗಿ ನಾನು ಇಲ್ಲಿಗೆ ಆಗಾಗ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಇದುವರೆಗೂ ಯಾವುದೇ ಮುಖ್ಯಮಂತ್ರಿ ನೋಯ್ಡಾಗೆ ಭೇಟಿ ನೀಡಿರಲಿಲ್ಲ. ಆದರೆ ಯೋಗಿ ಆದಿತ್ಯನಾಥರು ಆ ಮೌಢ್ಯವನ್ನು ಅಳಿಸಿಹಾಕಿದ್ದು ಸಂತೋಷ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಯೋಗಿ ಆದಿತ್ಯನಾಥರ ನಡೆಯನ್ನು ಶ್ಲಾಘಿಸಿದ್ದಾರೆ.
Leave A Reply