ಮಹಾರಾಷ್ಟ್ರ ಸರ್ಕಾರದ ದಿಟ್ಟ ಕ್ರಮ, ಶೇ.70 ರಷ್ಟು ಗೋ ಅಕ್ರಮ ಸಾಗಣೆ ಇಳಿಕೆ
ಮುಂಬೈ: ಎರಡು ವರ್ಷದಿಂದ ಬಿಜೆಪಿ ಆಡಳಿತದಲ್ಲಿರುವ ಮಹರಾಷ್ಟ್ರ ಸರ್ಕಾರದ ಗೋ ರಕ್ಷಣೆ ಕಾಯ್ದೆ ಜಾರಿ ಮತ್ತು ಗೋ ರಕ್ಷಣೆಗೆ ಕೈಗೊಂಡ ದಿಟ್ಟ ನಿರ್ಧಾರದಿಂದ ಎರಡು ವರ್ಷದಿಂದ ಮಹಾರಾಷ್ಟ್ರದಲ್ಲಿ ಶೇ.70 ರಷ್ಟು ಗೋ ಅಕ್ರಮ ಸಾಗಣೆಯಲ್ಲಿ ಇಳಿಕೆಯಾಗಿದೆ. ಸರ್ಕಾರ ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದು ಮತ್ತು ಪ್ರಾಣಿ ಹತ್ಯೆ ತಡೆ ಕಾಯ್ದೆ ಅಡಿಯಲ್ಲಿ ಹಲವರ ವಿರುದ್ಧ ದೂರು ದಾಖಲಿಸಿದ್ದರಿಂದ ಎರಡು ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
2016ರಕ್ಕೆ ಹೋಲಿಸಿದರೇ 2017ಕ್ಕೆ ಶೇ.70ರಷ್ಟು ಗೋ ಅಕ್ರಮ ಸಾಗಣೆ ಪ್ರಮಾಣ ಕಡಿಮೆಯಾಗಿದೆ. 2017ರಲ್ಲಿ 2.617 ಗೋವುಗಳನ್ನು ಸರ್ಕಾರ ರಕ್ಷಿಸಿದೆ. 2016ರಲ್ಲಿ 15.250 ಮತ್ತು 2015ರಲ್ಲಿ 6.056 ಗೋವುಗಳನ್ನು ಮಹಾರಾಷ್ಟ್ರ ಪೊಲೀಸರು ರಕ್ಷಣೆ ಮಾಡಿದ್ದರು. ಗೋ ರಕ್ಷಣೆ ವಿಷಯದಲ್ಲಿ ಸರ್ಕಾರದ ಕಟ್ಟುನಿಟ್ಟಿನ ನಿರ್ಧಾರದಿಂದ ಗೋ ರಕ್ಷಕರ ಕಾಟವು ಕಡಿಮೆಯಾಗಿದ್ದು, ಅವರ ಮೇಲೂ ಪೊಲೀಸರು ಕಣಿಟ್ಟಿದ್ದಾರೆ.
ಗೋ ರಕ್ಷಣೆ ಕಾಯ್ದೆ ಅಡಿಯಲ್ಲಿ 2017ರಲ್ಲಿ ಅಕ್ರಮ ಗೋ ಸಾಗಣೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ 417 ಜನರನ್ನು ಬಂಧಿಸಲಾಗಿದೆ, 2016ರಲ್ಲಿ 1,819 ಜನರನ್ನು ಬಂಧಿಸಲಾಗಿದೆ, ಅಲ್ಲದೇ 2015ರಲ್ಲಿ 1,366 ಜನರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಗೋ ಅಕ್ರಮ ಸಾಗಣೆ ಕಾಯ್ದೆ ದುರ್ಬಳಕೆಯಾಗಬಾರದು. ಕಾಯ್ದೆ ನೆಪದಲ್ಲಿ ವ್ಯಾಪಾರಿಗಳನ್ನು ವಿನಾಕಾರಣ ಬಂಧಿಸುವುದು, ವಿಚಾರಣೆ ನಡೆಸುವುದು ಮಾಡಬಾರದು. ಅವರು ಗೋ ಸಾಗಣೆ ಮಾಂಸಕ್ಕಾಗಿ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ ಅಧಿಕಾರಿ ತಿಳಿಸಿದ್ದಾರೆ.
Leave A Reply