ಆರ್ ಎಸ್ ಎಸ್ ಕಚೇರಿ ಮೇಲೆ ಸಿಪಿಐ(ಎಂ) ಕಾರ್ಯಕರ್ತರಿಂದ ದಾಳಿ
ಕೊಟ್ಟಾಯಂ: ಕೇರಳದಲ್ಲಿ ಹಿಂದೂ ಕಾರ್ಯಕರ್ತರ, ಹಿಂದೂ ಸಂಘಟನೆಗಳ ಮತ್ತು ಹಿಂದೂ ಸಂಘಟನೆಗಳ ಕಚೇರಿ ಮೇಲೆ ಕೆಂಪು ಉಗ್ರರು ತಮ್ಮ ದೌರ್ಜನ್ಯವನ್ನು ಮುಂದುವರಿಸಿದ್ದಾರೆ. ಸೋಮವಾರ ನಸುಕಿನ ಜಾವದಲ್ಲಿ ಎತ್ತುಮನ್ನೂರ್ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಮೇಲೆ ಸಿಪಿಐ(ಎಂ) ಕಾರ್ಯಕರ್ತರು ದಾಳಿ ಮಾಡಿ, ಪೀಠೋಪಕರಣಗಳನ್ನು ನಾಶ ಮಾಡಿದ್ದಾರೆ.
ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಸಿಪಿಐ(ಎಂ) ಕಾರ್ಯಕರ್ತರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಮೇಲೆ ದಾಳಿ ಮಾಡಿದ್ದಾರೆ ಎಂದು ಆರ್ ಎಸ್ ಎಸ್ ಮುಖಂಡರು ಆರೋಪಿಸಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ, ಕಚೇರಿಗಳ ಮೇಲಿನ ದಾಳಿಯಂತೆ ಇಲ್ಲೂ ಆರ್ ಎಸ್ ಎಸ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ ಎಂದು ಆರ್ ಎಸ್ ಎಸ್ ಮುಖಂಡರು ಆರೋಪಿಸಿದ್ದಾರೆ.
ಆರ್ ಎಸ್ ಎಸ್ ಮೆರೆಗೆ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಚೇರಿ ಸುಟ್ಟಿರುವ ಆರೋಪವನ್ನು ಸಿಪಿಐ(ಎಂ) ನಿರಾಕರಿಸಿದೆ. ಆರ್ ಎಸ್ ಎಸ್ ಉದ್ದೇಶಪೂರ್ವಕವಾಗಿ ಇಂತಹ ಆರೋಪ ಮಾಡುತ್ತಿದೆ. ಆರ್ ಎಸ್ ಎಸ್ ಕಚೇರಿ ಮೇಲಿನ ದಾಳಿಗೂ ಸಿಪಿಐ(ಎಂ)ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಚೇರಿ ಮೇಲಿನ ದಾಳಿ ವಿರೋಧಿಸಿ ಹಿಂದೂಪರ ಸಂಘಟನೆಗಳು ಹರತಾಳವನ್ನು ಹಮ್ಮಿಕೊಂಡಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಎತ್ತುಮನ್ನೂರ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Leave A Reply