ವಿದೇಶಿ ದೇಣಿಗೆ ಪಡೆದು ಅಸಹಿಷ್ಣು ನಾಟಕವಾಡುತ್ತಿದ್ದ ಎನ್ ಜಿಓಗಳಿಗೆ ಕೇಂದ್ರದ ಭಾರಿ ಹೊಡೆತ
ದೆಹಲಿ: ವಿದೇಶಿ ದೇಣಿಗೆ ಪಡೆದು ದೇಶದ ವಿರುದ್ಧವೇ ಷಡ್ಯಂತ್ರ ಹೂಡುತ್ತಿದ್ದ ಸರ್ಕಾರೇತರ ಸಂಸ್ಥೆ (ಎನ್ ಜಿಒ)ಗಳಿಗೆ ಕೇಂದ್ರ ಸರ್ಕಾರ ಮೂಗುದಾರ ಹಾಕಲು ನಿರ್ಧರಿಸಿದೆ. ವಿದೇಶಿ ದೇಣಿಗೆ ಸ್ವೀಕರಿಸುವ ಹಣವನ್ನು ಎಫ್ ಸಿಆರ್ ಎ 2010 ಕಾಯ್ದೆ ಪ್ರಕಾರ ಸೂಚಿಸಿರುವ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ಹಣ ಸಂಗ್ರಹಿಸಬೇಕು ಎಂದು ಕೇಂದ್ರ ಸರ್ಕಾರ ಸರ್ಕಾರೇತರ ಸಂಸ್ಥೆಗಳಿಗೆ ಸೂಚಿಸಿದೆ.
ಸಾರ್ವಜನಿಕ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ ಎನ್ ಜಿ ಓಗಳ ಹಣಕಾಸು ವ್ಯವಹಾರವನ್ನು ಮುಖ್ಯವಾಹಿನಿಗೆ ತರಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ಎಲ್ಲ ಎನ್ ಜಿ ಓ ಗಳಿಗೆ ನೋಟಿಸ್ ನೀಡಿದ್ದು, ಖಾತೆ ತೆರೆಯಲು ಒಂದು ತಿಂಗಳು ಕಾಲಾವಕಾಶ ನೀಡಲು ಸೂಚಿಸಿದೆ.
ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಈ ನಿರ್ಧಾರ ಕೈಗೊಂಡಿದೆ. ವಿದೇಶಿ ದೇಣಿಗೆ ಕಾಯ್ದೆ 2010 ಪ್ರಕಾರ ಈ ನಿಯಮ ಜಾರಿಗೆ ತರಲಾಗಿದ್ದು, ವಿದೇಶಿ ಸಹಾಯಧನ ಪಡೆಯುವ ಕಂಪೆನಿಗಳು, ಎಜ್ ಜಿಓಗಳು, ಸಂಘಟನೆಗಳು ಈ ನಿಯಮದ ವ್ಯಾಪ್ತಿಗೆ ಬರುತ್ತಿದ್ದು, ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ ಹಣ ಬಳಸುತ್ತಿರುವುದರಿಂದ ಈ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ 32 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾತ್ರ ಒಂದು ತಿಂಗಳಲ್ಲಿ ಖಾತೆ ತೆರೆಯಲು ಸೂಚನೆ ನೀಡಿದೆ.
ಈ ನಿರ್ಧಾರದಿಂದ ಎಜ್ ಜಿಓಗಳ ಹಣಕಾಸಿನ ವ್ಯವಹಾರದ ಮೇಲೆ ಕಣ್ಗಾವಲು ಇಡಲು ಅನುಕೂಲವಾಗಲಿದ್ದು, ಎನ್ ಜಿಓಗಳ ಯೋಜನೆಗಳು, ದಾಖಲೆಗಳನ್ನು ಸಂಗ್ರಹಿಸಲು ಮತ್ತು ಕೋರ್ ಬ್ಯಾಂಕಿಂಗ್ ಗೂ ಸಹಾಯಕವಾಗಲಿದೆ. ಅಲ್ಲದೇ ಎಜ್ ಜಿಓಗಳು ಒಂದೇ ವ್ಯವಸ್ಥೆಯ ಅಡಿಯಲ್ಲಿ ಬರುವುದರಿಂದ ಆಡಳಿತಕ್ಕೂ ಅನುಕೂಲವಾಗಲಿದೆ.
ಇನ್ನು ಈ ನಿರ್ಧಾರಿಂದ ವಿದೇಶಗಳಿಂದ ಬೇಕಾಬಿಟ್ಟಿಯಾಗಿ ಹಣ ಪಡೆದು, ದೇಶದ ವಿರುದ್ಧವೇ ಷಡ್ಯಂತ್ರ ಮಾಡುತ್ತಿರುವ ಎಜ್ ಜಿಓಗಳಿಗೆ ಭಾರಿ ಹೊಡೆತ ಬಿದ್ದಿದೆ. ದೇಶದಲ್ಲಿ ಅಶಾಂತಿ ಸೃಷ್ಟಿಸುವಲ್ಲಿ ಕೆಲ ವಿದೇಶಿ ದೇಣಿಗೆ ಆಶ್ರಯಿತ ಎನ್ ಜಿಓಗಳು ಷಡ್ಯಂತ್ರ ರೂಪಿಸುತ್ತಿದ್ದವು, ಇದೀಗ ಅವುಗಳಿಗೆ ಭಾರಿ ಹೊಡೆತ ಬಿದ್ದಿದೆ.
Leave A Reply