ಭಗವದ್ಗೀತೆ ಕುರಿತು ಈ ಹಾಲಿವುಡ್ ನಟರಿಗಿರುವ ಗೌರವ, ನಂಬಿಕೆ ಭಗವಾನರಿಗೇಕಿಲ್ಲ?
ದೆಹಲಿ: ನಮ್ಮ ದೇಶದಲ್ಲಿ ಪ್ರಚಾರಕ್ಕಾಗಿ ಯಾವ ಹೇಳಿಕೆ ಬೇಕಾದರೂ ನೀಡುತ್ತಾರೆ. ರಾಮನ ತಂದೆಯನ್ನು ಪ್ರಶ್ನಿಸುತತಾರೆ, ಭಗವದ್ಗೀತೆ ಸುಟ್ಟು ಹಾಕುತ್ತೇನೆ ಎಂದು ಸೋಕಾಲ್ಡ್ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಹೇಳುತ್ತಾರೆ.
ಆದರೆ ಇದೇ ನಮ್ಮ ಭಗವದ್ಗೀತೆ ಹಾಲಿವುಡ್ ಖ್ಯಾತ ನಟ ವಿಲ್ಸ್ ಸ್ಮಿತ್ ಅವರಿಗೆ ಸ್ಫೂರ್ತಿಯಂತೆ. ಹಾಗೆಂದು ಅವರೇ ಹೇಳಿದ್ದಾರೆ.
ಹೌದು, ಇತ್ತೀಚೆಗೆ ಮುಂಬೈಗೆ ಆಗಮಿಸಿದ್ದ ವಿಲ್ಸ್ ಸ್ಮಿತ್, ಬಾಲಿವುಟ್ ನಟ ಅಕ್ಷಯ್ ಕುಮಾರ್ ಏರ್ಪಟಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಿದ್ದರು. ಆತಿಥ್ಯ ಸ್ವೀಕರಿಸಿದ ಬಳಿಕ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ನಾನು ಭಗವದ್ಗೀತೆಯಿಂದ ಶೇ.90ರಷ್ಟು ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ.
ಭಗವದ್ಗೀತೆ ನನ್ನ ಮೆಚ್ಚಿನ ಪುಸ್ತಕವಾಗಿದ್ದು, ದೇಶದ ಇತಿಹಾಸ ತಿಳಿಸಿದೆ. ಅಲ್ಲದೆ, ನನ್ನೊಳಗೊಬ್ಬ ಅರ್ಜುನ ಇದ್ದಾನೆ ಎಂಬುದು ಗ್ರಂಥ ಓದಿದ ಮೇಲೆಯೇ ಗೊತ್ತಾಯಿತು ಎಂದು ತಿಳಿಸಿದ್ದಾರೆ.
ಜತೆಗೆ ಭಾರತದ ಆಹಾರ ನನಗೆ ತುಂಬ ಹಿಡಿಸಿದ್ದು, ಶೀಘ್ರವೇ ರಿಷಿಕೇಶ್ ಗೆ ತೆರಳುತ್ತೇನೆ ಎಂದು ಮಾಹಿತಿ ನೀಡಿದ್ದಾರೆ. ಇದುವರೆಗೆ ಹಲವು ಬಾರಿ ವಿಲ್ಸ್ ಸ್ಮಿತ್ ಭಾರತಕ್ಕೆ ಬಂದಿದ್ದಾರೆ.
ವಿಲ್ಸ್ ಸ್ಮಿತ್ ಹಾಲಿವುಡ್ ಖ್ಯಾತ ನಟರಾಗಿದ್ದು, ದಿ ಪರ್ಸ್ಯುಟ್ ಆಫ್ ಹ್ಯಾಪಿನೆಸ್, ಐ ಆ್ಯಮ್ ಲಿಜೆಂಡ್, ಹಿಚ್ ಸೇರಿ ಹಲವು ಹಿಟ್ ಚಿತ್ರ ನೀಡಿದ ಖ್ಯಾತಿ ಹೊಂದಿದ್ದಾರೆ.
ಸಾಗರದಾಚೆ ಇರುವ, ವಿಚಿತ್ರ ಸಂಸ್ಕೃತಿ, ಆಚಾರ-ವಿಚಾರ ಹೊಂದಿರುವ ಹಾಲಿವುಡ್ ನಟರಿಗೇ ನಮ್ಮ ಭಗವದ್ಗೀತೆ ಸ್ಫೂರ್ತಿಯಾಗುತ್ತದೆ ಎಂದರೆ, ನಮ್ಮ ದೇಶದಲ್ಲೇ ಇದ್ದು, ನಮ್ಮದೇ ಮಹಾನ್ ಗ್ರಂಥದ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದರೆ ಮನಸ್ಸು ಎಷ್ಟು ಕುತ್ಸಿತವಿರಬಹುದು? ಯೋಚಿಸಿ.
Leave A Reply