• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಐಸ್ ಕ್ಯಾಂಡಿ ತಿಂದು ತಂಪಾದ ಸಚಿವರು ಮಧ್ಯಮ ವರ್ಗದವರ ಬಗ್ಗೆ ಯೋಚಿಸಿದ್ದಕ್ಕೆ ಥ್ಯಾಂಕ್ಸ್!

Hanumantha Kamath Posted On December 26, 2017


  • Share On Facebook
  • Tweet It

ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ಅವರು ಚುನಾವಣೆಗೆ ಪಕ್ಷವನ್ನು ಕಟ್ಟುವ ಗಡಿಬಿಡಿಯಲ್ಲಿ ತಮಗೊಂದು ಖಾತೆ ಇದೆ ಎನ್ನುವುದನ್ನು ಮರೆತುಬಿಟ್ಟಿದ್ದರೇನೋ ಎಂದು ಅಂದುಕೊಂಡಿದ್ದೆ. ಅದಲ್ಲದೆ ಖಾದರ್ ಅವರು ಮೊನ್ನೆ ಉಳ್ಳಾಲದಲ್ಲಿ ಐಸ್ ಕ್ಯಾಂಡಿ ತಿನ್ನುತ್ತಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ನೋಡಿ ಮಧ್ಯಮ ವರ್ಗದವರಿಗೆ ಐದು ಕಿಲೋ ಅಕ್ಕಿ, ಐದು ಕಿಲೋ ಗೋಧಿ ಕೊಡುವುದನ್ನು ಮರೆತು ಬಿಟ್ಟಿರುವುದು ಗ್ಯಾರಂಟಿ ಎಂದು ಅನಿಸಿತು. ಆ ನಿಟ್ಟಿನಲ್ಲಿ ಅವರನ್ನು ಹುಡುಕಿಕೊಂಡು ಹೋಗಿ ಮನವಿ ಕೊಟ್ಟು ಅವರು ಅದನ್ನು ಓದಿದ ಹಾಗೆ ಮಾಡಿ, ಪಿಎಗಳಿಗೆ ಕೊಟ್ಟು ಕೈ ತೊಳೆದುಬಿಡುವುದರಿಂದ ನನ್ನ ಸಮಯವೂ ಹಾಳು, ಅವರ ಸಮಯವೂ ಹಾಳು ಎಂದು ಅಂದುಕೊಂಡು ಎಪಿಎಲ್ ಕಾರ್ಡ್ ನವರ ಬಗ್ಗೆನೂ ಸಚಿವರು ಪ್ರೀತಿ ತೋರಬೇಕು ಎನ್ನುವ ಅರ್ಥದ ಜಾಗೃತಿ ಅಂಕಣ ಫೇಸ್ ಬುಕ್ಕಿನಲ್ಲಿ ಬರೆದಿದ್ದೆ. ಅದಕ್ಕೆ ಸ್ಪಂದನೆ ಸಿಕ್ಕಿದಂತೆ ತೋರುತ್ತಿದೆ. ಎಪಿಎಲ್ ಕಾರ್ಡ್ ನವರಿಗೂ ಐದು ಕಿಲೋ ಅಕ್ಕಿ, ಐದು ಕಿಲೋ ಗೋಧಿ ಸಿಗುವುದಕ್ಕೆ ಪ್ರಾರಂಭವಾಗಿದೆ. ಸುದ್ದಿಗೋಷ್ಟಿ ಮಾಡಿ ತನ್ನ ಸರಕಾರವನ್ನು ಡಿಫೆಂಡ್ ಮಾಡುವ ಭರದಲ್ಲಿ, ಐಸ್ ಕ್ಯಾಂಡಿ ತಿಂದು, ಮೈದಾನದಲ್ಲಿ ಹುಡುಗರೊಂದಿಗೆ ಕ್ರಿಕೆಟ್ ಆಡಿ ಹೀಗೆ ಜನರನ್ನು ಸೆಳೆದಿಡುವ ನಡುವೆ ಕೂಡ ಖಾದರ್ ಅವರು ಎಪಿಎಲ್ ಕಾರ್ಡ್ ನವರ ಬಗ್ಗೆ ಯೋಚಿಸಿ ಅವರು ಕೂಡ ನಮ್ಮ “ಮತದಾರರು” ಎಂದು ಅಂದುಕೊಂಡದ್ದಕ್ಕೆ ಅವರಿಗೆ ಥ್ಯಾಂಕ್ಸ್.

ಇನ್ನು ಇರುವ ನಾಲ್ಕು ತಿಂಗಳಲ್ಲಿ ಅವರು ನಮ್ಮಂತವರಿಗೆ ಅಕ್ಕಿ, ಗೋಧಿ ಕೊಡುವುದು ನಿಲ್ಲಿಸಲಾರರು ಎನ್ನುವ ಭರವಸೆ ಇದೆ. ಅವರು ನಿಲ್ಲಿಸಿದರೆ ಅವರ ಪಕ್ಷ ಮಲಗುತ್ತದೆ ಎನ್ನುವ ಅರಿವು ಅವರಿಗೆ ಇರುವುದರಿಂದ ಐದು ಕಿಲೋ ಮಾತ್ರವಲ್ಲ, ಕೇಳಿದ್ರೆ ಹತ್ತು ಕಿಲೋ ಬೇಕಾದರೆ ಕೊಡಿ ಎನ್ನುವ ಮಟ್ಟಿಗೆ ಸರಕಾರ ಉದಾರಿ ಆದರೂ ಆಗಬಹುದು. ಇನ್ನು ಅನ್ನಭಾಗ್ಯದ ಅಕ್ಕಿ ಯಥಾಪ್ರಕಾರ ಜನರಿಗೆ ಸಿಗುತ್ತಿದೆ. ಯಾಕೆಂದರೆ ಅದರಲ್ಲಿ ರಾಜ್ಯ ಸರಕಾರಕ್ಕೆ ಖರ್ಚು ಕಡಿಮೆ, ಪಬ್ಲಿಸಿಟಿ ಜಾಸ್ತಿ. ನಿಮಗೆ ನಿತ್ಯ ಊಟಕ್ಕೆ ಫ್ರೀಯಾಗಿ ಅನ್ನ, ಸಾರು ನಾವು ಕೊಡುತ್ತೇವೆ, ಒಂದು ಚಮಚಾ ಉಪ್ಪಿನಕಾಯಿ ನೀವೆ ತರಬೇಕು ಎಂದು ನಿಮಗೆ ಯಾರಾದರೂ ಹೇಳಿದರೆ ನೀವು ಬೇಡಾ ಅನ್ನುತ್ತೀರಾ, ಇಲ್ವಲ್ವಾ. ಅನ್ನಭಾಗ್ಯ ಕೂಡ ಹಾಗೆ. 29 ರೂಪಾಯಿ ಕೇಂದ್ರ ಕೊಟ್ಟು 3 ರೂಪಾಯಿ ರಾಜ್ಯ ಸರಕಾರ ಸೇರಿಸಿ ಆ ಅಕ್ಕಿ ಬಡಬಗ್ಗರಿಗೆ ಹಂಚಿ ಆ ಫೋಟೊ ತೆಗೆದು ನಾವು ಬಡವರ ಬಂಧುಗಳು ಎಂದು ಹಾಡಿದರೆ ಕೇಳುವವನಿಗೆ ಕಿವಿ ಮೇಲೆ ಕದ್ರಿ ಪಾರ್ಕ್ ಇಟ್ಟ ಹಾಗೆ ಖುಷಿಯಾಗುತ್ತದೆ. ಅದು ಬಿಡಿ. ಅದು ಅವರವರ ರಾಜಕೀಯ.
ಆದರೆ ಎಪಿಎಲ್ ನವರಿಗೆ ಅಕ್ಕಿ, ಗೋಧಿ ಸಿಗುವುದು ನಿಂತು ಹೋಗಿದೆ ಎಂದು ನಾನು ಇತ್ತೀಚೆಗೆ ಬರೆದಾಗ ಅವು ಸಿಗದೆ ಮೂರ್ನಾಕು ತಿಂಗಳು ಕಳೆದು ಹೋಗಿತ್ತು. ಅದರ ಮೊದಲು ಐದು ಕಿಲೋ ಅಕ್ಕಿ, ಐದು ಕಿಲೋ ಗೋಧಿ ಎಪಿಎಲ್ ನವರಿಗೆ ಸಿಗುತ್ತಿತ್ತು. ಒಂದು ವೇಳೆ ಗೋಧಿ ಇಲ್ಲದಿದ್ದರೆ ಹತ್ತು ಕಿಲೋ ಅಕ್ಕಿಯನ್ನು ಕೊಡುತ್ತಿದ್ದರು. ಮನೆಯಲ್ಲಿ ದೋಸೆ, ಇಡ್ಲಿ ಮಾಡುವಾಗ ಈ ಅಕ್ಕಿ ಉಪಯೋಗಕ್ಕೆ ಬೀಳುತ್ತಿತ್ತು. ಕಿಲೋಗೆ ಹದಿನೈದು ರೂಪಾಯಿಗೆ ಅಕ್ಕಿ ಸಿಗುವಾಗ ಊಟಕ್ಕೆ ಅಲ್ಲದಿದ್ದರೂ ತಿಂಡಿ ಮಾಡಲು ಅನುಕೂಲಕರವಾಗಿತ್ತು. ಹಾಗೆ ಗೋಧಿ ಕಿಲೋಗೆ ಹತ್ತು ರೂಪಾಯಿಗೆ ಸಿಗುವುದರಿಂದ ಪಾಪದವರಿಗೆ ಉಪಯೋಗ ಆಗಿತ್ತು. ಆದರೆ ಅದನ್ನು ನಿಲ್ಲಿಸಿದ ನಂತರ ಎರಡ್ಮೂರು ತಿಂಗಳು ಯಾರೂ ಕೂಡ ಮಾತನಾಡದೆ ಇದ್ದ ಕಾರಣ ಒಂದು ತಿಂಗಳು ಕಾದು ನಾನೇ ಬರೆದುಬಿಟ್ಟೆ. ನನ್ನ ವಿನಂತಿ ಏನೆಂದರೆ ಈ ಸಾಮಾಜಿಕ ತಾಣಗಳನ್ನು ಬಳಸುವ ಯುವ ಮಿತ್ರರು, ಹಿರಿಯರು, ನಿಮ್ಮ ಸಂತೋಷದ ಕ್ಷಣಗಳ ಫೋಟೋಗಳನ್ನು ಅಪ್ ಲೋಡ್ ಮಾಡಿ ಅದಕ್ಕೆ ಲೈಕ್, ಕಮೆಂಟ್ ಬರುವುದನ್ನು ಕಾಯುವುದು ತಪ್ಪಲ್ಲ. ಆದರೆ ನಾಲ್ಕು ಅಂತಹ ಗಮ್ಮತ್ತಿನ ಫೋಟೊಗಳನ್ನು ಹಾಕುವುದರ ನಡುವೆ ಒಂದು ಜನೋಪಯೋಗಿ ವಿಷಯದ ಬಗ್ಗೆ ಬರೆದು, ಅದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಕೂಡ ಪೋಸ್ಟ್ ಮಾಡಿ. ಜನರ ಸಮಸ್ಯೆಗಳ ಬಗ್ಗೆ ಚಿಕ್ಕದಾಗಿ ಬರೆದು ಆ ಮೂಲಕ ಶಾಸಕರ, ಸಚಿವರ, ಸಂಸದರ ಗಮನ ಸೆಳೆಯುವ ಪ್ರಯತ್ನ ಮಾಡಿ. ನಿಮ್ಮ ಏರಿಯಾದ ಸಮಸ್ಯೆಗಳನ್ನು ಬರೆದು, ಫೋಟೋ ಹಾಕಿ ವಾರ್ಡಿನ ಕಾರ್ಪೋರೇಟರ್, ತಾಲೂಕು, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರ ಗಮನವನ್ನಾದರೂ ಸೆಳೆಯಿರಿ. ಸಾಮಾಜಿಕ ತಾಣಗಳು ಈ ಮೂಲಕ ಉಪಯೋಗಕ್ಕೆ ಬೀಳಲಿ. 2017 ಮುಗಿಯಲು ನಾಲ್ಕು ದಿನಗಳಿವೆ. 2018 ರಿಂದ ನೀವು ಫೇಸ್ ಬುಕ್, ಟ್ವಿಟರ್, ವಾಟ್ಸ್ ಅಪ್ ನಲ್ಲಿ ಇದ್ದಿರಿ ಎಂದಾದರೆ ” ನಾನು ಟೂರ್ ಗೆ ಹೋದ, ಪಾರ್ಟಿ ಮಾಡಿದ, ಸಭೆ, ಸಮಾರಂಭದಲ್ಲಿ ಭಾಗವಹಿಸಿದ ಫೋಟೋಗಳಿಗಿಂತ ಊರು, ರಾಜ್ಯ, ದೇಶದ ಸಮಸ್ಯೆ ಮತ್ತು ಬಗೆಹರಿಸುವಂತಹ ವಿಷಯಗಳನ್ನು ಬರೆದು ಅದನ್ನು ಪರಿಹರಿಸಲು ಸಣ್ಣ ಪ್ರಯತ್ನವನ್ನು ಮಾಡುತ್ತೇನೆ” ಎಂದು ನಿರ್ಧರಿಸಿ. ಆ ಮೂಲಕ ಯಾರೋ ಪುಣ್ಯಾತ್ಮ ಸೃಷ್ಟಿಸಿದ ಸಾಮಾಜಿಕ ತಾಣಗಳ ಸದುಪಯೋಗ ಮಾಡೋಣ.

ನಾಳೆಯಿಂದ ನಾನು ವರ್ಷಾಂತ್ಯದ ತನಕ ನನ್ನ ಕನಸಿನ ಮಂಗಳೂರು ಎನ್ನುವ ವಿಷಯದ ಕುರಿತು ಬರೆಯಬೇಕು ಎಂದು ನಿರ್ಧರಿಸಿದ್ದೇನೆ. ನೀವು ಕೂಡ ಮಂಗಳೂರಿನವರಾದರೆ ನಿಮ್ಮ ಕನಸು ಕೂಡ ಬರೆದು ಹಾಕಿ. ಮನೆಯೊಳಗೆ ಕುಳಿತು ಅವರು ಸರಿಯಿಲ್ಲ, ಇವರು ಸರಿಯಿಲ್ಲ ಎಂದು ಗೊಣಗುವುದಕ್ಕಿಂತ ಫ್ರೀ ಇದ್ದಾಗ ಈ ಮೂಲಕವಾದರೂ ಏನಾದರೂ ಬದಲಾವಣೆಗೆ ಪ್ರಯತ್ನಿಸೋಣ. ನೀವು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಥವಾ ಕಮ್ಯೂನಿಸ್ಟ್ ಯಾವುದೇ ಪಕ್ಷಕ್ಕೆ ಮತ ಕೊಡುವವರು ಆಗಿರಲಿ, ನಿಮ್ಮ ಊರು ಚೆನ್ನಾಗಿರಬೇಕು ಎನ್ನುವ ಆಸೆ ನಿಮಗೆ ಇದೆ ತಾನೇ. ವೋಟ್ ಕೊಟ್ಟು ಬಂದ ಕೂಡಲೇ ಎಲ್ಲವೂ ಸರಿಯಾಗಲ್ಲ. ನೀವು ಯಾವ ರೀತಿಯ ನಗರ, ಪರಿಸರ ಬಯಸುತ್ತೀರಿ ಎನ್ನುವುದು ಕೂಡ ನೀವು ಆಯ್ಕೆ ಮಾಡುವವರಿಗೆ ಗೊತ್ತಿರಬೇಕು. ಆ ನಿಟ್ಟಿನಲ್ಲಿ ಬದಲಾವಣೆ ಪ್ರಾರಂಭವಾಗಲಿ. 2018 ರ ಫ್ರೀ ಸಮಯವನ್ನು ಸದುಪಯೋಗ ಪಡಿಸಿದ್ದೇನೆ ಎನ್ನುವ ತೃಪ್ತಿ ನಿಮ್ಮದಾಗಲಿ, ಏನಂತೀರಿ.?

  • Share On Facebook
  • Tweet It


- Advertisement -


Trending Now
ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
Hanumantha Kamath June 1, 2023
ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
Hanumantha Kamath May 31, 2023
Leave A Reply

  • Recent Posts

    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
  • Popular Posts

    • 1
      ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • 2
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 3
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 4
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 5
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search